Featured

ಮಂಗಳೂರು: ಸಿಎಂ ಗೆ ತನ್ನ ತಪ್ಪಿನ ಅರಿವಾದಂತೆ ಇದೆ, ಇನ್ನಾದರೂ ರಾಜಿನಾಮೆ ಕೊಡಲಿ : ಬ್ರಿಜೇಶ್‌ ಚೌಟ – vishwanews24

ಮಂಗಳೂರು: ಸಿಎಂ ಗೆ ತನ್ನ ತಪ್ಪಿನ ಅರಿವಾದಂತೆ ಇದೆ, ಇನ್ನಾದರೂ ರಾಜಿನಾಮೆ ಕೊಡಲಿ : ಬ್ರಿಜೇಶ್‌ ಚೌಟ

ಮಂಗಳೂರು: ಬದುಕುಳಿಯುವ ಕೊನೆಯ ಯತ್ನವಾಗಿ ಸಿಎಂ ಸಿದ್ದರಾಮಯ್ಯ 14 ಸೈಟ್‌ ವಾಪಾಸ್‌ ಕೊಟ್ಟಿರುವುದು ಅವರಿಗೆ ಬುದ್ಧಿ ಬಂದ ಹಾಗೆ ಕಾಣುತ್ತದೆ. ತನ್ನ ತಪ್ಪಿನ ಅರಿವಾದಂತೆ ಇದೆ, ಇನ್ನಾದರೂ ರಾಜಿನಾಮೆ ಕೊಡಲಿ ಎಂದು ಸಂಸದ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಒತ್ತಾಯಿಸಿದ್ದಾರೆ.

ರಾಜಿನಾಮೆ ಕೊಟ್ಟು ಸಂವಿಧಾನದ ಆಶಯಗಳಿಗೆ ಗೌರವ ಕೊಡಲಿ. ಕೇವಲ ಕುರ್ಚಿಗೆ ಅಂಟಿಕೊಳ್ಳುವುದೊಂದೇ ಸಿಎಂ ಆಶಯವಿದ್ದಂತೆ ಕಾಣುತ್ತಿದೆ ಎಂದು ಹೇಳಿದರು.

ಅವೈಜ್ಞಾನಿಕ ನೀತಿಯಿಂದಾಗಿ ರಾಜ್ಯವನ್ನೇ ದಿವಾಳಿ ಹಂತಕ್ಕೆ ಸಿದ್ದರಾಮಯ್ಯ ತಂದಿಟ್ಟಿದ್ದಾರೆ. ಒಂದಿಂಚು ಅಭಿವೃದ್ಧಿ ಇಲ್ಲದೆ ಜನ ಕಂಗೆಟ್ಟಿದ್ದಾರೆ. ವಾಲ್ಮೀಕಿ ನಿಗಮದಿಂದಲೇ ನೇರವಾಗಿ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದಾರೆ. ದಲಿತರ ಜಾಗವನ್ನು ಕಬಳಿಸಿ, ಪತ್ನಿ ಹೆಸರಿಗೆ ಸೈಟ್‌ ಮಾಡಿಕೊಂಡಿದ್ದಾರೆ ಎಂದರು.

ಬಿಜೆಪಿ ತನ್ನ ಹೋರಾಟದಲ್ಲಿ ಯಶಸ್ವಿಯಾಗಿದೆ. ವಿಧಾನಮಂಡಲದ ಒಳಗೆ, ಹೊರಗೆ, ಸಂಸತ್ತಿನಲ್ಲಿ ಸಿಎಂ ಅಕ್ರಮದ ವಿರುದ್ಧ ಹೋರಾಡಿದ್ದೇವೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ ಸಿಎಂ, ಸಾಂವಿಧಾನಿಕ ಹುದ್ದೆಗೆ ಗೌರವ ನೀಡಿಲ್ಲ ಎಂದು ಚೌಟ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

Vishwa News 24

Recent Posts

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಓರ್ವನ ಮೃತದೇಹ ಪತ್ತೆ -vishwanews24

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನದ…

5 hours ago

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ: ಪೊಲೀಸ್ ಕಮಿಷನರ್ -vishwanews24

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…

11 hours ago

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  -vishwanews24

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  ಬಂಟ್ವಾಳ: ಕಲ್ಲಡ್ಕ ಫ್ಲೈಓವರ್ ಮೇಲೆ ದನಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು…

12 hours ago

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; -vishwanews24

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…

12 hours ago

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

14 hours ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

14 hours ago