ಮಂಗಳೂರು: ನೃತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ಕರಾವಳಿಯ ಪ್ರತಿಭೆ ಅದ್ವಿಕಾ ಶೆಟ್ಟಿ ಮುಂಬೈಯಲ್ಲಿ ‘ನಮನ ಸಿರಿ’ ಯುವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕರಾವಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಬಿಲ್ಲವ ಭವನ ಸಂತಕ್ರೋಝ್ ಮುಂಬಯಿಯಲ್ಲಿ ಜ.26ರಂದು ನಮನ ಫ್ರೆಂಡ್ಸ್ ವತಿಯಿಂದ ನಡೆದ ನಮನೋತ್ಸವ 2020 ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖಾರನಂದ ಸ್ವಾಮೀಜಿ ಅದ್ವಿಕಾ ಶೆಟ್ಟಿ ಅವರಿಗೆ ‘ನಮನ ಸಿರಿ’ ಯುವ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಸುರತ್ಕಲ್’ನ ವೇಣುಗೋಪಾಲ್ ಶೆಟ್ಟಿ, ಹೇರೂರು ಮತ್ತು ಅರ್ಪಿತಾ ಶೆಟ್ಟಿ, ಮುಂಡಬೆಟ್ಟು ಗುತ್ತು ದಂಪತಿಯ ಪುತ್ರಿಯಾದ ಅದ್ವಿಕಾ ಶೆಟ್ಟಿ ನೃತ್ಯ ಕ್ಷೇತ್ರದಲ್ಲಿ ಮಿಂಚಿದವರು. ಕಲಾಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಕರಾವಳಿಯ ಈ ಪುಟ್ಟ ಬಾಲೆ ಯಕ್ಷಗಾನ, ಡಾನ್ಸ್, ಭರತನಾಟ್ಯ, ಸಂಗೀತ, ಸೈಕ್ಲಿಂಗ್, ಅಂಚೆ ಚೀಟಿ ಸಂಗ್ರಹ, ಚಿತ್ರ ರಚನೆ, ಯೋಗ, ಮಾಡೆಲಿಂಗ್ ಸೇರಿದಂತೆ ಅನೇಕ ಕಲಾಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಮಂಗಳೂರಿನ ಓಷಿಯನ್ ಕಿಡ್ಸ್ ಡಾನ್ಸ್ ಅಕಾಡೆಮಿಯ ಪ್ರಮೋದ್ ಆಳ್ವ ಮತ್ತು ಎನ್. ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬೇರೆ ಬೇರೆ ನೃತ್ಯಪ್ರಕಾರಗಳಲ್ಲಿ ಪಳಗಿದ ಇವರು ಅದ್ವಿತೀಯ ನೃತ್ಯ ಸಾಧಕಿ ಅದ್ವಿಕಾ ಶೆಟ್ಟಿ. ಪಾಶ್ಚಾತ್ಯ, ಕಥಕ್, ಜಾನಪದ, ಸೆಮಿ ಕ್ಲಾಸಿಕಲ್ ಸೇರಿದಂತೆ ನೃತ್ಯದ ಅನೇಕ ಕಲಾ ಪ್ರಕಾರಗಳನ್ನು ಕಲಿಯುತ್ತಿರುವ ಇವರು, ವಿದುಷಿ ಪ್ರತಿಮಾ ಶ್ರೀಧರ್ ಹಾಗೂ ಶ್ರೀಧರ್ ಹೊಳ್ಳ ಅವರ ಗರಡಿಯಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಯಕ್ಷಗಾನವನ್ನು ರಕ್ಷಿತ್ ಶೆಟ್ಟಿ ಪಡ್ರೆ ಅವರ ಗರಡಿಯಲ್ಲಿ ಕಲಿಯುತ್ತಿದ್ದಾರೆ. ಜೊತೆಗೆ ಕೌಶಿಕ್ ಸುವರ್ಣ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ನೃತ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…
ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…
ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ ಕಾಪು: ಕಾಪು ಕಡಲ ಕಿನಾರೆಯಲ್ಲಿ…
ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…
ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…