Featured

ಮಂಗಳೂರು: ಮೆಲ್ರಿಕ್ ಅಂಥೊನಿ ಹತ್ಯೆ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ -Vishwanews24

ಮಂಗಳೂರು : ಗೋರಿಗುಡ್ಡೆ ಮೆಲ್ರಿಕ್ ಡಿಸೋಜ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರು ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.

ಗೋರಿಗುಡ್ಡೆ ವೆಲೆನ್ಸಿಯಾ ನಿವಾಸಿ ನಿಶಾಕ್ ಪೂಜಾರಿ (30), ಗೋರಿಗುಡ್ಡೆ ಬೇಕಲ ಕಂಪೌಂಡ್ ನಿವಾಸಿ ವಿನೇಶ್ ಕುಮಾರ್ (32), ಮುಳಿಹಿತ್ಲು ಅರೆಕೆರೆಬೈಲ್ ಸುಬ್ಬಣ್ಣ ಶೆಟ್ಟಿ ಕಂಪೌಂಡ್ ನಿವಾಸಿ ಸಚಿನ್ ಶೆಟ್ಟಿ (23), ಜಪ್ಪಿನಮೊಗರು ತಂದೊಳಿಗೆ ಸಾಯಿ ನಿಲಯ ನಿವಾಸಿ ಗಣೇಶ್ ಕುಲಾಲ್ (27), ಗೋರಿಗುಡ್ಡೆ ಜನಾರ್ದನ ಕಂಪೌಂಡ್ ನಿವಾಸಿ ಪ್ರವೀಣ್ ಪೂಜಾರಿ (43), ಜೆಪ್ಪು ಕುಡುಪಾಡಿ ಮೋಹಿನಿ ಕಂಪೌಂಡ್ ನಿವಾಸಿ ಸಂದೀಪ್ ಶೆಟ್ಟಿ (34) ಶಿಕ್ಷೆಗೊಳಗಾದ ಅಪರಾಧಿಗಳು.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಲಿಂಗೇಗೌಡ 20 ಸಾಕ್ಷಿ ಹಾಗೂ 54 ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಂಡು ಅಪರಾಧಿಗಳಿಗೆ ಐಪಿಸಿ 302 (ಕೊಲೆ) ರಡಿ ಜೀವಾವಧಿ ಹಾಗೂ ತಲಾ ಮೂರು ಸಾವಿರ ರೂ. ದಂಡ, 109 (ಪ್ರೇರೇಪಣೆ)ರಡಿ ತಲಾ ಮೂರು ಸಾವಿರ ರೂ. ದಂಡ, 120 ಬಿ (ಸಂಚು)ರಡಿ ತಲಾ ಮೂರು ಸಾವಿರ ರೂ., 144 (ಅಕ್ರಮ ಕೂಟ)ರಡಿ ನಾಲ್ಕು ತಿಂಗಳು ಸಜೆ, 147ರಡಿ ಒಂದು ವರ್ಷ ಸಜೆ, 148ರಡಿ ಎರಡು ವರ್ಷ, 448 (ಅಕ್ರಮ ಪ್ರವೇಶ) ರಡಿ, 506 (ಬೆದರಿಕೆ)ರಡಿ ಒಂದು ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದ ಮೊತ್ತದಲ್ಲಿ 40 ಸಾವಿರ ರೂ. ಕೊಲೆಯಾದ ಮೆಲ್ರಿಕ್ ಅವರ ತಾಯಿಗೆ ಪರಿಹಾರ ರೂಪದಲ್ಲಿ ನೀಡಲು ನ್ಯಾಯಾಲಯ ಆದೇಶಿಸಿದೆ.

2016ರ ಮೇ ತಿಂಗಳಲ್ಲಿ ನಡೆದಿದ್ದ ಹಲ್ಲೆ ಪ್ರಕರಣವೊಂದರಲ್ಲಿ ಮೆಲ್ರಿಕ್ ಭಾಗಿಯಾಗಿದ್ದ. ಈ ಹಿನ್ನೆಲೆ ಆತನ ವಿರುದ್ಧ ಮತ್ತೊಂದು ತಂಡ ದ್ವೇಷಹೊಂದಿತ್ತು. ಅವಕಾಶಕ್ಕಾಗಿ ಕಾಯುತ್ತಿದ್ದ ತಂಡ 2017ರ ಕ್ರಿಸ್ಮಸ್ ಹಬ್ಬದಂದು ಮೆಲ್ರಿಕ್ ಗೆ ಮುಹೂರ್ತ ನಿಗದಿ ಪಡಿಸಿತ್ತು.

ಮಧ್ಯರಾತ್ರಿ 1:15ರ ಸುಮಾರಿಗೆ ಮೆಲ್ರಿಕ್ನ ವೆಲೆನ್ಸಿಯಾ ಮನೆಗೆ ದಾಳಿ ಮಾಡಿ ಬಾಗಿಲನ್ನು ಕಾಲಿನಿಂದ ತುಳಿದು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ಸಂದರ್ಭ ಮೆಲ್ರಿಕ್ ಮತ್ತು ಆತನ ಅಜ್ಜಿ ಮಾತ್ರ ಮನೆಯಲ್ಲಿದ್ದರು. ಆರೋಪಿಗಳು ಏಕಾಏಕಿ ತಲವಾರಿನಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ವಿಷಯ ತಿಳಿದ ಮೆಲ್ರಿಕ್ನ ಸಹಪಾಠಿ ಸುಶೀಲ್ ಕೂಡಲೇ ಮೆಲ್ರಿಕ್ನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೆಲ್ರಿಕ್ನನ್ನು ಆಸ್ಪತ್ರೆಗೆ ಸೇರಿಸಿದ ಸ್ನೇಹಿತ ಸುಶೀಲ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದು, ಕೊಲೆ ಪ್ರಕರಣ ದಾಖಲಾಗಿತ್ತು.

 

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago