Featured

ಮಂಗಳೂರು : ಶ್ವಾನಗಳಿಗೆ ಹರಡುತ್ತಿದೆ ಸಾಂಕ್ರಾಮಿಕ ರೋಗ  – Vishwanews24

ಶ್ವಾನಗಳಲ್ಲಿ ಮೆದುಳು ಜ್ವರ ಲಕ್ಷಣದ ಸಾಂಕ್ರಾಮಿಕ ರೋಗ..

“ಕ್ಯಾನೈನ್‌ ಡಿಸ್ಟೆಂಪರ್‌’ ಹೆಸರಿನ ಈ ಮಾರಣಾಂತಿಕ ಕಾಯಿಲೆ..

ಗಾಳಿಯ ಮೂಲಕ ಒಂದು ನಾಯಿಯಿಂದ ಮತ್ತೂಂದಕ್ಕೆ ಹರಡುವ  ಕಾಯಿಲೆ..

ಮನುಷ್ಯರಿಗೆ ಹರಡುವುದಿಲ್ಲ, ಯಾವುದೇ ರೀತಿಯ ತೊಂದರೆ ಇಲ್ಲ..

ಲಕ್ಷಣಗಳೇನು?..

ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯ ಶ್ವಾನಗಳಲ್ಲಿ ಮೆದುಳು ಜ್ವರ ಲಕ್ಷಣದ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. “ಕ್ಯಾನೈನ್‌ ಡಿಸ್ಟೆಂಪರ್‌’ ಹೆಸರಿನ ಈ ಮಾರಣಾಂತಿಕ ಕಾಯಿಲೆ ನಗರದ ಹಲವು ನಾಯಿಗಳಿಗೆ ಈಗಾಗಲೇ ಹಬ್ಬಿದೆ.

ಒಂದು ನಾಯಿಯಿಂದ ಮತ್ತೂಂದಕ್ಕೆ ಗಾಳಿಯ ಮೂಲಕ ಈ ಕಾಯಿಲೆ ಹರಡುವ ಈ ಕಾಯಿ ಲೆ ಕೈಕಂಬ, ಹರಿಪದವು, ಮೇರಿಹಿಲ್‌, ಪಡೀಲ್‌, ಬಜಾಲ್‌, ಸುರತ್ಕಲ್‌, ಕಾನ ಸಹಿತ ವಿವಿಧ ಭಾಗಗಳಲ್ಲಿ ನಾಯಿಗಳಿಗೆ ಕಂಡುಬರುತ್ತಿದೆ. ಮನೆಗಳಲ್ಲಿ ಸಾಕು ನಾಯಿಗಳಿಗಿಂತಲೂ ಹೆಚ್ಚಾಗಿ ಬೀದಿ ನಾಯಿಗಳಲ್ಲಿ ಹರಡುತ್ತಿದೆ. ಎನಿಮಲ್‌ ಕೇರ್‌ ಟ್ರಸ್ಟ್‌ ಅಧಿಕಾರಿಗಳ ಪ್ರಕಾರ ಸದ್ಯ ನಗರದ ಸುಮಾರು ಶೇ.30ರಿಂದ 40ರಷ್ಟು ಬೀದಿ ನಾಯಿಗಳಲ್ಲಿ ಈ ರೋಗವಿದೆ. ಸರಿಯಾದ ಚಿಕಿತ್ಸೆ ಸಿಗದಿದ್ದರೆ ಈ ಅಂಕಿ ಅಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಬಿಜೆಪಿ ಶಾಸಕರೇ ಕಣ್ಣಿರು ಹಾಕಿದರೆ ಮತದಾರರು ಏನು ಮಾಡಬೇಕು : ಕುಮಾರಸ್ವಾಮಿ – Vishwanews24

ರೋಗ ನಿರೋಧಕ ಶಕ್ತಿ ಹೆಚ್ಚಿರುವ ನಾಯಿಗಳಿಗೆ ಮತ್ತು ಈ ಹಿಂದೆ ಈ ರೋಗಕ್ಕೆ ತುತ್ತಾದ ಶ್ವಾನಗಳಲ್ಲಿ ಅಷ್ಟೊಂದಾಗಿ ಈ ಕಾಯಿಲೆ ಬಾಧಿಸುವುದಿಲ್ಲ. ನಾಯಿಗಳಿಗೆ ವರ್ಷಂಪ್ರತಿ ಲಸಿಕೆ ಹಾಕುವ ಮೂಲಕ ಈ ರೋಗ ಬಾರದಂತೆ ತಡೆಗಟ್ಟಬಹುದು. ಆದರೆ ಬೀದಿ ನಾಯಿಗಳಿಗೆ ಲಸಿಕೆ ನೀಡುವುದು ಸವಾಲಾಗಿದೆ. ಈ ರೋಗಕ್ಕೆಂದು ಪ್ರತ್ಯೇಕ ಲಸಿಕೆ ಇಲ್ಲ. ಬಲದಾಗಿ, ಸುಮಾರು ಏಳು ರೋಗಗಳಿಗೆ ಹೊಂದಿಕೊಳ್ಳುವಂತೆ ಡಿಎಚ್‌ ಪಿಪಿಐ ಲಸಿಕೆ ನೀಡಲಾಗುತ್ತದೆ.

ಲಕ್ಷಣಗಳೇನು?

“ಕ್ಯಾನೈನ್‌ ಡಿಸ್ಟೆಂಪರ್‌’ ರೋಗಕ್ಕೆ ತುತ್ತಾದ ಶ್ವಾನಗಳಲ್ಲಿ ಕಂಡುಬರುವ ಪ್ರಾಥಮಿಕ ಲಕ್ಷಣ ಗಳಂತೆ ಆ ನಾಯಿಗಳು ಮೂಗು, ಕಣ್ಣಿನಿಂದ ಸಿಂಬಳ ಸುರಿಸುತ್ತವೆ, ಊಟ ಬಿಡುತ್ತವೆ, ನಿಶಕ್ತಿಯಿಂದ ಕೂಡಿದ್ದು, ಫಿಟ್ಸ್‌ ಬಂದಂತೆ ವರ್ತಿಸುತ್ತದೆ, ಜೊಲ್ಲು ಸುರಿಸಲು ಆರಂಭಿಸುತ್ತವೆ. ಈ ರೋಗ ಉಲ್ಬಣಗೊಂಡರೆ ಈ ವೈರಸ್‌ ಶ್ವಾನಗಳ ಮೆದುಳು ಮತ್ತು ಶ್ವಾಸಕೋಶ, ಚರ್ಮಗಳಿಗೆ ದಾಳಿಯಿಡುತ್ತದೆ, ಕೊನೆಯಲ್ಲಿ ಸಾವನ್ನಪ್ಪುವ ಸಾಧ್ಯತೆ ಇದೆ. ದೇಸಿ ಮತ್ತು ಪಾಶ್ಚಾತ್ಯ ತಳಿಗಳಲ್ಲಿಯೂ ಈ ರೋಗ ಕಾಣಿಸಿಕೊಳ್ಳುತ್ತದೆ. ಒಮ್ಮೆ ರೋಗ ಬಂದರೆ ಆ ಪ್ರದೇಶದ ಶ್ವಾನಗಳಲ್ಲಿ ಈ ರೋಗ ಗುಣ ಮುಖವಾಗಲು ಸುಮಾರು 4ರಿಂದ 5 ತಿಂಗಳು ತಗಲುತ್ತದೆ ಎನ್ನುತ್ತಾರೆ ವೈದ್ಯರು.

ತಾನು ಮಾದಕ ವ್ಯಸನಿಯಾಗಿದ್ದು, ಆ ಮತ್ತಿನಲ್ಲಿ ಶ್ರದ್ಧಾ ಹತ್ಯೆ ಮಾಡಿದೆ : ಪೊಲೀಸ್ ತನಿಖೆ ವೇಳೆ ಅಫ್ತಾಬ್ – Vishwanews24

ಮನುಷ್ಯರಿಗೆ ತಗಲುವುದಿಲ್ಲ

“ಕ್ಯಾನೈನ್‌ ಡಿಸ್ಟೆಂಪರ್‌’ ಹೆಸರಿನ ಈ ರೋಗ ಸಾಮಾನ್ಯವಾಗಿ ವರ್ಷದ ಎಲ್ಲ ಋತುವಿನಲ್ಲಿ ಇರುತ್ತದೆ. ಆದರೆ ಚಳಿಗಾಲ, ಮಳೆ ಬಿಡುವು ನೀಡಿದ ಸಮಯದಲ್ಲಿ ವೈರಸ್‌ ತೀವ್ರತೆ ಜಾಸ್ತಿ ಇರುತ್ತದೆ. ಒಂದು ಶ್ವಾನದಿಂದ ಮತ್ತೂಂದು ಶ್ವಾನಕ್ಕೆ ಗಾಳಿಯ ಮೂಲಕ ಈ ವೈರಸ್‌ ಹರಡುತ್ತದೆ. ಇದರಿಂದ ಮನುಷ್ಯರಿಗೆ ಹರಡುವುದಿಲ್ಲ ಅಲ್ಲದೆ, ಯಾವುದೇ ರೀತಿಯ ತೊಂದರೆ ಇಲ್ಲ’ ಎನ್ನುತ್ತಾರೆ ಪಶು ವೈದ್ಯರು.

ಬಂಟ್ವಾಳ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ಮಲತಂದೆ ಬಂಧನ – Vishwanews24

ಸಮರ್ಪಕ ಚಿಕಿತ್ಸೆ: ಅಗತ್ಯ ನಗರದಲ್ಲಿ ಶ್ವಾನಗಳಲ್ಲಿ “ಕ್ಯಾನೈನ್‌ ಡಿಸ್ಟೆಂಪರ್‌’ ರೋಗ ಹರಡುತ್ತಿರುವ ಬಗ್ಗೆ ಮಾಹಿತಿ ಇದೆ. ಈ ರೋಗಕ್ಕೆ ಸರಕಾರದಿಂದ ಉಚಿತ ಔಷಧ ಸಿಗುವುದಿಲ್ಲ. ಆದರೆ ರೇಬಿಸ್‌ಗೆ ಕ್ಯಾಂಪ್‌ ಮಾಡಿ ಔಷಧ ನೀಡುತ್ತಿದ್ದೇವೆ. ಒಂದು ಶ್ವಾನದಿಂದ ಮತ್ತೂಂದು ಶ್ವಾನಗಳಿಗೆ ಈ ಕಾಯಿಲೆ ಹರಡುತ್ತದೆ. ಸಮರ್ಪಕ ಚಿಕಿತ್ಸೆ ಸಿಗದಿದ್ದರೆ ಶ್ವಾನಗಳು ಮರಣ ಹೊಂದುವ ಸಂಭವವೂ ಇರುತ್ತದೆ. – ಅರುಣ್‌ಕುಮಾರ್‌ ಶೆಟ್ಟಿ, ಉಪನಿರ್ದೇಶಕರು, ಪಶು ಪಾಲನಾ ಇಲಾಖೆ. ದ.ಕ. ಜಿಲ್ಲೆ

-ನವೀನ್‌ ಭಟ್‌ ಇಳಂತಿಲ

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

1 day ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

1 day ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

1 day ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

1 day ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

1 day ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

2 days ago