Featured

ಮಂಗಳೂರು: ರಸ್ತೆಯಲ್ಲಿ ನಮಾಜ್​ ಪ್ರಕರಣ; ಸುಮೋಟೊ ಪ್ರಕರಣ ದಾಖಲಿಸಿದಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಗೆ ಕಡ್ಡಾಯ ರಜೆಯ ಶಿಕ್ಷೆ – vishwanews24

ಮಂಗಳೂರು: ರಸ್ತೆಯಲ್ಲಿ ನಮಾಜ್​ ಪ್ರಕರಣ; ಸುಮೋಟೊ ಪ್ರಕರಣ ದಾಖಲಿಸಿದಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಗೆ ಕಡ್ಡಾಯ ರಜೆಯ ಶಿಕ್ಷೆ

ಮಂಗಳೂರು: ಇಲ್ಲಿನ ರಸ್ತೆಯಲ್ಲಿ ಕೆಲ ಯುವಕರು ನಮಾಜ್  ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೋ ಕೇಸ್  ದಾಖಲಿಸಿದ್ದಕ್ಕಾಗಿ ಪೊಲೀಸ್ ಇನ್ಸ್ಪೆಕ್ಟರ್‌ಗೆ ಕಡ್ಡಾಯ ರಜೆಯ ಶಿಕ್ಷೆ ನೀಡಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದು, ಬಿ ರಿಪೋರ್ಟ್ ಮಾಡಿ ಕೇಸ್ ರದ್ದು ಮಾಡಿದ್ದಾರೆ. ಕೇಸ್ ದಾಖಲಿಸಿದ್ದಕ್ಕೆ ಮುಸ್ಲಿಮರ ಆಕ್ಷೇಪ ಹಿನ್ನೆಲೆ ಕದ್ರಿ ಪಿಐ ಸೋಮಶೇಖರ್‌ಗೆ ಕಡ್ಡಾಯ ರಜೆ ಶಿಕ್ಷೆ ನೀಡಲಾಗಿದೆ. ಪೊಲೀಸರ ವಿರುದ್ಧ ತನಿಖೆ ಮಾಡಲು ಎಸಿಪಿ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ಮಂಗಳೂರಿನ ಕಂಕನಾಡಿಯ ಮಸೀದಿ ಬಳಿಯ ರಸ್ತೆಯಲ್ಲಿ ಮೇ 24ರಂದು ಕೆಲ ಅನ್ಯಕೋಮಿನ ಯುವಕರು ನಮಾಜ್ ಮಾಡಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾದ ಹಿನ್ನೆಲೆ ಕದ್ರಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ (ಸುಮೊಟೋ) ದಾಖಲಿಸಿಕೊಂಡಿದ್ದರು. ಐಪಿಸಿ ಸೆಕ್ಷನ್ 341 (ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ), 283 (ಸಾರ್ವಜನಿಕ ರಸ್ತೆಯಲ್ಲಿ ಅಡ್ಡಿ) ,143 (ವಿಧಿವಿರುದ್ಧ ಕೂಟದ ಸದಸ್ಯ) ,149 (ಏಕೋದ್ದೇಶವನ್ನು ಈಡೇರಿಸುವಲ್ಲಿ ಮಾಡಲಾದ ಅಪರಾಧದ ಬಗ್ಗೆ ವಿಧಿವಿರುದ್ಧ ಕೂಟದ ಪ್ರತಿಯೊಬ್ಬ ಸದಸ್ಯನು ತಪ್ಪಿತಸ್ಥನಾಗಿರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಕರಾವಳಿಯ ಕಾಂಗ್ರೆಸ್ ಅಲ್ಪಸಂಖ್ಯಾತರು, ಮುಸ್ಲಿಂ ವಲಯ ಮತ್ತು ಪ್ರಗತಿಪರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

16 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

17 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

17 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

20 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

20 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

20 hours ago