ಮಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಮಂಗಳೂರು-ಮುಂಬೈ (ಮಂಗಳೂರಿನಿಂದ ವಯಾ ಮೂಡಬಿದಿರೆ, ಕಾರ್ಕಳ, ನಿಟ್ಟೆ, ಬೆಳ್ಮಣ್ಣು, ಶಿರ್ವಮಂಚಕಲ್, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ನಿಪ್ಪಾಣಿ, ಕೊಲ್ಲಾಪುರ, ಸತಾರ, ಪೂನಾ ಮಾರ್ಗವಾಗಿ ಮುಂಬೈ) ಮಾರ್ಗದಲ್ಲಿ ವೋಲ್ವೋ ಮಲ್ಟಿಆಕ್ಸಲ್ ಸಾರಿಗೆಯು ಡಿ.12ರಿಂದ ಕಾರ್ಯಾಚರಣೆ ಆರಂಭಿಸಿದೆ.
ಈ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಮಧ್ಯಾಹ್ನ 12.45 ಗಂಟೆಗೆ ಹೊರಟು ಮೂಡಬಿದಿರೆಗೆ 1.45ಕ್ಕೆ ತಲುಪಲಿದೆ. ಕಾರ್ಕಳದಿಂದ 2.15 ಕ್ಕೆ ಹೊರಟು ನಿಟ್ಟೆ, ಬೆಳ್ಮಣ್ಣು, ಶಿರ್ವಮಂಚಕಲ್, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ನಿಪ್ಪಾಣಿ, ಕೊಲ್ಲಾಪುರ, ಸತಾರ, ಪೂನಾ ಮಾರ್ಗವಾಗಿ ಮುಂಬೈಗೆ ಬೆಳಿಗ್ಗೆ 7 ಕ್ಕೆ ತಲುಪುತ್ತದೆ.
ಮರು ಪ್ರಯಾಣದಲ್ಲಿ ಮುಂಬೈಯಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಪೂನಾ, ಸತಾರ, ಕೊಲ್ಲಾಪುರ, ನಿಪ್ಪಾಣಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಅಂಕೋಲಾ, ಭಟ್ಕಳ, ಕುಂದಾಪುರ, ಉಡುಪಿ, ಶಿರ್ವಮಂಚಕಲ್, ಬೆಳ್ಮಣ್ಣು, ನಿಟ್ಟೆ, ಕಾರ್ಕಳ ಬೆಳಿಗ್ಗೆ 6.30ಕ್ಕೆ ತಪುಪಲಿದೆ ನಂತರ ಮೂಡಬಿದ್ರೆಯಿಂದ ಬೆಳಿಗ್ಗೆ 7ಕ್ಕೆ ಹೊರಟು ಮಂಗಳೂರಿಗೆ ಬೆಳಿಗ್ಗೆ 8 ಗಂಟೆಗೆ ತಲುಪುತ್ತದೆ.
ಮಂಗಳೂರಿನಿಂದ ಮುಂಬೈಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 1,400 ರೂ.ಗಳು. ಪ್ರಯಾಣಿಕರಿಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಹತ್ತಿರದ ರಿಸರ್ವೇಶನ್ ಕೌಂಟರ್ ಅನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ಸು ನಿಲ್ದಾಣ ಮೊ.ಸಂಖ್ಯೆ: 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್ ಮೊ.ಸಂಖ್ಯೆ: 9663211553, ಉಡುಪಿ ಬಸ್ಸು ನಿಲ್ದಾಣ ಮೊ.ಸಂಖ್ಯೆ: 9663266400, ಕುಂದಾಪುರ ಬಸ್ಸು ನಿಲ್ದಾಣ ಮೊ.ಸಂಖ್ಯೆ: 9663266009 ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…