ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ ಖಾರದ ಪುಡಿ ಎರಚಿ ಸ್ಕೂಟರ್ ಡಿಕ್ಕಿಯಲ್ಲಿದ್ದ 46 ಸಾವಿರ ರೂ. ದೋಚಿರುವ ಘಟನೆ ವರದಿಯಾಗಿದೆ.
ಗಂಜಿಮಠದ ಝಾರಾ ಹಾಲ್‌ನಲ್ಲಿ ಅಡುಗೆ ಮೇಲ್ವಿಚಾರಕರಾಗಿದ್ದ ಮಹಮ್ಮದ್ ಮನ್ಸೂರ್ ಹಣ ಕಳೆದು ಕೊಂಡವರು.
ಇದನ್ನೂ ಓದಿ:
ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದಂತೆ, ಎ.26ರಂದು ರಾತ್ರಿ 9:10ರ ವೇಳೆಗೆ ಬಂಗ್ಲಗುಡ್ಡೆಗೆ ತಲುಪಿ ದ್ದಾರೆ. ಆಗ ರಸ್ತೆಯ ಬದಿಯಲ್ಲಿ ನಿಂತಿದ್ದ ಇಬ್ಬರು ಯುವಕರು ಮನ್ಸೂರ್ ಅವರ ಸ್ಕೂಟರ್‌ನ್ನು ನಿಲ್ಲಿಸಿ, ತಮ್ಮ ಸ್ಕೂಟರ್ ಕೆಟ್ಟಿದೆ ಎಂದು ಹೇಳಿದ್ದಾರೆ. ಮನ್ಸೂರ್ ಯುವಕರ ಸ್ಕೂಟರ್ ನ ಹತ್ತಿರ ಹೋಗಿ ಪೆಟ್ರೋಲ್ ಪೈಪನ್ನು ಪರಿಶೀಲಿಸುತ್ತಿರುವಾಗ, ಯುವಕರು ತಮ್ಮ ಬಳಿ ಇದ್ದ ಖಾರದ ಪುಡಿಯನ್ನು ಮನ್ಸೂರ್ ಕಣ್ಣಿಗೆ ಎರಚಿದ್ದಾರೆ. ಮನ್ಸೂರ್ ಬಳಿಕ ರಸ್ತೆಯಲ್ಲಿ ಬರುತ್ತಿದ್ದ ವಾಹನವೊಂದನ್ನು ನಿಲ್ಲಿಸಿ ಅವರರಿಂದ ನೀರು ಪಡೆದು, ಮುಖ ತೊಳೆದು ಸ್ಕೂಟರ್‌ನ ಡಿಕ್ಕಿ ತೆರೆದು ನೋಡಿದಾಗ 46,000 ರೂ. ನಗದನ್ನು ದುಷ್ಕರ್ಮಿಗಳು ಎಗರಸಿಕೊಂಡು ಪರಾರಿಯಾಗಿರುವುದು ಗೊತ್ತಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…