Featured

ಮಂಗಳೂರು :ಯೋಧರ ಹೆಸರು ಹೇಳಿಕೊಂಡು ನಕಲಿ ಗುರತಿನ ಚೀಟಿ ಉಪಯೋಗಿಸಿ ಆನ್ ಲೈನ್ ವಂಚನೆ -Vishwanews24

ಮಂಗಳೂರು : ಯೋಧರ ಹೆಸರು ಹೇಳಿಕೊಂಡು ಆನ್ ಲೈನ್ ವಂಚನೆ ನಡೆಸುತ್ತಿರುವ ಜಾಲವೊಂದು ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಕಾರ್ಯಾಚರಿಸುತ್ತಿದೆ.

ಕಾಲ್ ಸೆಂಟರ್ ಮಾದರಿಯಲ್ಲಿ ಈ ತಂಡ ಕಾರ್ಯಾಚರಿಸುತ್ತಿದೆ. ಒಎಲ್ಎಕ್ಸ್ ಸೇರಿದಂತೆ ಇನ್ನಿತರ ಮಾರಾಟ ಜಾಲಗಳಲ್ಲಿ ವಾಹನ ಮಾರಾಟಕ್ಕಿದೆ ಎಂದು ಜಾಹೀರಾತಿನ ಜೊತೆಗೆ ಮೊಬೈಲ್ ನಂಬರ್ ನಮೂದಿಸಿಕೊಂಡಿರುವ ಈ‌ ಜಾಲ ಗ್ರಾಹಕರನ್ನು ವಂಚಿಸುತ್ತಿರುವುದು ತಿಳಿದುಬಂದಿದೆ.

ಜಾಹೀರಾತಿನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾರಾಟಕ್ಕಿರುವ ವಾಹನದ ಬಗ್ಗೆ ವಿಚಾರಿಸುವ ಸಂದರ್ಭದಲ್ಲಿ ಕರೆ ಸ್ವೀಕರಿಸುವ ವ್ಯಕ್ತಿ ತಾನು ಮಂಗಳೂರು, ಬೆಂಗಳೂರು, ಮುಂಬೈ ಹೀಗೆ ಎಲ್ಲಾ ವಿಮಾನ ನಿಲ್ದಾಣಗಳ ಹೆಸರು ಹೇಳಿ, ತಾನು ಸಿ.ಐ.ಎಸ್.ಎಫ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ‌ ನಂಬಿಸುತ್ತಾ, ತನಗೆ ಬೇರೆಡೆಗೆ ವರ್ಗಾವಣೆಯಾಗಿರುವ ಕಾರಣಕ್ಕೆ ವಾಹನ ಮಾರುತ್ತಿರುವುದಾಗಿ ಹೇಳುತ್ತಾನೆ. ಕೇಳಿದ ತಕ್ಷಣವೇ ವಾಹನದ ಆರ್.ಸಿ, ಫೋಟೋ ಜೊತೆಗೆ ಭಾರತ ಸರಕಾರದ ಲಾಂಛನವಿರುವ ನಕಲಿ ಸೈನಿಕ ಗುರುತು ಪತ್ರವನ್ನೂ ಕಳುಹಿಸುತ್ತಾನೆ.

ಈ ಗುರುತಿನ ಪತ್ರ ನಿಜವಾಗಿಯೂ ಯಾವುದೋ ಸೈನಿಕನಿಗೆ ಸೇರಿದ್ದೋ, ಅಥವಾ ಸೈನಿಕನ ನಕಲಿ ಗುರುತಿನ ಚೀಟಿ ತಯಾರಿಸಿ ಬೇರೆ ಯಾರದೋ ಚಿತ್ರ ಅಂಟಿಸಿ ಮಾಡಿರುವುದೋ ಎನ್ನುವುದು ತಿಳಿಯದಾಗಿದೆ.

ಗ್ರಾಹಕನನ್ನು ಆತನ ಹತ್ತಿರದ ವಿಮಾನ ನಿಲ್ದಾಣಕ್ಕೆ ಬರಹೇಳಿ, ಮಾರಾಟ ಮಾಡುವ ವಾಹನವನ್ನು ಅಲ್ಲೇ ನೀಡುವುದಾಗಿ ಭರವಸೆಯನ್ನೂ ಮೂಡಿಸುತ್ತಾನೆ. ಅಲ್ಲದೆ ವಾಹನ ನೋಡುವ ಮೊದಲು ವಿಮಾನ ನಿಲ್ದಾಣದಿಂದ ಹೊರ‌ಬರುವ ಚೆಕ್ಕಿಂಗ್ ಹಣ 2000/ ರೂಪಾಯಿಯನ್ನು ಗೂಗಲ್ ಪೇ ಮೂಲಕ ಕಳುಹಿಸುವಂತೆ ನಂಬಿಸುತ್ತಾನೆ. ಸೈನಿಕನ ಗುರುತಿನ ಚೀಟಿ‌ ಕಂಡ ತಕ್ಷಣ ಪ್ರಾಮಾಣಿಕನಾಗಿರಬೇಕು ಎನ್ನುವ ಕಾರಣಕ್ಕೆ ಕೆಲವರು ಈ ವಂಚಕರಿಗೆ ಹಣ ವರ್ಗಾಯಿಸಿದ್ದಾರೆ.

ದಿನಕ್ಕೆ ನೂರಕ್ಕೂ‌ ಮಿಕ್ಕಿದ ಜನರಿಗೆ ವಂಚನೆ ನಡೆಸುತ್ತಿರುವ ಈ ಬೃಹತ್ ಜಾಲ,ತನ್ನ ವಂಚನೆಗಾಗಿ ದೇಶದ ಹೆಮ್ಮೆಯ ಸೈನಿಕರ ಹೆಸರನ್ನು ಬಳಸುತ್ತಿದ್ದಾರೆ. ಭಾರತೀಯ ಸೇನೆಯ ನಕಲಿ‌ ಗುರುತಿನ ಚೀಟಿ ಈ ವಂಚಕರಿಗೆ ಸಿಗುತ್ತಿರುವುದು ಗಂಭೀರ ವಿಷಯವಾಗಿದ್ದು, ಉಗ್ರಗಾಮಿಗಳಿಗೂ ಇದನ್ನು ಉಪಯೋಗಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ‌ ಗಮನಹರಿಸಿ ಈ‌ ವಂಚನೆ ಜಾಲವನ್ನು ಭೇಧಿಸಬೇಕಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago