ಮಂಗಳೂರು: ಶಬರಿಮಲೆ ಯಾತ್ರಾರ್ಥಿಗಳ ದಟ್ಟಣೆಯ ಹಿನ್ನೆಲೆ ಯಲ್ಲಿ ಮಂಗಳೂರು ಜಂಕ್ಷನ್ ಮತ್ತು ತಿರುವನಂತಪುರ ನಾರ್ತ್ ನಿಲ್ದಾಣ ಗಳ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ.
ಮಂಗಳೂರು ಜಂಕ್ಷನ್-ತಿರುವ ನಂತಪುರ ನಾರ್ತ್ ವೀಕ್ಲಿ ಎಕ್ಸ್ ಪ್ರಸ್ ಸ್ಪೆಷಲ್ (ನಂ. 06041) ರೈಲು ಡಿ.7ರಿಂದ ಜ.18ರ ವರಗೆ ಪ್ರತಿ ರವಿವಾರ ಸಂಜೆ 6ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 6.30ಕ್ಕೆ ತಿರುವನಂತಪುರ ನಾರ್ತ್ ತಲುಪಲಿದೆ. ಅದೇ ರೀತಿತಿರುವನಂತಪುರ ನಾರ್ತ್-ಮಂಗ ಳೂರು ಜಂಕ್ಷನ್ ವೀಕ್ಲಿ ಎಕ್ಸ್ಪ್ರೆಸ್ ಸ್ಪೆಷಲ್ (ನಂ.06042) ರೈಲು ಡಿ.8ರಿಂದ ಜ.19ರ ವರಗೆ ಪ್ರತಿ ಸೋಮ ವಾರ ಬೆಳಗ್ಗೆ 8.30ಕ್ಕೆ ತಿರುವನಂತಪುರ ನಾರ್ತ್ ನಿಂದ ಹೊರಟು ಅದೇ ದಿನ ರಾತ್ರಿ 8.30ಕ್ಕೆ ಸೆಂಟ್ರಲ್ ತಲುಪಲಿದೆ.
ಶಬರಿಮಲೆ: 15 ಲಕ್ಷ ದಾಟಿದ ಯಾತ್ರಾರ್ಥಿಗಳ ಸಂಖ್ಯೆ
ಮಂಡಲ- ಮಕರಮಾಸ ಋತುವಿನ 18 ದಿನಗಳು ಪೂರ್ಣಗೊಂಡಿದ್ದು, ಶಬರಿಮಲೆ ತಲುಪಿದ ಒಟ್ಟು ಯಾತ್ರಾರ್ಥಿಗಳ ಸಂಖ್ಯೆ 15 ಲಕ್ಷ ದಾಟಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಡಿ. 3ರಂದು ಸಂಜೆ 7 ಗಂಟೆಯವರೆಗೆ 14,95,774 ಜನರು ದೇವಾಲಯ ತಲುಪಿ ದ್ದಾರೆ. ಸಂಜೆ 7 ಗಂಟೆಯ ಅನಂತರದ ಸಂಖ್ಯೆಯನ್ನು ಸೇರಿಸಿದರೆ,ಅದು 15 ಲಕ್ಷ ಮೀರುತ್ತದೆ. ಬುಧವಾರ ಬೆಳಗ್ಗೆ 12 ರಿಂದ ಸಂಜೆ 7 ಗಂಟೆಯವರೆಗೆ 66,522 ಜನರು ದೇವಾಲಯ ತಲುಪಿದರು.
ಇಂದು ಸನ್ನಿಧಾನದಲ್ಲಿ ಬೆಳಗಲಿದೆ ಕಾರ್ತಿಕ ದೀಪ
ವೃಶ್ಚಿಕ ಮಾಸದ ಕಾರ್ತಿಕ ದಿನವಾದ ಡಿ. 4ರಂದು ಶಬರಿಮಲೆ ಸನ್ನಿಧಾನದಲ್ಲಿ ಕಾರ್ತಿಕ ದೀಪ ಬೆಳಗಲಿದೆ. ಸಂಜೆ ದೀಪಾರಾಧನೆಗೂ ಮುನ್ನ ತಂತ್ರಿ ಕಾಂತಾರ ಮಹೇಶ್ ಮೋಹನ ಕಾರ್ತಿಕ ದೀಪ ಬೆಳಗಿಸುವರು.
ಸನ್ನಿಧಾನದ ಎಲ್ಲ ವಿಗ್ರಹಗಳ ಮುಂದೆ ದೀಪಗಳನ್ನು ಬೆಳಗಿಸಲಾಗುತ್ತದೆ ಮತ್ತು ಮಾಲಿಕಪ್ಪುರಂನಲ್ಲಿ ವಿಶೇಷ ದೀಪಾರಾಧನೆ ಮಾಡಲಾಗುತ್ತದೆ. ವಲಿಯನಾಡಪಂತಲ್, ಪಂಡಿತಾವಲಂ, ದೇವಸ್ವಂ, ಸರಕಾರಿ ಕಟ್ಟಡಗಳು, ವ್ಯಾಪಾರ ಸ್ಥಳಗಳು, ಪಂಪಾ ಮತ್ತು ನಿಲಕ್ಕಲ್‌ನಲ್ಲಿಯೂ ಈ ಸಂದರ್ಭ ದೀಪಗಳನ್ನು ಬೆಳಗಿಸಲಾಗುತ್ತದೆ.
Pr
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…