Featured

ಮಂಗಳೂರು : ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಇತಿಹಾಸ ಇದ್ರೆ ತೋರ್ಸಿ :  ಖಾದರ್ ಸವಾಲ್ – Vishwanews24

ಮಂಗಳೂರು : ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ

ಒಂದು ಇತಿಹಾಸ ಇದ್ರೆ ತೋರ್ಸಿ :  ಖಾದರ್ ಸವಾಲ್

ಮಂಗಳೂರು: ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಇತಿಹಾಸ ಇದ್ರೆ , ಇತಿಹಾಸ ಪುಸ್ತಕದಲ್ಲಿ ಅದು ಕಾಣ ಸಿಕ್ಕರೆ ಅಥವಾ ಸಾಕ್ಷಿ ಇದ್ರೆ ನನಗೆ ತೋರಿಸುತ್ತೀರಾ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಅವರು ಸವಾಲೆಸೆದರು.

ಸಾವರ್ಕರ್ ಬ್ಯಾನರ್ ವಿವಾದದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ‘ಸಾವರ್ಕರ್ ವಿರುದ್ಧ ಕಾಂಗ್ರೆಸ್‌ಗೆ ಇರುವುದು ಒಂದು ತೆರನಾದ ಸೈದ್ಧಾಂತಿಕ ಭಿನ್ನಾಭಿಪ್ರಾಯ. ನನ್ನ ಪ್ರಶ್ನೆ ಏನು ಕೇಳಿದ್ರೆ ಅಂಡಮಾನ್ ಜೈಲಿಗೆ ಹೋಗಿ ಪಡಬಾರದ ಕಷ್ಟ ಪಟ್ಟು ಹುತಾತ್ಮರಾದವರು ದೇಶಪ್ರೇಮಿಗಳಾ? ಅಥವಾ ಬ್ರಿಟಿಷರಿಗೆ ದಯಾಪಾಲನಾ ಅರ್ಜಿ ಬರೆದು ನಾನು ನಿಮ್ಮ ಜೊತೆ ಇನ್ನು ಹೋರಾಟ ಮಾಡುವುದಿಲ್ಲ ಅಂತ ಹೇಳಿ ಹೋರಾಟ ನಿಲ್ಲಿಸಿದವರು ದೇಶಪ್ರೇಮಿಗಳಾ? ಎಂದು ಖಾರವಾಗಿ ಪ್ರಶ್ನಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಸಾವರ್ಕರ್ ಬ್ಯಾನರ್ ವಿವಾದಕ್ಕೆ ಸಂಬಂಧಿಸಿ ಮಾತನಾಡಿ ‘ ಯಾರಿಗೂ ಯಾರೂ ಹಾಕಿದ ಬ್ಯಾನರ್ ತೆಗೆಯುವ ಹಕ್ಕಿಲ್ಲ. ಆದರೆ ಹಾಕುವವರು ಪರ್ಮಿಷನ್ ತೆಗೆದುಕೊಂಡು ಹಾಕಬೇಕು. ಒಬ್ಬರು ಹಾಕಿದ ಬ್ಯಾನರ್ನ್ನು ಇನ್ನೊಬ್ಬರಿಗೆ ಹೇಳಿ ಒತ್ತಾಯಪೂರ್ವಕವಾಗಿ ಹಾಕುವ ಕ್ರಮ ಸರಿಯಲ್ಲ. ಆದರೆ ಬ್ಯಾನರ್ ಹಾಕುವವರು ಕೂಡಾ ಸದುದ್ದೇಶ ಹೊಂದಿರಬೇಕು.

ಮಂಗಳೂರು: ಅನಧಿಕೃತ ಮತ್ತು ವಿವಾದಾತ್ಮಕ ಫ್ಲೆಕ್ಸ್ ಹಾಕಿದ್ರೆ ನಿರ್ದಾಕ್ಷಿಣ್ಯ ಕ್ರಮ : ಜಿಲ್ಲಾಧಿಕಾರಿ ಸೂಚನೆ – Vishwanews24

ನಮ್ಮ ಕ್ಷೇತ್ರದಲ್ಲಿ ಹಾಗೆ ಯಾರೂ ಕೂಡಾ ತೆಗೆಯುವ ಅವಕಾಶ ಇರಲಿಲ್ಲ. ಬ್ಯಾನರ್ ತೆಗೆಯಲು ಜನಸಾಮಾನ್ಯನು , ಸಂಘ- ಸಂಸ್ಥೆಗಳು ಅದನ್ನು ತೆಗಿಲಿಕ್ಕೆ ಹೇಳಿಲ್ಲ. ಪರ್ಮಿಷನ್ ತೆಗೆದುಕೊಳ್ಳದೆ ಹಾಕಿರುವುದು ತಪ್ಪು ಅದಕ್ಕೆ ತೆಗೆಸಿದ್ದಾರೆ. ಆದರೆ ನಮ್ಮಲ್ಲಿ ಯಾರೂ ಕೂಡಾ ಅದರ ವಿರುದ್ಧ ಅಪಸ್ವರ ಎತ್ತಿಲ್ಲ.

ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ‘ಸ್ವಾತಂತ್ರ್ಯಕ್ಕೆ ಕಷ್ಟ ಪಟ್ಟ, ದೇಶಕ್ಕಾಗಿ ತನ್ನ ಇಡೀ ಆಸ್ತಿ ಬರೆದುಕೊಟ್ಟ ನೆಹರೂರವರ ಫೋಟೋ ಹಾಕದೆ ಬಿಟ್ಟಿದ್ದಾರಲ್ವಾ? ಏನು ಉದ್ದೇಶ. ನಮಗೆ ಒಳ್ಳೇದೇ ಆಯಿತು ಬಿಡಿ. ಯಾರ್ಯಾರ ಫೋಟೋ ಜೊತೆ ನಮ್ಮ ನೆಹರೂರವರ ಫೋಟೋ ಇಡದೇ ಇರುವುದು. ಇಲ್ಲದಿದ್ದರೆ ಇವರ ಘನತೆ ಕಡಿಮೆ ಆಗುತ್ತಿತ್ತು’ ಎಂದು ವ್ಯಂಗ್ಯವಾಡಿದರು.

 

Vishwa News 24

Recent Posts

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

1 minute ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

9 minutes ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

16 minutes ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

24 minutes ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

20 hours ago

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO – vishwanews24

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…

21 hours ago