Featured

ಮಂಗಳೂರು: ಶಾಸಕರ ಅವೈಜ್ಞಾನಿಕ ಕಾಮಗಾರಿಗಳ ಅನುಷ್ಠಾನವೇ ಇಂದಿನ ಕೃತಕ ನೆರೆ ಮತ್ತು ಭೂ ಕುಸಿತಕ್ಕೆ ಮುಖ್ಯ ಕಾರಣ  ಐವನ್‌ ಡಿʼಸೋಜಾ ಆರೋಪ – vishwanews24

ಮಂಗಳೂರು: ಶಾಸಕರ ಅವೈಜ್ಞಾನಿಕ ಕಾಮಗಾರಿಗಳ ಅನುಷ್ಠಾನವೇ ಇಂದಿನ ಕೃತಕ ನೆರೆ ಮತ್ತು ಭೂ ಕುಸಿತಕ್ಕೆ ಮುಖ್ಯ ಕಾರಣ  ಐವನ್‌ ಡಿʼಸೋಜಾ ಆರೋಪ

ಮಂಗಳೂರು: 2019 ರಿಂದ 2023ರವರೆಗೆ ರಾಜ್ಯದ ಬಿಜೆಪಿ ಆಡಳಿತ ಸರಕಾರ ಮತ್ತು ಕಳೆದ 10 ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಬಿ.ಜೆಪಿ ಆಡಳಿತದಿಂದ ನಗರದ ಏಲ್ಲಾ ರಾಜಕಾಲುವೆಗಳು ಮತ್ತು ನೀರು ಹರಿಯುವ ತೋಡುಗಳ ಅಗಲತೆಯು ಕಡಿಮೆಯಾಗಿ, ಕಳಪೆ ಕಾಮಗಾರಿಗಳನ್ನು ನಡೆಸಿ ಸರಕಾರಿ ಹಣವನ್ನು ಪೋಲು ಮಾಡುವುದರ ಮೂಲಕ ಮತ್ತು ಅವೈಜ್ಞಾನಿಕವಾಗಿ, ಮಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳ ಅನುಷ್ಠಾನವೇ ಇಂದಿನ ಕೃತಕ ನೆರೆ ಮತ್ತು ಭೂ ಕುಸಿತಕ್ಕೆ ಮುಖ್ಯ ಕಾರಣವಾಗಿರುತ್ತದೆ ಎಂದು ವಿಧಾನ ಪರಿಷತ್‌ ಶಾಸಕ ಐವನ್‌ ಡಿʼಸೋಜಾ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ ಅವರು, ಬಿಜೆಪಿಯ 9 ವರ್ಷಗಳ ಆಡಳಿತದಲ್ಲಿ ಮತ್ತು ಹತ್ತು ವರ್ಷ ಮಹಾನಗರ ಪಾಲಿಕೆ ಆಡಳಿತದಲ್ಲಿ ಯಾವುದೆಲ್ಲ ಕಾಮಗಾರಿಗಳು ನಡೆಯಲ್ಪಟ್ಟಿದೆ ಮತ್ತು ಅದರಿಂದ ನೆರ ಹಾವಳಿ ಬಾರದಂತೆ ಯಾವ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೀರಿ ? ಎಂದು ದಕ್ಷಿಣ ವಿದಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್‌ ರವರು ಸಾರ್ವಜನಿಕರಿಗೆ ಮುಖ್ಯವಾಗಿ ತಿಳಿಸಲೇಬೇಕಾಗಿದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ಮೂಲಕ ಎಲ್ಲಾ ಅನುದಾನವನ್ನು ಶಾಸಕರು ಯಾವ ಯಾವ ಕಾಮಗಾರಿಗಳಿಗೆ ವಿತರಿಸಿದ್ದಾರೆ ಎಂಬುದರ ಬಗ್ಗೆ ದಾಖಲೆಗಳನ್ನು ತಿಳಿಸಲಿ ? ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಿ 75 ಕೋಟಿ ವಿಶೇಷ ಅನುದಾನವನ್ನು ಅನುಷ್ಠಾನಗೊಳಿಸಿದ ಬಗ್ಗೆ ಮಂಗಳೂರಿನ ರಾಜಕಾಲುವೆಯಗಳು ಹಾಗೂ ಮಳೆಗಾಲದ ಕೃತಕ ನೀರು ಸರಿಯಾಗಿ ಹರಿದು ಹೋಗುವುದಕ್ಕೆ ಯಾವ ಕ್ರಮವನ್ನು ಕೈಗೊಂಡಿದ್ದೀರಿ? ಈ ಬಗ್ಗೆ ಸಂಪೂರ್ಣ ವಿವರವಾದ ಚರ್ಚೆ ನಡೆಯಲಿ ಎಂದು ಸವಾಲು ಹಾಕಿದರು.

ಮಂಗಳೂರು ನಗರದ ವಾರ್ಡ್‌ ನಂ. 25 ದೇರೆಬೈಲ್‌ ಪಶ್ಚಿಮ ಶೇಡಿಗುರಿ ಈರಿ ಪ್ರದೇಶದಲ್ಲಿ ನಿರ್ಮಿಸಿದ ರಾಜ ಕಾಲುವೆಯ ಸಣ್ಣ ಸೇತುವೆಯ ಕಾಮಗಾರಿಯೂ ಇಂದು ಏನಾಗಿದೆ ? ಇದಕ್ಕೆ ಶಾಸಕರಾದ ವೇದವ್ಯಾಸ್‌ ಕಾಮತ್‌ ರವರು ಈ ಬಗ್ಗೆ ಕೂಡಲೇ ಸ್ಥಳ ಪರಿಶೀಲನೆ ಮಾಡಿ. ಕಾಮಗಾರಿಗಳ ಬಗ್ಗೆ ವಿಶ್ಲೇಷಣೆ ಮಾಡಲಿ. ರಾಜ್ಯ ಸರಕಾರದಿಂದ ನಡೆಯುವ ಕಾಮಗಾರಿಗಳು ಶಾಸಕರಾಗಿ ನೀವು ಸೂಚಿಸಿದ ಕಾಮಗಾರಿಗಳು ನೆರೆಹಾವಳಿಯನ್ನು ತಡೆಯುವ ಕಾಮಗಾರಿಗಳ ಪಟ್ಟಿಯಲ್ಲಿ ಇದೆಯೇ? ಇದನ್ನು ಸಾರ್ವಜನಿಕರ ಗಮನಕ್ಕೆ ತನ್ನಿರಿ ಎಂದರು.

ರಾಜ್ಯ ಸರಕಾರ ಬಿಡುಕಾಸು ಬಿಡುಗಡೆ ಮಾಡಿಲ್ಲ ಎಂದು ತಾವುಗಳು ತಮ್ಮ ಪತ್ರಿಕಾ ಹೇಳಿಕೆಯ ಮುಖಾಂತರ ಸುಳ್ಳು ಆರೋಪ ಮಾಡಿದ್ದೀರಿ ತಾವುಗಳು ಶಾಸಕರಾಗಿ ಕಾರ್ಯನಿರ್ವಹಿಸಲು ಅಸಮರ್ಥರು ಎಂಬುದು ತಮ್ಮ ಹೇಳಿಕೆಯ ಮುಖಾಂತರ ಎತ್ತಿ ತೋರಿಸುತ್ತದೆ. ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆಗೆ ನಿಮ್ಮ ಪ್ರಯತ್ನವಾದರೂ ಏನು? ತಮ್ಮ ಮಹಾನಗರ ಪಾಲಿಕೆ ಅಡಳಿತದಲ್ಲಿ ಮಳೆಗಾಲದ ಮುಂಜಾಗೃತಾ ಕ್ರಮವಾಗಿ ನೀವು ಈ ಕಾಮಗಾರಿಗಳನ್ನು ನಡೆಸಬಹುದಿತ್ತಲ್ಲವೇ? ಇದೀಗ ತಮ್ಮ ಉತ್ತರವನ್ನು ಬಯಸುತ್ತೇವೆ. ಮಳೆಹಾನಿ ಕಾಮಗಾರಿಗೆ ದ.ಕ. ಜಿಲ್ಲೆಗೆ ಈಗಾಗಲೇ ರೂ.21ಕೋಟಿ ಹಣವು ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿಯಮದಂತೆ ನರೆಹಾವಳಿಯಿಂದ ಉಂಟಾದ ಎಲ್ಲಾ ನಷ್ಟಗಳಿಗೆ ಪರಿಹಾರವನ್ನು ವಿತರಿಸುವರೇ ಸಾಕಷ್ಟು ಹಣವು ಸರಕಾರದ ಖಾತೆಯಲ್ಲಿ ಇದೆ ಇನ್ನು ಮುಂದಕ್ಕೆ ಹಣದ ಅಗತ್ಯವಿದ್ದರೆ ಅದರ ಸಂಪೂರ್ಣ ಜವಬ್ದಾರಿಯನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತದೆ ಎಂದು ತಮಗೆ ತಿಳಿದಿರಲಿ.

ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ.ನಮ್ಮ ಸರಕಾರವು ಮಳೆಗಾಲದಲ್ಲಿ ಸಾರ್ವಜನಿಕರ ಜೀವಹಾನಿಯಾಗದಂತೆ ತಡೆಯಲು ಪ್ರಯತ್ನಿಸುತ್ತದೆ ಎಂದು ಐವನ್‌ ಡಿʼಸೋಜಾ ತಿಳಿಸಿದ್ದಾರೆ. ತಾವು ಶಾಸಕರಾಗಿ ಶಿಫಾರಸ್ಸು ಮಾಡಿದ ನಿಯಾಮಾವಳಿಗಳ ಪ್ರಕಾರ ಯಾವ ನಷ್ಟವನ್ನು ಪರಿಹಾರ ರೂಪದಲ್ಲಿ ನೀಡಿಲ್ಲವೆಂದು ಶಾಸಕರು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಿಕೊಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ತನಗೆ ಕೊಟ್ಟ ಕುದುರೆಯನ್ನು ಒಡಿಸಲಾರದವನು ಇನ್ನೊಬ್ಬರ ಕುದುರೆಯನ್ನು ಬಯಸುವವನು ವೀರನು ಅಲ್ಲ ಶೂರನು ಅಲ್ಲ ಈ ಬಗ್ಗೆ ಶಾಸಕರ ಅಸಮರ್ಥ ಹೇಳಿಕೆಗೆ ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರು ಪ್ರತಿಕ್ರಿಯೆ ನೀಡಿದ್ದಾರೆ.

Vishwa News 24

Recent Posts

ಆರ್‌ಎಸ್‌ಎಸ್​ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – vishwanews24

ಆರ್‌ಎಸ್‌ಎಸ್​ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…

7 minutes ago

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ – vishwanews24

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…

35 minutes ago

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…

44 minutes ago

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ – vishwanews24

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ ಚೆನ್ನೈ: ಸಿಎಂ ಸಿ.…

57 minutes ago

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ – vishwanews24

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…

5 hours ago

ಆರೆಸ್ಸೆಸ್ ಅನ್ನು ಹಿಂದೂ ಧರ್ಮಕ್ಕೆ ಹೋಲಿಸಿರುವುದು ಖಂಡನೀಯ: ಬಿ.ಕೆ. ಹರಿಪ್ರಸಾದ್ – vishwanews24

"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…

5 hours ago