Featured

ಮಂಗಳೂರು: ಸಾಕು ಪ್ರಾಣಿ ಹಾಗೂ ಪಕ್ಷಿಗಳ  ಪೋಷಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು: ಜಿಲ್ಲಾಧಿಕಾರಿ ಡಾ. ರಾಜೇಂದ್ರ -Vishwanews24

ಮಂಗಳೂರು: ಸಾಕು ಪ್ರಾಣಿ ಹಾಗೂ ಪಕ್ಷಿಗಳ  ಪೋಷಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು: ಜಿಲ್ಲಾಧಿಕಾರಿ ಡಾ. ರಾಜೇಂದ್ರ -Vishwanews2

ಮಂಗಳೂರು : ಕೋವಿಡ್-19 ಸೋಂಕು ಅಥವಾ ಇನ್ನಿತರ ಯಾವುದೇ ಕಾರಣಗಳಿಂದಾಗಿ ಸಾಕು ಪ್ರಾಣಿ ಹಾಗೂ ಪಕ್ಷಿಗಳ ಪೋಷಣೆ – ರಕ್ಷಣೆ ನಿಲ್ಲಬಾರದು, ಅವುಗಳ ಪೋಷಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಹೇಳಿದರು.

ಅವರು ಜು.14ರ ಬುಧವಾರ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿರುವುದು ಕಂಡುಬರುತ್ತಿದ್ದು, ಅಂತಹ ಪ್ರಾಣಿಗಳ ರಕ್ಷಣೆ ಹಾಗೂ ಪೋಷಣೆಗೆ ಪ್ರಾಣಿ ದಯಾ ಸಂಘವು ಕಾರ್ಯನಿರ್ವಹಿಸುವುದರೊಂದಿಗೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು, ಪ್ರಾಣಿ ಹಿಂಸೆಗಳ ದುಷ್ಟರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಪ್ರಾಣಿಗಳನ್ನು ಮಾರಾಟ ಮಾಡುವುದು ಅಥವಾ ಕೊಲ್ಲುವುದು ಕಂಡುಬಂದಲ್ಲಿ ಪ್ರಾಣಿ ದಯಾ ಸಂಘದ ಸದಸ್ಯರು ಪ್ರಕರಣ ದಾಖಲಿಸಬೇಕು, ಗೋಶಾಲೆ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು, ಜಿಲ್ಲೆಯಲ್ಲಿ ಪ್ರತೀ ಗ್ರಾಮದಲ್ಲಿ ಗೋಮಾಳ ನಿರ್ಮಿಸಿ ಅದರ ನಿರ್ವಹಣೆಯನ್ನು ಸ್ಥಳೀಯ ದೇವಸ್ಥಾನಗಳಿಗೆ ನೀಡಬೇಕು, ಅದಕ್ಕೆ ಸಂಬಂಧಿಸಿದ ಖರ್ಚು-ವೆಚ್ಚವನ್ನು ಜಿಲ್ಲಾಡಳಿತದ ವತಿಯಿಂದ ಭರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಸ ವಿಂಗಡಣೆ ಸರಿಯಾದ ಕ್ರಮದಲ್ಲಿ ಆಗದಿರುವ ಕಾರಣ ಗಾಜು, ಪ್ಲಾಸ್ಟಿಕ್, ಮೂಳೆ ಇನ್ನಿತರ ಅಪಾಯಕಾರಿ ವಸ್ತುಗಳನ್ನು ಪ್ರಾಣಿಗಳು ಸೇವಿಸಿ ಸಾವಿಗೀಡಾಗುತ್ತೀವೆ, ಹಾಗಾಗಿ ತ್ಯಾಜ್ಯ ವಿಂಗಡಣೆಗೆ ಸರಿಯಾದ ಕ್ರಮ ಆಗಬೇಕು, ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲೂ ಸೂಕ್ತವಾಗಿ ಕಸ ವಿಲೇವಾರಿ ಮಾಡುವ ವ್ಯವಸ್ಥೆ ಆಗಬೇಕು ಎಂದು ತಿಳಿಸಿದರು.

ನಗರದ ಫುಟ್‍ಪಾತ್‍ಗಳಲ್ಲಿರುವ ಪೆಟ್ ಶಾಪ್‍ಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ, ಅವುಗಳು ನೋಂದಣಿಯಾಗಿರುವ ಬಗ್ಗೆ ಮಾಹಿತಿ ಪಡೆಯಬೇಕು, ನೋಂದಣಿ ಆಗದ ಪೆಟ್ ಶಾಪ್‍ಗಳ ವಿರುದ್ಧ ಕಾನುನು ಬದ್ದ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ನಗರದ ಉಪ ಪೊಲೀಸ್ ಆಯುಕ್ತ ಹರಿರಾಮ್ ಶಂಕರ್, ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು, ಪ್ರಾಣಿದಯಾ ಸಂಘದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

Vishwa News 24

Recent Posts

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಓರ್ವನ ಮೃತದೇಹ ಪತ್ತೆ -vishwanews24

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನದ…

9 hours ago

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ: ಪೊಲೀಸ್ ಕಮಿಷನರ್ -vishwanews24

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…

15 hours ago

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  -vishwanews24

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  ಬಂಟ್ವಾಳ: ಕಲ್ಲಡ್ಕ ಫ್ಲೈಓವರ್ ಮೇಲೆ ದನಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು…

15 hours ago

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; -vishwanews24

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…

15 hours ago

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

18 hours ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

18 hours ago