ಉಡುಪಿ: ಮಂಗಳೂರು- ಸೂರತ್ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲು ಇನ್ನು ಮುಂದೆ ವಾರದಲ್ಲಿ ಎರಡು ದಿನ ನಿರಂತರ ಸಂಚರಿಸಲಿದೆ.
ರೈಲು 09057 / 09058 ಸಂಖ್ಯೆಯಡಿ ಸೂರತ್- ಮಂಗಳೂರು ಜಂಕ್ಷನ್ ನಡುವೆ ವಿಶೇಷ ಸೇವೆ ಒದಗಿಸುತಿತ್ತು. ಜೂ.3ರಿಂದ 19057 / 19058 ರೈಲು ಸಂಖ್ಯೆಯಡಿ ನಿರಂತರ ಸೇವೆ ಒದಗಿಸಲಿದೆ.
ಇದನ್ನೂ ಓದಿ:
19057 ರೈಲು ಜೂ. 3ರಿಂದ ಪ್ರತೀ ಬುಧವಾರ ಹಾಗೂ ರವಿವಾರ ಸಂಜೆ 7.35ಕ್ಕೆ ಸೂರತ್‌ನಿಂದ ಹೊರಟು ಮಾರನೆ ದಿನ ಸಂಜೆ 7.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. 19058 ರೈಲು ಜೂ.4ರಿಂದ ಪ್ರತಿ ಗುರುವಾರ ಹಾಗೂ ಸೋಮವಾರ ರಾತ್ರಿ 10.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಮಾರನೆ ದಿನ ರಾತ್ರಿ 11.45ಕ್ಕೆ ಸೂರತ್ ತಲುಪಲಿದೆ.
ಈ ರೈಲಿಗೆ ಉದ್ಘಾ, ವಲ್ನಾಡ್, ವಾಪಿ, ವಾಸೈ ರೋಡ್, ಪನ್ವೇಲ್, ರೋಹಾ, ಚಿಪ್ಸನ್, ರತ್ನಾಗಿರಿ, ಸಿಂಧುದುರ್ಗ, ಸಾವಂತವಾಡಿ, ತಿವಿಂ, ಮಡ್‌ಗಾಂವ್, ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಬೈಂದೂರು (ಮೂಕಾಂಬಿಕಾ ರೋಡ್), ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ಸಹಿತ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಇದನ್ನೂ ಓದಿ:
ರೈಲಿನಲ್ಲಿ 20 ಬೋಗಿಗಳು ಇರಲಿವೆ. 8 ಎಸಿ, ಕೋಚ್, 6 ಕ್ಲೀಪರ್ ಕೋಚ್, 4 ಜನರಲ್ ಕೋಚ್ ಹಾಗೂ 2 ಎಸ್ಎಲ್ ಆರ್ಡಿ ಕೋಚ್‌ಗಳು ಇರಲಿವೆ.
ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…
ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…
ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…
ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…
ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ , ಪುತ್ರ ನಾಪತ್ತೆ ; ಪ್ರಕರಣ ದಾಖಲು…
ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…