Featured

ಮಂಗಳೂರು : ಹಿಂದೂಯೇತರರು ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರದಿಂದ ದೂರವಿರಿ : ಡಾ.ಭರತ್ ಶೆಟ್ಟಿ – Vishwanews24

ಹಿಂದೂಯೇತರರು ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರದಿಂದ ದೂರವಿರಿ” : ಡಾ.ಭರತ್ ಶೆಟ್ಟಿ

ಮಂಗಳೂರು : ಹಿಂದೂಯೇತರರು ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರದಿಂದ ದೂರವಿರ ಬೇಕೆಂದು ಶಾಸಕ ಡಾ, ಭರತ್ ಶೆಟ್ಟಿ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಾ ಭರತ್ ಹಿಂದೂ ಸಮಾಜದ ಪಾರಂಪರಿಕ ಪುಣ್ಯ ಕ್ಷೇತ್ರಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಇಲ್ಲಿನ ಜಾತ್ರಾ ಮಹೋತ್ಸವದ ಸಂದರ್ಭ ಮಾಡುತ್ತಿದ್ದ ವ್ಯಾಪಾರ ವಹಿವಾಟು ಇನ್ನು ಮುಂದೆ ಹಿಂದೂಯೇತರ ವ್ಯಾಪಾರಿಗಳು ಕೈ ಬಿಡಬೇಕು, ಇದು ಹಿಂದೂ ಸಮಾಜದ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ.ಹಿಂದೂಗಳಿಗೆ ಮಾತ್ರ ಅವಕಾಶವಿರಬೇಕು. ಇತರಡೆ ಮಾಡಿಕೊಂಡು ಹೋಗುವುದಾದರೆ ಅಭ್ಯಂತರವಿಲ್ಲ ಎಂದಿದ್ದಾರೆ. ಧಾರ್ಮಿಕ ನಂಬಿಕೆಯಿಂದ ಹಿಂದೂ ಸಮಾಜದವರು ದೈವ ದೇವರ ದರ್ಶನಕ್ಕೆ ಬರುತ್ತಾರೆ.

ಇಂತಹ ಸಂದರ್ಭ ಮೂರ್ತಿ ಪೂಜೆ ನಂಬದ, ನಿತ್ಯ ಅವಹೇಳನ ಮಾಡುತ್ತಾ ,ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಚಿತ್ರಿಸುವ ಹಿಂದೂಯೇತರ ಜನರಿಂದ ದೇವರಿಗೆ ಹೂ,ಹಣ್ಣು,ಕಾಯಿ ಮತ್ತಿತರ ವಸ್ತುಗಳನ್ನು ಕೊಂಡು ಅರ್ಪಿಸಿದರೆ ದೇವರೂ ಸ್ವೀಕರಿಸಲಾರ. ಇಲ್ಲಿ ಕೇವಲ ದುಡ್ಡು ಮಾಡುವ ಸ್ಥಳವಲ್ಲ.ಬದಲಾಗಿ ನಂಬಿಕೆ, ಶ್ರದ್ಧೆಯೂ ಇರಬೇಕು. ಧಾರ್ಮಿಕ ದತ್ತಿ ಇಲಾಖೆಯ ಕಾಯಿದೆಯನ್ವಯ ದೇವಸ್ಥಾನ ಹಾಗೂ ಧಾರ್ಮಿಕ ಶ್ರದ್ಧಾಕೇಂದ್ರದ ಸುತ್ತ ಹಿಂದೂ ಬಾಂಧವರಿಗೆ ಮಾತ್ರ ಇರುವ ಅವಕಾಶವನ್ನು ಸರಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಮುಸ್ಲಿಂರ ಖಟ್ಟರ್ ಪದ್ದತಿಯಾದ ಹಲಾಲ್ ನಿಷೇಧ ಹೋರಾಟ ಸಂದರ್ಭ ಮುಸ್ಲಿಂ ಸಮಾಜಕ್ಕೆ ಬೆಂಬಲ ನೀಡಿದವರು, ಇದೀಗ ಹಿಂದೂಗಳಿಗೂ ವ್ಯಾಪಾರಕ್ಕೆ ಬೆಂಬಲ ನೀಡಿ ತಮ್ಮ ಜಾತ್ಯಾತೀತತೆಯನ್ನು ಸಾಬೀತು ಪಡಿಸಬೇಕು.

ಇಂದು ಹಿಂದೂ ಧರ್ಮದವರು ಮಾಡುತ್ತಿರುವ ಅಭಿಯಾನದ ವಿರುದ್ದ ದೂರು ದಾಖಲಿಸಿದವರು ಮುಂದೆ ದೇವಸ್ಥಾನ ಸಮಿತಿ, ವ್ಯಾಪಾರದಲ್ಲೂ ಮೀಸಲಾತಿ ತನ್ನಿ ಎಂದರೂ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳವು ಹಿಂದೂ ಆಂಗಡಿಗಳಿಗೆ ಭಗಧ್ವಜ ಕಟ್ಟಿರುವುದು ಅಪರಾಧವಲ್ಲ .ಸರಕಾರದ ಹಿಂದೂ ವಿರೋಧಿ ನಡೆಯನ್ನು ಸವಾಲಾಗಿ ಸ್ವೀಕರಿಸಿ ನ್ಯಾಯಾಲಯದ ಮುಂದೆ ಪ್ರಶ್ನಿಸಿ ನ್ಯಾಯಾಲಯಕ್ಕೂ ಮನವರಿಕೆ ಮಾಡಿ ತಡೆಯಾಜ್ಞೆ ತಂದಿರುವುದು ಹಿಂದೂ ಸಮಾಜಕ್ಕೆ ಸಿಕ್ಕಿದ ಜಯವಾಗಿದೆ.

ನ್ಯಾಯಲಯವೂ ಇದನ್ನು ಪರಿಗಣಿಸಿ ತಡೆ ನೀಡಿದ್ದು ಹಿಂದೂಗಳ ವಿರುದ್ದ ಹೋದ ಸರಕಾರಕ್ಕೂ ನ್ಯಾಯಾಲಯದ ಅದೇಶದಿಂದ ಮುಖಭಂಗವಾಗಿದೆ ಎಂದು ತಿಳಿಸಿದ್ದಾರೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

24 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

1 day ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

1 day ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

1 day ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

1 day ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

1 day ago