Featured

ಮಂಗಳೂರು :ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ 32.97 ಎಕರೆ ಹೆಚ್ಚುವರಿ ಭೂಮಿ ಪ್ರಸ್ತಾವನೆಗೆ ಎಎಐ ಅನುಮೋದನೆ – vishwanews24

ಮಂಗಳೂರು :ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ 32.97 ಎಕರೆ ಹೆಚ್ಚುವರಿ ಭೂಮಿ ಪ್ರಸ್ತಾವನೆಗೆ ಎಎಐ ಅನುಮೋದನೆ

ಮಂಗಳೂರು: ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ 32.97 ಎಕರೆ ಹೆಚ್ಚುವರಿ ಭೂಮಿಯ ಅವಶ್ಯಕತೆಯಿದ್ದು, ಈ ಬಗ್ಗೆ ಸಲ್ಲಿಸಲಾದ ಪ್ರಸ್ತಾವನೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಅನುಮೋದನೆ ನೀಡಿದೆ.

ರಾಜ್ಯ ಸರಕಾರವು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಭೂಮಿ ನೀಡುವವವರಿಗೆ ಗರಿಷ್ಠ ಪರಿಹಾರ ನೀಡಬೇಕೆಂದು ರಾಜ್ಯ ಸರಕಾರ ನಿಲುವಿಗೆ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಕಾರ್ಯನಿರ್ವಾಹಕ ನಿರ್ದೇಶಕ (ಜೆವಿಸಿ -ಪಿಪಿಪಿ -2) ಅನಾಮಿ ಪಾಂಡೆ ಅವರು ರಾಜ್ಯ ಸರಕಾರದ ಮೂಲಸೌಕರ್ಯ ಅಭಿವೃದ್ಧಿ, ಬಂದರು, ಒಳನಾಡು ಜಲ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ 2025, ಸೆ.9ರಂದು ಬರೆದಿರುವ ಪತ್ರದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗಾಗಿ 32.97 ಎಕರೆ ಜಮೀನನ್ನು ರಾಜ್ಯ ಸರಕಾರದ ಮೂಲಕ ಸ್ವಾಧೀನಪಡಿಸಿಕೊಳ್ಳಲು ಜಮೀನಿನ ಮೌಲ್ಯ ಅಗತ್ಯದ ಎಲ್ಲ ವೆಚ್ಚಗಳನ್ನು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಎಂಜಿಐಎಎಲ್) ಸಂಸ್ಥೆಯು ಭರಿಸಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

*ನಿಲುವಿನಿಂದ ಹಿಂದೆ ಸರಿಯದ ರಾಜ್ಯ ಸರಕಾರ: ಹಿಂದೆ ಕೇಂದ್ರ ಸರಕಾರ ಭೂಮಿ ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿತ್ತು. ಆದರೆ ಭೂಮಿ ಬಿಟ್ಟುಕೊಡಲು ಸ್ಥಳೀಯ ಭೂಮಾಲೀಕರಿಗೆ ಪರಿಹಾರ ನೀಡಬೇಕೆಂಬ ರಾಜ್ಯ ಸರಕಾರವು ಕೇಂದ್ರಕ್ಕೆ ತಿಳಿಸಿತ್ತು. ರಾಜ್ಯ ಸರಕಾರ ತನ್ನ ನಿಲುವಿನಿಂದ ಹಿಂದೆ ಸರಿಯದೆ ಭೂಮಿ ಕಳೆದು ಕೊಳ್ಳುವವರಿಗೆ ಪರಿಹಾರ ಒದಗಿಸಿಕೊಡುವ ಪ್ರಯತ್ನದಲ್ಲಿಯಶಸ್ವಿಯಾಗಿದೆ. ಜನಪರ ಕಾಳಜಿಯ ಹೊಂದಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಎಂದಿಗೂ ಜನತೆಯ ಪರವಾಗಿದೆ ಎನ್ನುವುದಕ್ಕೆ ಇದು ಒಂದು ನಿದರ್ಶನವಾಗಿದೆ ಎಂದು ಕಾಂಗ್ರೆಸ್ ಧುರೀಣರಾದ ಪದ್ಮರಾಜ ಆರ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

Vishwa News 24

Recent Posts

ರಾಜ್ಯಸಭೆ ಸ್ಥಾನದಿಂದ ನನ್ನ ಮೋದಿ ಅವರ ಸಂಬಂಧ ಮುಕ್ತಾಯ ಆಗೋದಿಲ್ಲ : ಹೆಚ್.ಡಿ ದೇವೇಗೌಡ – vishwanews24

ನನ್ನ ಜೀವನದ ಕೊನೆ ಘಟ್ಟದವರೆಗೂ ಮೈತ್ರಿ ಮುಂದುವರೆಸಿಕೊಂಡು ಹೋಗುತ್ತೇನೆ : ಹೆಚ್‌ಡಿಡಿ ಬೆಂಗಳೂರು: ಒಂದು ರಾಜ್ಯಸಭೆ ಸ್ಥಾನದಿಂದ ನನ್ನ, ಮೋದಿ …

12 hours ago

ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ – vishwanews24

ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಕೇರಳ ಸರ್ಕಾರ ಘೋಷಣೆ ತಿರುವನಂತಪುರಂ: ಕೇರಳ ಸರ್ಕಾರ ಮಹತ್ವದ…

12 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ – vishwanews24

ರೇಣುಕಾಸ್ವಾಮಿ ಕೊಲೆ ಪ್ರಕರಣ : ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ…

12 hours ago

ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ – vishwanews24

ಮನೆ ಕೆಲಸಕ್ಕೆ ಸೇರಿದ್ದ ದಂಪತಿಯಿಂದ ಕಳ್ಳತನ ; 25 ಲಕ್ಷ ಹಣ ಕದ್ದು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದ ವೇಳೆ ಅರೆಸ್ಟ್ ಬೆಂಗಳೂರು:…

13 hours ago

ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ – vishwanews24

ಮಂಗಳೂರು: ಜೋಕಟ್ಟೆ ಫ್ಲೈಓವರ್ ಬಳಿ ಅಪರಿಚಿತ ಯುವಕನ ಶವ ಪತ್ತೆ ಮಂಗಳೂರು: ಪಣಂಬೂರಿನ ಜೋಕಟ್ಟೆ ಬಳಿ ಬುಧವಾರ ಯುವಕನೊಬ್ಬನ ಶವ…

13 hours ago

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ : ಪ್ರಧಾನಿಗೆ ಮುಸ್ಲಿಂ ಬಾಂಧವ್ಯ ವೇದಿಕೆ ಮನವಿ – vishwanews24

ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋಹತ್ಯೆ, ಗೋಮಾಂಸ ರಫ್ತನ್ನು ನಿಷೇಧಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ…

14 hours ago