ಮಂಗಳೂರು: ಖಾಸಗಿ ರಂಗದ ಇಂಡಿಗೋ ಏರ್‌ಲೈನ್ಸ್ ವತಿಯಿಂದ ಮುಂಬಯಿ – ಮಂಗಳೂರು – ಮುಂಬಯಿ ನಡುವೆ ಹೊಸ ವಿಮಾನ ಸೇವೆ ಭಾನುವಾರದಿಂದ ಆರಂಭಗೊಂಡಿದೆ. ಎರಡು ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಿದ್ದ ವಿಮಾನ ಇನ್ನು ಪ್ರತಿದಿನ ಸಂಚಾರ ನಡೆಸಲಿದೆ.
ವಿಮಾನ ಸಂಖ್ಯೆ 6ಇ-5236 ಮುಂಬಯಿಯಿಂದ ಬೆಳಗ್ಗೆ 8.50ಕ್ಕೆ ಹೊರಟು 10.20ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ. 6ಇ -5237 ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಟೇಕಾಫ್ ಆಗಿ ಮಧ್ಯಾಹ್ನ 12.40ಕ್ಕೆ ಮುಂಬಯಿಯಲ್ಲಿ ಲ್ಯಾಂಡ್ ಆಗಲಿದೆ. ಈ ಹೊಸ ಸೇವೆಗೆ ಇಂಡಿಗೋ ಏರ್‌ಬಸ್ ಎ-320 ಮಾದರಿಯ ವಿಮಾನ ಬಳಸುತ್ತಿರುವುದು ವಿಶೇಷವಾಗಿದೆ. ಈ ನಡುವೆ ಇಂಡಿಗೋ ಸಂಸ್ಥೆ ಮಧ್ಯಾಹ್ನ ಬಳಿಕ ಮುಂಬಯಿ- ಮಂಗಳೂರು -ಮುಂಬಯಿ ನಡುವೆ ಸೇವೆ ನೀಡುತ್ತಿದ್ದ 6ಇ -6348/6ಇ 6349 ಸಂಚಾರವನ್ನು ಹಿಂಪಡೆದಿದೆ.
ಶುಕ್ರವಾರದಿಂದ ವಿಮಾನದ ಪ್ರಾಯೋಗಿಕ ಕಾರ್ಯಾಚರಣೆ ಆರಂಭವಾಗಿತ್ತು. ಜೂನ್ 17 ರಂದು ಪ್ರಾಯೋಗಿಕ ವಿಮಾನದಲ್ಲಿ ಎರಡು ಶಿಶುಗಳು ಸೇರಿ 88 ಪ್ರಯಾಣಿಕರು ಮುಂಬೈನಿಂದ ಮಂಗಳೂರಿಗೆ ಹಾರಿದರೆ, 99 ಪ್ರಯಾಣಿಕರು ಮಂಗಳೂರಿನಿಂದ ಮುಂಬೈಗೆ ಹಾರಾಟ ನಡೆಸಿದ್ದರು.
ಭಾನುವಾರ ಸಾಮಾನ್ಯ ವಿಮಾನದ ಮೊದಲ ಕಾರ್ಯಾಚರಣೆಯಲ್ಲಿ 55 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದರೆ, ಒಂದು ಶಿಶು ಸೇರಿದಂತೆ 143 ಪ್ರಯಾಣಿಕರು ಮಂಗಳೂರಿನಿಂದ ಮುಂಬಯಿಗೆ ಪ್ರಯಾಣಿಸಿದರು.
ಪ್ರಸ್ತುತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಕ್ಕೆ 108 ದೇಶೀಯ ವಿಮಾನಗಳು ನಿರ್ವಹಣೆಗೊಳ್ಳುತ್ತಿವೆ. ಅದರಲ್ಲಿ ಇಂಡಿಗೋ 85 ವಿಮಾನಗಳನ್ನು ಹೊಂದಿದೆ. ಬೆಂಗಳೂರಿಗೆ 28, ಪುಣೆ ಮೂಲಕ ದಿಲ್ಲಿಗೆ 4, ಚೆನ್ನೈ 7, ಮುಂಬಯಿ 21, ಹೈದರಾಬಾದ್ 14, ಬೆಂಗಳೂರು ಮೂಲಕ ಕೋಲ್ಕೊತ್ತಾಗೆ 7 ಮತ್ತು ಹುಬ್ಬಳ್ಳಿಗೆ 4 ವಿಮಾನಗಳು ಸಂಚರಿಸುತ್ತಿವೆ. ಏರ್ ಇಂಡಿಯಾ ವಿಮಾನ ಮುಂಬಯಿಗೆ 7, ಸ್ಪೈಸ್ ಜೆಟ್ ಬೆಂಗಳೂರಿಗೆ 6, ಗೋ ಫಸ್ಟ್ ಮುಂಬಯಿಗೆ 7 ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ 3 ವಿಮಾನ ಮುಂಬಯಿಗೆ ಸೇವೆ ನೀಡುತ್ತಿವೆ.
ಬೆಂಗಳೂರು: ಏರ್‌ಪೋರ್ಟ್‌ನಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ, ಮಾದಕ ವಸ್ತು ವಶಕ್ಕೆ ಬೆಂಗಳೂರು: ಇಲ್ಲಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1.37…
ಬಾರ್, ಪಬ್‍ಗಳಿಗೆ ವಿದ್ಯಾರ್ಥಿಗಳು: ದೂರು ಬಂದ ಕಾರಣ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ : ಪ್ರಿಯಾಂಕ್ ಖರ್ಗೆ ಬೆಂಗಳೂರು : ಬಾರ್,…
ಕಾಂಗ್ರೆಸ್ ಬಡವರ ಪಕ್ಷ , ಶಾಲು, ಹೂವು ಹಾಕುವ ಬದಲು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿ: ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್…
ಸ್ವಯಂ ಉದ್ಯೋಗದ ಹೆಸರಲ್ಲಿ ಗೃಹಿಣಿಯರಿಗೆ ಪಂಗನಾಮ : 10 ಕೋಟಿ ವಂಚಿಸಿ ಪರಾರಿ ಹಾವೇರಿ : “ಮನೆಯಲ್ಲೇ ಕುಳಿತು ಕೈತುಂಬಾ…
ಉಡುಪಿ: ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಉಡುಪಿ: ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ…
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್…