Featured

ಮಂಗಳೂರು: ‘ಲವ್ ಜಿಹಾದ್, ಮತಾಂತರದ ವಿರುದ್ಧ ಹಿಂದೂಗಳ ಹೋರಾಟ ಎಂದಿಗೂ ನಿಲ್ಲದು  :  ಚೈತ್ರಾ ಕುಂದಾಪುರ -Vishwanews24

ಮಂಗಳೂರು: ‘ಲವ್ ಜಿಹಾದ್, ಮತಾಂತರದ ವಿರುದ್ಧ ಹಿಂದೂಗಳ ಹೋರಾಟ ಎಂದಿಗೂ ನಿಲ್ಲದು  :  ಚೈತ್ರಾ ಕುಂದಾಪುರ

ಭಜರಂಗದಳದ ಕಾರ್ಯಕರ್ತರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ..

ಮಂಗಳೂರು : ಲವ್ ಜಿಹಾದ್, ಮತಾಂತರಗೊಳಿಸುವ ಜಿಹಾದಿಗಳಿಗೆ ಮುಂದಿನ ದಿನಗಳಲ್ಲಿ ದುರ್ಗಾವಾಹಿನಿ ಕಾರ್ಯಕರ್ತೆಯರ ಮುಖಾಂತರ ಏಟು ತಿನ್ನಲ್ಲು ಸಿದ್ದರಾಗಿರಬೇಕು. ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಪ್ರೀತಿಯ ನೆಪದಲ್ಲಿ ಯಾಮಾರಿಸಿ ಮತಾಂತರಿಸುವ ಮುಸ್ಲಿಮ್ ಜಿಹಾದಿಗಳಿಗೆ ಉತ್ತರವಾಗಿ ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಕೂಡಾ ಪ್ರೀತಿಸಿ ಅವರಿಗೆ ತಿಲಕವಿಡುವುದು ಕೂಡಾ ಹಿಂದೂ ಸಮಾಜದವರಿಗೂ ಗೊತ್ತಿದೆ. ಜಿಹಾದಿಗಳ ಲವ್ ಜಿಹಾದ್, ಮತಾಂತರದ ವಿರುದ್ಧ ಹಿಂದೂ ಸಮಾಜದ ಹೋರಾಟ ಎಂದಿಗೂ ನಿಲ್ಲದು ಎಂದು ಚೈತ್ರಾ ಕುಂದಾಪುರ ಎಚ್ಚರಿಸಿದ್ದಾರೆ.

ಬಜರಂಗ ದಳ, ದುರ್ಗಾ ವಾಹಿನಿಯಿಂದ ಸುರತ್ಕಲ್ ನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಬಜರಂಗದಳದ ಕಾರ್ಯಕರ್ತರು ಅಲೆಮಾರಿಗಳು ಮತ್ತು ಪುಡಿ ರೌಡಿಗಳು ಎಂಬ ಟೀಕೆಗಳನ್ನು ನಾವು ಕೇಳುತ್ತಲೇ ಇದ್ದೇವೆ. ಆದರೆ ಸಂಘಟನೆಯ ಕಾರ್ಯಕರ್ತರು ತಮ್ಮ ತಾಯ್ನಾಡಿನ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೋವಿಡ್ 19 ಸೋಂಕಿನ ಕಷ್ಟದ ಸಮಯದಲ್ಲಿ ಅನೇಕರಿಗೆ ಸಹಾಯ ಮಡಿದ್ದಾರೆ. ಭಜರಂಗದಳದ ಕಾರ್ಯಕರ್ತರು ಎಂದಿಗೂ ಗಾಂಜಾ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ” ಎಂದಿದ್ದಾರೆ.

ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, “ಡ್ರಗ್ಸ್ ಮತ್ತು ಲವ್ ಜಿಹಾದ್, ಧಾರ್ಮಿಕ ಧರ್ಮಾಂಧರ ವಿರುದ್ಧ ನಮ್ಮ ಸಂಘಟನೆಗಳು ಹೋರಾಡುತ್ತವೆ. ವಾಹನಗಳನ್ನು ಅಡ್ಡಗಟ್ಟಿದ ನಂತರ ನಾವು ಎಂದಿಗೂ ನೈತಿಕ ಪೊಲೀಸ್ ಗಿರಿ ಅಥವಾ ಜನರ ಮೇಲೆ ದಾಳಿ ನಡೆಸಲಿಲ್ಲ. ಡ್ರಗ್ಸ್ ಹಾಗೂ ಲವ್ ಜಿಹಾದ್ ಅನ್ನು ಕರಾವಳಿ ಕರ್ನಾಟಕದಿಂದ ದೂರವಿಡಲಾಗಿದೆ” ಎಂದರು.

ತುಳು ಅಕಾಡೆಮಿ ಸದಸ್ಯೆ ಶಾಂತಿ ಶೆಟ್ಟಿ ಮಾತನಡಿ, ಹಿಂದೂ ಸಮಾಜವು ಒಟ್ಟಾಗಿ ಧಾರ್ಮಿಕ ಪರಿವರ್ತನೆ ಮತ್ತು ಲವ್ ಜಿಹಾದ್ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದರು. ಅನೇಕ ಹಿಂದುಗಳು ತಮ್ಮದೇ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಅವರು ವಿಷಾದಿಸಿದರು.

ಮತಾಂತರ ಮತ್ತು ಲವ್ ಜಿಹಾದ್ ನಿಲ್ಲಿಸುವ ಗುರಿಯನ್ನು ಹೊಂದಿರುವ ಕಾನೂನನ್ನು ಬಲಪಡಿಸಲು ಕೋರಿ ರಾಜ್ಯ ಗೃಹ ಸಚಿವರಿಗೆ ತಿಳಿಸಿದ ಪತ್ರವನ್ನು ಶಾಸಕ ವೈ ಭರತ್ ಶೆಟ್ಟಿ ಮೂಲಕ ಹಸ್ತಾಂತರಿಸಲಾಯಿತು.

ಭಜರಂಗದಳ ವಿಭಾಗೀಯ ಸಂಚಾಲಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಶ್ವೇತಾ, ಮತ್ತು ವಿಶ್ವ ಹಿಂದೂ ಪರಿಷತ್ ಸುರತ್ಕಲ್ ಘಟಕದ ಕಾರ್ಯದರ್ಶಿ ಜಯರಾಮ ಆಚಾರ್ಯ ಉಪಸ್ಥಿತರಿದ್ದರು.

Vishwa News 24

Recent Posts

ಶಿರ್ವ: ಪಾಪನಾಶಿನಿ ಹೊಳೆಯಲ್ಲಿ ಹಸುವಿನ ಅವಶೇಷ ಪತ್ತೆ; ಪ್ರಕರಣ ದಾಖಲು – vishwanews24

ಶಿರ್ವ: ಪಾಪನಾಶಿನಿ ಹೊಳೆಯಲ್ಲಿ ಹಸುವಿನ ಅವಶೇಷ ಪತ್ತೆ; ಪ್ರಕರಣ ದಾಖಲು ಶಿರ್ವ: ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ…

7 hours ago

ಬೈಂದೂರು: ಶಿರೂರು ನದಿಯಲ್ಲಿ ಈಜಲು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನೀರುಪಾಲು – vishwanews24

ಬೈಂದೂರು: ಶಿರೂರು ನದಿಯಲ್ಲಿ ಈಜಲು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನೀರುಪಾಲು ಬೈಂದೂರು : ಕುಟುಂಬದವರೊಂದಿಗೆ ಪ್ರವಾಸಕ್ಕೆ ಬಂದಿದ್ದ ಹಾವೇರಿ…

7 hours ago

ಉಡುಪಿ: ಡಿಕೆಶಿ ಸಂಪುಟದಲ್ಲಿ ಜಾರ್ಜ್ ಗೆ ಉಪ ಮುಖ್ಯಮಂತ್ರಿ, ಐವನ್ ಗೆ ಸಚಿವ ಸ್ಥಾನ ನೀಡಲು ಕಥೊಲಿಕ್ ಸಭಾ ಆಗ್ರಹ – vishwanews24

ಉಡುಪಿ: ಡಿಕೆಶಿ ಸಂಪುಟದಲ್ಲಿ ಜಾರ್ಜ್ ಗೆ ಉಪ ಮುಖ್ಯಮಂತ್ರಿ, ಐವನ್ ಗೆ ಸಚಿವ ಸ್ಥಾನ ನೀಡಲು ಕಥೊಲಿಕ್ ಸಭಾ ಆಗ್ರಹ…

9 hours ago

ಮಲೇಷ್ಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ – vishwanews24

ಮಲೇಷ್ಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ.. ನಿಯಮ ಉಲ್ಲಂಘಸಿದ್ರೆ 23.95 ಕೋಟಿ ರೂ. ದಂಡ ಕೌಲಾಲಂಪುರ್: 16…

9 hours ago

ಸುವೇಂಧು ಸಂಪುಟ ವಿಸ್ತರಣೆ: ಬಂಗಾಳದ ನೂತನ ಸಚಿವರಾಗಿ 35 ಶಾಸಕರಿಂದ ಪ್ರಮಾಣ ಸ್ವೀಕಾರ – vishwanews24

ಸುವೇಂಧು ಸಂಪುಟ ವಿಸ್ತರಣೆ: ಬಂಗಾಳದ ನೂತನ ಸಚಿವರಾಗಿ 35 ಶಾಸಕರಿಂದ ಪ್ರಮಾಣ ಸ್ವೀಕಾರ ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು…

10 hours ago

ಬೆಂಗಳೂರು – ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ರದ್ದು – vishwanews24

ಬೆಂಗಳೂರು – ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ರದ್ದು ಮಂಗಳೂರು : ಜೂನ್ 3ರಂದು ನಿಗದಿಯಾಗಿದ್ದ ಬಹು…

11 hours ago