Featured

ಮಂಗಳೂರು: ಯಕ್ಷಗಾನ, ಕಂಬಳ ಕ್ರೀಡೆಗೆ ಸುಪ್ರೀಂಕೋರ್ಟ್‌ನ ಶಬ್ಧಮಾಲಿನ್ಯ ನಿಯಮ ನಿರ್ಬಂಧ ; ಕರಾವಳಿ ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ತೊಂದರೆ – Vishwanews24

ಮಂಗಳೂರು: ಯಕ್ಷಗಾನ, ಕಂಬಳ ಕ್ರೀಡೆಗೆ ಸುಪ್ರೀಂಕೋರ್ಟ್‌ನ ಶಬ್ಧಮಾಲಿನ್ಯ ನಿಯಮ ನಿರ್ಬಂಧ ; ಕರಾವಳಿ ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ತೊಂದರೆ

ಮಂಗಳೂರು: ತುಳುನಾಡಿನ ಕಾಂತಾರ ಸಿನಿಮಾ ಹಳ್ಳಿಯಿಂದ ದಿಲ್ಲಿಯವರೆಗೆ ಸದ್ದು ಮಾಡುತ್ತಿದೆ. ಇದರಿಂದಾಗಿ ಈ ಬಾರಿ ತುಳುನಾಡಿನ ಕಂಬಳ, ಕೋಲ, ನೇಮಗಳಿಗೆ ಇನ್ನಿಲ್ಲದ ಮಹತ್ವ ಬಂದಿದೆ. ಆದರೆ ಇಲ್ಲಿನ ಯಕ್ಷಗಾನ, ಕಂಬಳ ಕ್ರೀಡೆಗೆ ಸುಪ್ರೀಂಕೋರ್ಟ್‌ನ ಶಬ್ಧಮಾಲಿನ್ಯ ನಿಯಮ ನಿರ್ಬಂಧ ಆದೇಶದಿಂದ ಕರಿಛಾಯೆ ಆವರಿಸಿದೆ. ಇದರಿಂದ ಮೇಳದ ಯಜಮಾನರು, ಕಂಬಳ ಸಂಘಟಕರು ಗೊಂದಲದಲ್ಲಿ ಸಿಲುಕಿದ್ದಾರೆ.

ಸುಪ್ರೀಂ ಕೋರ್ಟ್‌ ಶಬ್ಧಮಾಲಿನ್ಯ ನಿಯಮವನ್ನು ಎತ್ತಿಹಿಡಿದಿದ್ದು, 2005ರ ನಿಯಮವನ್ನು ಪಾಲಿಸುವಂತೆ ಖಡಕ್‌ ಆದೇಶ ನೀಡಿದೆ. ಈ ನಿಯಮದ ಪ್ರಕಾರ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ನಿರ್ಬಂಧವಿದ್ದು, ಇದು ಕರಾವಳಿ ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ತೊಂದರೆಯಾಗಿದೆ.

ರಾಜ್ಯದಲ್ಲಿ ಧ್ವನಿವರ್ಧಕ ಬಳಸಲು ಕೆಲವು ನಿಯಮ ವಿಧಿಸಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಧ್ವನಿವರ್ಧಕ ಬಳಸಬಹುದಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಹಗಲಿನಲ್ಲಿ 75 ಡೆಸಿಬಲ್ ಮತ್ತು ರಾತ್ರಿ 10 ಡೆಸಿಬಲ್ ನಷ್ಟು ಬಳಕೆಗೆ ಅವಕಾಶವಿದೆ. ವಾಣಿಜ್ಯ ಪ್ರದೇಶಗಳಲ್ಲಿ ಹಗಲಿನಲ್ಲಿ 65 ಡೆಸಿಬಲ್ ಮತ್ತು ರಾತ್ರಿ 55 ಡೆಸಿಬಲ್ ಮಟ್ಟ ಇರಬೇಕು. ವಸತಿ ವಲಯಗಳಲ್ಲಿ, ಕಟ್ಟಡ ಮಟ್ಟವು ಹಗಲಿನಲ್ಲಿ 55 ಡೆಸಿಬಲ್ ಮತ್ತು ರಾತ್ರಿಯಲ್ಲಿ 45 ಡೆಸಿಬಲ್ ಬಳಸಬಹುದು. ಶಾಂತ ವಲಯದಲ್ಲಿ ಹಗಲಿನಲ್ಲಿ 50 ಡೆಸಿಬಲ್‌ ಮತ್ತು ರಾತ್ರಿ 40 ಡೆಸಿಬಲ್‌ನಷ್ಟು ಶಬ್ಧಕ್ಕೆ ಅನುಮತಿ ನೀಡಲಾಗಿದೆ. ಈ ರೀತಿಯ ನಿಯಮಗಳನ್ನು ಪಾಲಿಸಿಕೊಂಡು ಯಕ್ಷಗಾನ, ಉತ್ಸವ, ಕಂಬಳ ನಡೆಸುವುದು ಕಷ್ಟ ಎನ್ನುತ್ತಾರೆ ಸಂಘಟಕರು.

ಬ್ರಹ್ಮಾವರ : ಇಲಿ ಪಾಷಣ ಸೇವಿಸಿ ಮಹಿಳೆ ಆತ್ಮಹತ್ಯೆ – Vishwanews24

ರಾಜ್ಯ ಸರಕಾರ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ನಿಬಂಧನಗೊಳಪಟ್ಟು ಧ್ವನಿವರ್ಧಕ ಬಳಸುವಂತೆ ಗ್ರೀನ್‌ ಸಿಗ್ನಲ್ ನೀಡಿದೆ. ಆದರೆ ಯಕ್ಷಗಾನ, ಕಂಬಳ, ಜಾತ್ರೆ, ಉತ್ಸವ ಸೀಸನ್‌ ಈ ತಿಂಗಳಲ್ಲಿ ಆರಂಭಗೊಳ್ಳಲಿದ್ದು, ಇದಕ್ಕೆ ಸರಕಾರ ಯಾವುದೇ ಮಾರ್ಗಸೂಚಿ ನೀಡದಿರುವುದು ಜಿಲ್ಲಾಡಳಿತಕ್ಕೂ ಬಿಸಿತುಪ್ಪವಾಗಿದೆ. ಈ ಉತ್ಸವಗಳ ಮೇಲೆ ಹೊಡೆತ ಬಿದ್ದರೆ ಕರಾವಳಿಯ ಸಾಂಸ್ಕೃತಿಕ ಟೂರಿಸಂಗೂ ಹಿನ್ನಡೆಯಾಗಲಿದೆ ಎನ್ನುತ್ತಾರೆ ಯಕ್ಷಾಭಿಮಾನಿಗಳು.

ರಾಜ್ಯದಲ್ಲಿ 11,850 ಅರ್ಜಿಗಳು: ರಾಜ್ಯದಲ್ಲಿ ಮಸೀದಿ, ದೇವಾಲಯ, ಚರ್ಚ್ಗಳಿಂದ ಧ್ವನಿವರ್ಧಕ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದ್ದು, ಸುಮಾರು 11,850 ಅರ್ಜಿಗಳು ಬಂದಿವೆ. ಇದರಲ್ಲಿ 10,889 ಮಸೀದಿಗಳಿಗೆ, 3000ಕ್ಕೂ ಹೆಚ್ಚು ಹಿಂದೂ ದೇವಾಲಯ, 1400ಕ್ಕೂ ಹೆಚ್ಚು ಚರ್ಚ್ಗಳಿಗೆ ಸರಕಾರ 2 ವರ್ಷಗಳವರೆಗೆ ಅನುಮತಿ ನೀಡಿದ್ದು, ಇದಕ್ಕೆ 450ರೂ. ಶುಲ್ಕ ಕಟ್ಟಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.

ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್‌ ರೋಹಿತ್‌ ಹೆಗ್ಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ತುಳುನಾಡಿನ ಕಂಬಳ ಈ ನೆಲದ ಸಂಸ್ಕೃತಿಯಾಗಿದ್ದು, ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಿಕೊಂಡೇ ಈ ಕ್ರೀಡೆ ನಡೆಯುತ್ತಿದೆ. ಕಂಬಳ ಕ್ರೀಡೆಗಳು ಸಾಮಾನ್ಯವಾಗಿ ವಸತಿ ಪ್ರದೇಶದಲ್ಲಿ ನಡೆಯದ ಕಾರಣ ಶಬ್ಧಮಾಲಿನ್ಯ ನಿಯಮ ನಮಗೇನು ಸಮಸ್ಯೆಯಾಗಲ್ಲ. ಜಿಲ್ಲಾಧಿಕಾರಿಗಳು ಸಭೆ ಕರೆದಾಗ ಅವರಿಗೆ ಈ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನ. 19 ರಿಂದ 23ರ ವರೆಗೆ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ – Vishwanews24

ಯಕ್ಷಗಾನ, ಕಂಬಳ ಕಲೆಗಳು ಈ ನೆಲದ ಅಸ್ಮಿತೆ ಮತ್ತು ಧಾರ್ಮಿಕ ನಂಬಿಕೆ. ಅದರ ಮೂಲ ಆಶಯಕ್ಕೆ ಹೊಡೆತ ಬೀಳದಂತೆ ಸುಪ್ರೀಂಕೋರ್ಟ್‌ ನಿಯಮವನ್ನು ಪಾಲಿಸಿಕೊಂಡು ಈ ಕಲೆಗಳ ಪ್ರದರ್ಶನಕ್ಕೆ ಅವಕಾಶವಿದೆ. ಈ ಕಲೆಗಳಲ್ಲಿ ಹಿಂದಿನಿಂದ ಬಂದ ಸಂಪ್ರದಾಯವಿದ್ದು, ಅದಕ್ಕೆ ಬದ್ಧರಾಗಿ ನಡೆಯುವ ಉದ್ದೇಶದಿಂದ ಶೀಘ್ರದಲ್ಲೇ ಯಕ್ಷಗಾನ, ಕಂಬಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲಾಗುವುದು ಎಂದು ದ.ಕ. ಡಿಸಿ ರವಿಕುಮಾರ್‌ ಎಂ.ಆರ್‌. ತಿಳಿಸಿದರು.

ಕರಾವಳಿ ಭಾಗದಲ್ಲಿ ಯಕ್ಷಗಾನ, ಕಂಬಳ, ಜಾತ್ರೋತ್ಸವಗಳು ನಡೆಯುವುದೇ ರಾತ್ರಿ ಹೊತ್ತಿನಲ್ಲಿ. ಸುಪ್ರೀಂ ಕೋರ್ಟ್‌ ನಿಯಮ ಈಗ ತೊಡಕಾಗಿದ್ದು, ಈ ಕಲೆಗಳು ಸಾಂಪ್ರದಾಯಿಕವಾಗಿ ನಡೆಯಬೇಕಾದರೆ ಜಿಲ್ಲಾಡಳಿತ ಸಹಕಾರ ಮುಖ್ಯವಾಗಿದೆ. ಕಾಲಮಿತಿ ಯಕ್ಷಗಾನಕ್ಕೆ ನಮ್ಮ ಹಠವಿಲ್ಲ. ಆದರೆ, ಸುಪ್ರೀಂ ಆದೇಶ ಹಿನ್ನೆಲೆಯಲ್ಲಿ ಆ ಬಗ್ಗೆ ಒಲವು ತೋರಿದ್ದು, ಕನಿಷ್ಠ ರಾತ್ರಿ 12 ಗಂಟೆಯವರೆಗೆ ಪ್ರದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ನೀಡಬೇಕು ಎಂದು ಕಟೀಲು ಮೇಳದ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಹೇಳಿದರು.

Vishwa News 24

Recent Posts

ಪುತ್ತೂರು: ಡಿವೈಡರ್‌ ಗೆ ಬೈಕ್‌ ಡಿಕ್ಕಿ ;  ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು: ಡಿವೈಡರ್‌ ಗೆ ಬೈಕ್‌ ಡಿಕ್ಕಿ ;  ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ನಗರದ ಪಡೀಲ್ ಬಳಿ ಎರಡು ಬೈಕ್‌ಗಳ…

2 days ago

ಕ್ಯಾನ್ಸರ್‌ನಿಂದ ಮಲಯಾಳಂ ಕಿರುತೆರೆ ನಟ ಸಿದ್ದಾರ್ಥ ವೇಣುಗೋಪಾಲ್ ನಿಧನ – vishwanews24

ಕ್ಯಾನ್ಸರ್‌ನಿಂದ ಮಲಯಾಳಂ ಕಿರುತೆರೆ ನಟ ಸಿದ್ದಾರ್ಥ ವೇಣುಗೋಪಾಲ್ ನಿಧನ ಕೊಚ್ಚಿ : ಮಲಯಾಳಂ ಕಿರುತೆರೆಯ ಜನಪ್ರಿಯ ನಟ ಸಿದ್ದಾರ್ಥ್ ವೇಣುಗೋಪಾಲ್…

2 days ago

ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಯಲ್ಲ, ಬಿಜೆಪಿ ರಾಜಕೀಯ ಮಾಡ್ತಿದೆ : ಸಿಎಂ – vishwanews24

ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಯಲ್ಲ, ಬಿಜೆಪಿ ರಾಜಕೀಯ ಮಾಡ್ತಿದೆ : ಸಿಎಂ ಬೆಂಗಳೂರು: ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿ ಅಲ್ಲ.…

2 days ago

ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ – vishwanews24

ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ…

2 days ago

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾವು – vishwanews24

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾವು ಶಿವಮೊಗ್ಗ: ಹುಟ್ಟುಹಬ್ಬದ ಪಾರ್ಟಿಯಲ್ಲಿ  ಭಾಗವಹಿಸಿದ್ದ ಯುವಕನೊಬ್ಬ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ…

2 days ago

ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ : ಆರ್. ಅಶೋಕ್  – vishwanews24

ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ : ಆರ್ ಅಶೋಕ್  ಬೆಂಗಳೂರು:ಮಹಿಳಾ ಮೀಸಲಿಗೆ ತಡೆವೊಡ್ಡಿದ ಕಾಂಗ್ರೆಸ್…

2 days ago