ಮಂಗಳೂರು: ಸದ್ಯ ಇಡೀ ಭಾರತ ದೇಶಕ್ಕೆ ವಕ್ಸ್ ಎಂಬ ರಾಕ್ಷಸ ವಕ್ಕರಿಸಿದ್ದಾನೆ. ಈ ರಾಕ್ಷಸನ ಸಂಹಾರಕ್ಕೆ ಹಿಂದೂಗಳೆಲ್ಲರೂ ವಕ್ಸ್ ಎಂಬ ಪಹಣಿಯ ಸ್ಥಳದಲ್ಲೆಲ್ಲಾ ವರಾಹ ಸ್ವಾಮಿ ಅಥವಾ ಪಂಜುರ್ಲಿ ದೈವವನ್ನು ಪ್ರತಿಷ್ಠಾಪಿಸಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಿಂದೂಗಳಿಗೆ ಕರೆ ನೀಡಿದ್ದಾರೆ.
ವಕ್ಸ್ ಆಸ್ತಿ ವಿವಾದದ ಬಗ್ಗೆ ರಾಜ್ಯದಲ್ಲಿ ಮಾತ್ರ ಇಡೀ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಇದೀಗ ವಕ್ಸ್ ಬಗ್ಗೆ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ತಿರುಪತಿಯಲ್ಲಿ ಅಂದು ವಕ್ಸ್ ಎಂಬ ರಾಕ್ಷಸನನ್ನು ನಾಶಪಡಿಸಲಾಗದ ಸಂದರ್ಭದಲ್ಲಿ ವರಾಹಸ್ವಾಮಿಯ ಪ್ರತಿಷ್ಠೆಯಿದ್ದರಿಂದ ಯಾವುದೇ ರಾಕ್ಷಸರಿಗೆ ಅಲ್ಲಿನ ಭೂಮಿಯನ್ನು ನಾಶಪಡಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈಗಲೂ ನಾವು ವೆಂಕಟರಮಣ ಸ್ವಾಮಿಯನ್ನು ಪೂಜಿಸುತ್ತಿದ್ದೇವೆ ಎಂದರು.
ಆದ್ದರಿಂದ ಎಲ್ಲೆಲ್ಲಾ ಪಹಣಿಯಲ್ಲಿ ವಕ್ಸ್ ಎಂಬ ಹೆಸರು ವಕ್ಕರಿಸಿದೆ ಅಲ್ಲಿ ಆ ರಾಕ್ಷಸನ ವಧೆಗಾಗಿ ವರಾಹಸ್ವಾಮಿ ಅಥವಾ ನಮ್ಮ ಪಂಜುರ್ಲಿ ದೈವವನ್ನು ಪ್ರತಿಷ್ಠೆ ಮಾಡಬೇಕು. ಈ ರೀತಿ ಮಾಡಿದ್ದಲ್ಲಿ ಮಾತ್ರ ವಕ್ಸ್ ಎಂಬ ರಾಕ್ಷಸ ತನ್ನಿಂದ ತಾನಾಗಿ ನಾಶವಾಗಿ ಹೋಗುತ್ತಾನೆ ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…