Featured

ಮಂಗಳೂರು : ರಾಹುಲ್ ಗಾಂಧಿ ಅನರ್ಹ ಪ್ರಕರಣ : ಇದಕ್ಕೆಲ್ಲಾ ಕಾಂಗ್ರೆಸ್ ಹೆದರುವುದಿಲ್ಲ : ಯು.ಟಿ.ಖಾದರ್ – Vishwanews24

ಮಂಗಳೂರು : ರಾಹುಲ್ ಗಾಂಧಿ ಅನರ್ಹ ಪ್ರಕರಣ : ಇದಕ್ಕೆಲ್ಲಾ ಕಾಂಗ್ರೆಸ್ ಹೆದರುವುದಿಲ್ಲ ,ರಾಹುಲ್ ಜತೆಗೆ ಕಾಂಗ್ರೆಸ್‌ನ ಪ್ರತಿಯೊಬ್ಬರೂ ಇದ್ದಾರೆ : ಯು.ಟಿ.ಖಾದರ್

ಮಂಗಳೂರು: ರಾಹುಲ್ ಗಾಂಧಿಯನ್ನು ಸಂಸದರಾಗಿ ಅನರ್ಹಗೊಳಿಸಿ ಆದೇಶ ನೀಡಿರುವುದು ಸಂಸದೀಯ ನಿಯಮ ಹಾಗೂ ಪ್ರಜಾಪ್ರಭುತ್ವ ಕಗ್ಗೊಲೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಸರ್ ನೇಮ್’ ಹೇಳಿಕೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ಘೋಷಿಸಿರುನ ಕೋರ್ಟ್ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ ನೀಡಿದೆ.

ನ್ಯಾಯಾಲಯದ ತೀರ್ಪಿನ ಬಗ್ಗೆ ನಾನೇನೂ ಹೇಳಲಾರೆ. ಆದರೆ, ನ್ಯಾಯಾಲಯವೇ ಆದೇಶವನ್ನು ಅಮಾನತ್ತಿನಲ್ಲಿರಿಸಿ ಮೇಲ್ಮನವಿಗೆ ಅವಕಾಶ ನೀಡಿರುವಾಗ ಸಂಸದ ಸ್ಥಾನದಿಂದ ಅರ್ಹಗೊಳಿಸಿರುವ ಪ್ರಕ್ರಿಯೆ ಮುಂದೆ ದೇಶದ ಪ್ರತಿಯೊಂದು ಸಂಸದರಿಗೂ ಅನ್ವಯವಾಗಲಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ರಾಹುಲ್ ಗಾಂಧಿ ಸತ್ಯ ಮಾತನಾಡಿದರೆ ಬಿಡದವರು ಇನ್ನು ಜನಸಾಮಾನ್ಯರಿಗೆ ಬಿಡಬಹುದೇ ಎಂದು ಪ್ರಶ್ನಿಸಿದ ಅವರು, ದೇಶದ ಜನತೆ ರಾಹುಲ್ ಗಾಂಧಿಯನ್ನು ಭವಿಷ್ಯದ ನಾಯಕ ಎಂದು ಬಿಂಬಿಸುತ್ತಿರುವಾಗ ಭಯದಿಂದ ಈ ರೀತಿಯ ಕೃತ್ಯ ಎಸಗಲಾಗುತ್ತಿದೆ.

ಇದಕ್ಕೆಲ್ಲಾ ಕಾಂಗ್ರೆಸ್ ಹೆದರುವುದಿಲ್ಲ. ಸತ್ಯ ಮಾತನಾಡುವ ರಾಹುಲ್ ಜತೆಗೆ ಕಾಂಗ್ರೆಸ್‌ನ ಪ್ರತಿಯೊಬ್ಬರೂ ಇದ್ದಾರೆ ಎಂದವರು ಹೇಳಿದರು.

Vishwa News 24

Recent Posts

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

9 minutes ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

20 minutes ago

ಏಷ್ಯನ್‌ ಗೇಮ್ಸ್‌ ಪದಕ ವಿಜೇತರಿಗೆ ಸಿಎಂ ಅಭಿನಂದನೆ : ಚಿನ್ನ ಗೆದ್ದವರಿಗೆ 1 ಕೋಟಿ ನಗದು – vishwanews24

ಏಷ್ಯನ್‌ ಗೇಮ್ಸ್‌ ಪದಕ ವಿಜೇತರಿಗೆ ಸಿಎಂ ಅಭಿನಂದನೆ : ನೇರ ನೇಮಕಾತಿ , ನಗದು ಪುರಸ್ಕಾರ ಭಾರೀ ಹೆಚ್ಚಳ  ಬೆಂಗಳೂರು:…

28 minutes ago

ಬೆಂಗಳೂರು: ನಕಲಿ ಔಷಧಿ ದಂಧೆ: ನಗರದ ಮೂರು ಫಾರ್ಮಾಗಳ ಮೇಲೆ ಎಸ್‌ಐಟಿ ದಾಳಿ – vishwanews24

ನಕಲಿ ಔಷಧಿ ಖರೀದಿಸಿ ಮಾರಾಟ ಮಾಡಿದ್ದ ಫಾರ್ಮಾಗಳ ಮೇಲೆ SIT ದಾಳಿ; ನಕಲಿ ಮಾತ್ರೆಗಳು ಸೀಜ್ ಬೆಂಗಳೂರು: ನಕಲಿ ಔಷಧಿ ದಂಧೆ…

55 minutes ago

ಕಸದ ಚೀಲ – ವಿಭಿನ್ನ ಕಥೆಯ ಮೂಲಕ ಗಮನ ಸೆಳೆದ ಉಡುಪಿಯ ಯುವ ಬರಹಗಾರ ಸುಮಂತ್ ಗಾಣಿಗ – vishwanews24

‘ಕಸದ ಚೀಲ’ದ ಮೂಲಕ ವಿಭಿನ್ನ ಕಥನ – ಉಡುಪಿಯ ಸುಮಂತ್ ಗಾಣಿಗ ಅವರ ಬರವಣಿಗೆಗೆ ಮೆಚ್ಚುಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ…

2 hours ago

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ – vishwanews24

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ "ರಕ್ತ, ಬೆವರು ಹರಿಸಿ ಸೇವೆ ಸಲ್ಲಿಸಿದ್ದೇನೆ" : ಸಾಮಾಜಿಕ ಜಾಲತಾಣದಲ್ಲಿ…

2 hours ago