Featured

ಮಂಗಳೂರು : ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ – vishwanews24

ಮಂಗಳೂರು : ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿ

ಮಂಗಳೂರು: ತಿಂಗಳ ರಜೆ ಹಾಗೂ ಹಬ್ಬಗಳ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಉಂಟಾಗುವ ಪ್ರಯಾಣಿಕರ ವಿಪರೀತ ದಟ್ಟಣೆಯನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆಯು ಮಂಗಳೂರು ಮಾರ್ಗವಾಗಿ ಸಂಚರಿಸುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ.

ಹೆಚ್ಚುವರಿ ಬೋಗಿ ಅಳವಡಿಸಲಾದ ರೈಲುಗಳ ವಿವರ ಇಂತಿವೆ.

ಎ.10 ಮತ್ತು 11 ರಂದು ಚೆನ್ನೈನಿಂದ ಹೊರಡುವ ಚೆನ್ನೈ ಎಗ್ಮೋರ್ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16159 ) ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಇರಲಿದೆ.

ಇದನ್ನೂ ಓದಿ :

ಎ. 12 ಮತ್ತು 13 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಂಗಳೂರು ಸೆಂಟ್ರಲ್ – ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16160 ) ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುವುದು.

ಎ. 10, 11, 12, 14 ಮತ್ತು 15 ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಮಾವೇಲಿ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್ – ತಿರುವನಂತಪುರಂ ಸೆಂಟ್ರಲ್ ರೈಲು (ರೈಲು ಸಂಖ್ಯೆ 16603 )ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಸೇರಿಸಲಾಗುವುದು.

ಎ. 11, 12, 13, 15 ಮತ್ತು 16 ರಂದು ತಿರುವನಂತಪುರಂ ಸೆಂಟ್ರಲ್ ಹೊರಡುವ ತಿರುವನಂತಪುರ ಸೆಂಟ್ರಲ್ – ಮಂಗಳೂರು ಸೆಂಟ್ರಲ್ ( ರೈಲು ಸಂಖ್ಯೆ 16604 ) ಮಾವೇಲಿ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಇರಲಿದೆ.

ಇದನ್ನೂ ಓದಿ :

ಎ.8ರಿಂದ 15 ರವರೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಡುವ (ರೈಲು ಸಂಖ್ಯೆ 16630 )ಮಂಗಳೂರು ಸೆಂಟ್ರಲ್ – ತಿರುವನಂತಪುರಂ ಸೆಂಟ್ರಲ್ ಮಲಬಾರ್ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲಾಗುವುದು.

ಎ.9 ರಿಂದ 16 ರವರೆಗೆ ತಿರುವನಂತಪುರಂನಿಂದ ಹೊರಡುವ ತಿರುವನಂತಪುರಂ – ಮಂಗಳೂರು ಸೆಂಟ್ರಲ್ (ಸಂಖ್ಯೆ 16629 ) ಮಲಬಾರ್ ಎಕ್ಸ್‌ಪ್ರೆಸ್ ರೈಲಿಗೆ ಒಂದು ಹೆಚ್ಚುವರಿ ಸ್ಲೀಪರ್ ಬೋಗಿ ಅಳವಡಿಸಲು ನಿರ್ಧರಿಸ ಲಾಗಿದೆ ಎಂದು ರೈಲ್ವೆ ಇಲಾಖೆಯ ಪ್ರಕಟನೆ ತಿಳಿಸಿದೆ.

Vishwa News 24

Recent Posts

ಉಡುಪಿ: ಎ.10ರಂದು ನೇರ ಸಂದರ್ಶನ – vishwanews24

ಉಡುಪಿ: ಎ.10ರಂದು ನೇರ ಸಂದರ್ಶನ ಉಡುಪಿ: ನಗರದ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ ಟವರ್ಸ್‌ನ ಹರ್ಷ ರೀಟೇಲ್…

6 minutes ago

ಪಡುಬಿದ್ರಿ : ಆನ್‌ಲೈನ್ ಇನ್ವೆಸ್ಟ್ ಹೆಸರಿನಲ್ಲಿ ವಂಚನೆ ; ₹1.50 ಲಕ್ಷ ಕಳೆದುಕೊಂಡ ಮಹಿಳೆ – vishwanews24

ಪಡುಬಿದ್ರಿ : ಆನ್‌ಲೈನ್ ಇನ್ವೆಸ್ಟ್ ಹೆಸರಿನಲ್ಲಿ ವಂಚನೆ ; ₹1.50 ಲಕ್ಷ ಕಳೆದುಕೊಂಡ ಮಹಿಳೆ ಪಡುಬಿದ್ರಿ: ಆನ್‌ಲೈನ್ ಇನ್ವೆಸ್ಟ್ ಹೆಸರಿನಲ್ಲಿ…

13 minutes ago

ಉಡುಪಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯದಿಂದಾಗಿ ಜನ ಸಾಮಾನ್ಯರ ಗೋಳು ಕೇಳುವವರಿಲ್ಲ : ಕುತ್ಯಾರು ನವೀನ್ ಶೆಟ್ಟಿ- vishwanews24

ಉಡುಪಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ: ಬಿಜೆಪಿಯಿಂದ ತೀವ್ರ ಹೋರಾಟದ ಎಚ್ಚರಿಕೆ ಉಡುಪಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯದಿಂದಾಗಿ ಜನ…

18 minutes ago

ಬೈಂದೂರು: ಮೀನುಗಾರರ ಸಹಕಾರ ಸಂಘಕ್ಕೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು – vishwanews24

ಬೈಂದೂರು: ಮೀನುಗಾರರ ಸಹಕಾರ ಸಂಘಕ್ಕೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು ಬೈಂದೂರು: ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ…

26 minutes ago

ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಪ್ರವಾಸ ಬಂದಿದ್ದ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ – vishwanews24

ಚಿಕ್ಕಮಗಳೂರು : ಮುಳ್ಳಯ್ಯನಗಿರಿ ಪ್ರವಾಸ ಬಂದಿದ್ದ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ಚಿಕ್ಕಮಗಳೂರು : ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ ಪ್ರವಾಸ…

40 minutes ago

ಕನ್ನಡ ವಿರೋಧಿ ರಾಜ್ಯಪಾಲ ಗೆಹ್ಲೋಟ್ ವಜಾಗೊಳಿಸಿ : ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ಆಗ್ರಹ – vishwanews24

ಕನ್ನಡ ವಿರೋಧಿ ರಾಜ್ಯಪಾಲ ಗೆಹ್ಲೋಟ್ ವಜಾಗೊಳಿಸಿ : ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ಆಗ್ರಹ ಹಿಂದಿ ಭಾಷೆ ಹೇರಿಕೆ ಹುನ್ನಾರ…

46 minutes ago