ಮಂಗಳೂರು : ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬುದಕ್ಕೆ ಬೆಂಬಲ ನೀಡಿ ಸಿಟಿ ಬಸ್‌ನಲ್ಲಿ ತುಳು ಲಿಪಿ ಹಾಕಲಾಗಿದೆ. ಬಸ್‌ನಲ್ಲಿಯೂ ತುಳು ಲಿಪಿ ಪ್ರೀತಿ ವ್ಯಕ್ತವಾಗಿದ್ದು ಈ ಬಸ್ ಈಗ ಎಲ್ಲರ ಗಮನ ಸೆಳೆದಿದೆ.
ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಿಂದ ಅತ್ತಾವರ ಮಾರ್ಗವಾಗಿ ಮಂಗಳಾದೇವಿಗೆ ತೆರಳುವ ಗಣೇಶ್ ಪ್ರಸಾದ್ (ರೂಟ್ ನಂ:27) ಎಂಬ ಹೆಸರಿರುವ ಈ ಬಸ್‌ನ ಮಾಲಿಕರು ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಅವರು.
ಈ ಬಸ್‌ಗೆ ಇತ್ತೀಚೆಗೆ ಪೈಂಟಿಂಗ್ ಮಾಡಲಾಗಿದ್ದು ಆ ಸಮಯದಲ್ಲಿ ಬಸ್‌ನ ಎರಡೂ ಬದಿಗಳಲ್ಲಿ ಬಸ್‌ನ ಹೆಸರು ಅಥವಾ ರೂಟ್ ಬರೆಯುವ ಬದಲಿಗೆ ತುಳು ಲಿಪಿ ಅ ದಿಂದ ಅಃ ವರೆಗೆ ಬರೆದಿದ್ದು, ಪಕ್ಕದಲ್ಲಿಯೇ ಹ್ಯಾಶ್ ಟ್ಯಾಗ್ ಮುಖೇನ #TuluTo8thSchedule #TuluofficiallnKA_KL ಎಂದು ಬರೆಯಲಾಗಿದೆ.
ದಿಲ್ ರಾಜ್ ಆಳ್ವ ಅವರ ಮಾಲಕತ್ವದಲ್ಲಿ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಿಂದ ಅತ್ತಾವರ ಮುಖೇನ ಮಂಗಳಾದೇವಿಗೆ ತೆರಳುವ ಐದು ಬಸ್‌ಗಳಿದ್ದು ಈ ಮೊದಲೇ ಆ ಬಸ್‌ಗಳಿಗೆ ವಿಶೇಷ ರೀತಿಯಲ್ಲಿ ಪೈಟಿಂಗ್ ಮಾಡಿದ್ದಾರೆ.
ಈ ಬಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದು ಮಂಗಳೂರಿನ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…