Featured

ಮಂಗಳೂರು : ಸ್ಮಾರ್ಟ್ ಸಿಟಿ – ಮಾದರಿ ರಸ್ತೆ, ಗುಂಡಿಗಳ ಸ್ಪರ್ಧೆ–2022 : ರಸ್ತೆ ಗುಂಡಿ ಪೋಟೋ ಕ್ಲಿಕ್ಕಿಸಿ,, ಬಹುಮಾನ ಗೆಲ್ಲಿರಿ : ಐವನ್ ಡಿಸೋಜ – Vishwanews24

ಸ್ಮಾರ್ಟ್ ಸಿಟಿ– ಮಾದರಿ ರಸ್ತೆ, ಗುಂಡಿಗಳ ಸ್ಪರ್ಧೆ–2022 : ರಸ್ತೆ ಗುಂಡಿ ಪೋಟೋ ಕ್ಲಿಕ್ಕಿಸಿ,, ಬಹುಮಾನ ಗೆಲ್ಲಿರಿ

ದೊಡ್ಡ ಮತ್ತು ಅಪಾಯಕಾರಿ ಗುಂಡಿಗಳನ್ನು ಗುರುತಿಸಿದವರಿಗೆ ಬಹುಮಾನ

ಚಿತ್ರ, ಸಣ್ಣ ವಿಡಿಯೊ ಹಾಗೂ ಜಿಪಿಎಸ್ ಲೊಕೇಷನ್ ಕಳುಹಿಸಲು ಮೊಬೈಲ್‌ ನಂ . 9731485875

ಪ್ರಥಮ ಬಹುಮಾನ (₹ 5,000

ದ್ವಿತೀಯ ಬಹುಮಾನ ₹ 3,000

ತೃತೀಯ ಬಹುಮಾನ 2,000

ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಹೇಳಿಕೆ

ಮಂಗಳೂರು, : ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಆಡಳಿತ ವಿರೋಧಿಸುವ ಜತೆಗೆ ಸರ್ಕಾರದ ಗಮನ ಸೆಳೆಯಲು ‘ಸ್ಮಾರ್ಟ್ ಸಿಟಿ– ಮಾದರಿ ರಸ್ತೆ, ಗುಂಡಿಗಳ ಸ್ಪರ್ಧೆ–2022’ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಮಂಗಳವಾರ ಇಲ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮಹಾನಗರ ವ್ಯಾಪ್ತಿಯಲ್ಲಿರುವ ದೊಡ್ಡ ಮತ್ತು ಅಪಾಯಕಾರಿ ಗುಂಡಿಗಳನ್ನು ಗುರುತಿಸಿದವರಿಗೆ ಬಹುಮಾನ ನೀಡುವ ಮೂಲಕ ಜನಜಾಗೃತಿ ಮೂಡಿಸಲು ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಆ.24ರಿಂದ 29ರ ಸಂಜೆ 5 ಗಂಟೆಯ ಒಳಗೆ 9731485875 ಈ ಮೊಬೈಲ್‌ ಫೋನ್ ಸಂಖ್ಯೆಗೆ ಚಿತ್ರ, ಸಣ್ಣ ವಿಡಿಯೊ ಹಾಗೂ ಜಿಪಿಎಸ್ ಲೊಕೇಷನ್ ಕಳುಹಿಸಬಹುದು.

ಪ್ರಥಮ ಬಹುಮಾನವನ್ನು ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ವತಿಯಿಂದ (₹ 5,000), ದ್ವಿತೀಯ ಬಹುಮಾನವನ್ನು ತ್ರಿಚಕ್ರ ಗೂಡ್ಸ್, ಟೆಂಪೊ ಮಾಲೀಕ, ಚಾಲಕರ ಸಂಘದ ವತಿಯಿಂದ (₹ 3,000), ತೃತೀಯ ಬಹುಮಾನವನ್ನು ಕುಲಶೇಖರ ಮಹಿಳಾ ದ್ವಿಚಕ್ರ ವಾಹನ ಚಾಲಕ, ಮಾಲೀಕರ ಪರವಾಗಿ (₹ 2,000) ನೀಡಲಾಗುವುದು’ ಎಂದರು.

ಗಿಲ್ಬರ್ಟ್ ಡಿಸೋಜ, ಮಹೇಶ್ ಕೋಡಿಕಲ್, ಅಬ್ದುಲ್ ಅಜೀಜ್ ಕುದ್ರೋಳಿ ಸ್ಪರ್ಧೆಯ ತೀರ್ಪುದಾರರಾಗಿದ್ದಾರೆ. ಆಯ್ಕೆಯಾದವರಿಗೆ ಆ.30ರಂದು ಮಧ್ಯಾಹ್ನ 3.30 ಗಂಟೆಗೆ ಪಾಲಿಕೆಯ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಕಚೇರಿಯ ಮುಂದೆ ಬಹುಮಾನ ವಿತರಿಸಲಾಗುವುದು ಎಂದರು. ಪ್ರಮುಖರಾದ ರಮಾನಂದ ಪೂಜಾರಿ, ಮಾರ್ಸೆಲ್ ಮೊಂತೆರೊ, ವಸಂತ ಶೆಟ್ಟಿ, ದೀಕ್ಷಿತ್ ಅತ್ತಾವರ, ಮೀನಾ ಟೆಲ್ಲಿಸ್ ಇದ್ದರು,.

ಕಟೀಲು ಮೇಳದಿಂದ ಕಾಲಮಿತಿ ಯಕ್ಷಗಾನ: ಸಂಜೆ 5.30ರಿಂದ ರಾತ್ರಿ 10.30ವರೆಗೆ ಯಕ್ಷಗಾನ ಸೇವೆ – Vishwanews24

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

1 day ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

1 day ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

1 day ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

1 day ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

1 day ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

1 day ago