ಮಂಗಳೂರು : ಆಡಳಿತದಲ್ಲಿರುವ ಸರಕಾರ ಪಿಎಫ್ ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಸ್ವಾಗತಿಸುತ್ತದೆ. ಇದು ಹಿಂದುತ್ವಕ್ಕೆ ಸಿಕ್ಕ ಗೆಲುವು ಎಂದು ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಸರಕಾರ ಪಿಎಫ್ ಐ ಹಾಗೂ ಅದರ ಸಹವರ್ತಿ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿ , ಅದರ ರಾಜಕೀಯ ಮುಖವಾಣಿಯಾದ ಎಸ್ ಡಿಪಿಐಯನ್ನು, ಹಾಗೆ ಬಿಟ್ಟಿರುವುದು ಭಾರತೀಯ ಜನತಾ ಪಕ್ಷದ ಇಚ್ಚಾಶಕ್ತಿಯ ದೋಷ ಎಂದು ತಿಳಿಸಿದರು.
ಇದನ್ನೂ ಓದಿ: ಎಚ್ಚರಿಕೆಯ ನಡೆ ಅಗತ್ಯ.. ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಈ ಎಲ್ಲಾ ಬೆಳವಣಿಗೆಗಳಿಗೆ ಮದರಸಗಳಲ್ಲಿ ಕೊಡುವಂತಹ ರಾಷ್ಟ್ರ ವಿರೋಧ ಶಿಕ್ಷಣವೇ ಕಾರಣ. ಅದರಿಂದ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಪಕ್ಷದ ನೇತೃತ್ವದಲ್ಲಿ ಸರಕಾರ ತಕ್ಷಣ ಮದರಾಸಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಮುಖಾಂತರ ತನಿಖೆಯನ್ನು ಮಾಡಬೇಕು.
ಈವರೆಗೆ ಮದರಾಸಗಳಲ್ಲಿ ನಡೆದಂತಹ ಹಣಕಾಸಿನ ವಹಿವಾಟುಗಳನ್ನು ಇಡಿ ಮುಖಾಂತರ ತನಿಖೆ ನಡೆಸಿ, ತಕ್ಷಣ ಮದರಾಸಗಳ ಮೇಲೆ ನಿರ್ಬಂಧ ಹೇರಬೇಕು ಎಂದರು.
ಇನ್ನು ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅವರು ಮಾತಾಡಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಆರೆಸ್ಸೆಸ್ ನಿಷೇಧಕ್ಕೆ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಎಲ್ಲಿದ್ದವರು, ಏನು ಅರ್ಹತೆಯಿದೆ ಇವರಿಗೆ. ಆರೆಸ್ಸೆಸ್ ಕಾರ್ಯಕರ್ತರ ಮೆಟ್ಟಲಿಗೆ ಸಮ ನೀವು.ದೇಶಭಕ್ತ ಸಂಘಟನೆಯ ಮಾತನಾಡುವಾಗ ಎಚ್ಚರ ಇರಲಿ. ಆರೆಸ್ಸೆಸ್ ಬಗ್ಗೆ ಏನೇ ವ್ಯತಿರಿಕ್ತ ಹೇಳಿಕೆ ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು ಆರೆಸ್ಸೆಸ್ ಯಾವತ್ತೂ ದೇಶ ವಿರೋಧಿ ಕೃತ್ಯ ಮಾಡಿಲ್ಲ.
ಆದ್ರೆ ಎಸ್‌ಡಿಪಿಐ, ಒವೈಸಿಯ ಪಕ್ಷಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು ಅವುಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಕ್ಫ್ ಬೋರ್ಡ್ ಯಾರ ಅಧೀನದಲ್ಲಿದೆ ಎಂದು ಪ್ರಶ್ನಿಸಿದ ಧರ್ಮೇಂದ್ರ ವಕ್ಫ್ ಬೋರ್ಡ್ ಮೂಲಕ ಉಗ್ರಗಾಮಿಗೆ ದೇಣಿಗೆ ಹೋಗುತ್ತದೆ ಎಂದರೇನು ? ತಾಕತ್ತಿದ್ದರೆ ವಕ್ಫ್ ಬೋರ್ಡನ್ನು ನಿಷೇಧಿಸಬೇಕು ಎಂದು ಸರ್ಕಾಕ್ಕೆ ಸವಾಲ್ ಹಾಕಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…