Featured

ಮಗಳ ಮದುವೆಗಾಗಿ 30 ದಿನಗಳ ಪೆರೋಲ್ ಮೇಲೆ ಹೊರಬಂದ ರಾಜೀವ್‌ ಗಾಂಧಿ ಹಂತಕಿ ನಳಿನಿ -Vishwanews24

ನವದೆಹಲಿ: ಮಾಜಿ ಪ್ರಧಾನಿ ರಾಜೀವಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್‌ಗೆ ಮದ್ರಾಸ್‌ ಹೈಕೋರ್ಟ್‌ 30 ದಿನಗಳ ಪೆರೋಲ್‌ ಮಂಜೂರು ಮಾಡಿದೆ.

ಜುಲೈ 5 ರಂದು ಪರೋಲ್‌ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್‌ 1 ತಿಂಗಳ ಷರತ್ತು ಬದ್ಧ ಪರೋಲ್‌ಗೆ ಅನುಮತಿ ನೀಡಿದೆ. ಪೆರೋಲ್ಗಾಗಿ ನಳಿನಿಯೇ ವಾದ ಮಂಡಿಸಿದಳು. ಆರು ತಿಂಗಳ ಅವಧಿ ಬಿಡುಗಡೆ ಕೋರಿ ನಳಿನಿ ಮನವಿ ಮಾಡಿದ್ದಳು. ‘ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಶಿಕ್ಷೆಗೆ ಗುರಿಯಾಗಿಸಲಾಗಿದೆ. ತಾಯಿಯಾಗಿ ನನ್ನ ಜವಾಬ್ದಾರಿಯನ್ನು ಪೂರೈಸಬೇಕಿದೆ. ನನ್ನ ಮಗಳ ಮದುವೆ ಸಲುವಾಗಿ ನನ್ನ ಕುಟುಂಬವನ್ನು ಭೇಟಿಯಾಗಬೇಕಿದೆ, ಅಲ್ಲದೆ ದುಡ್ಡಿನ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಅದಕ್ಕೆ 6 ತಿಂಗಳ ಪೆರೋಲ್‌ ನೀಡಿ’ ಎಂದು ಭಾವನಾತ್ಮಕವಾಗಿ ವಾದ ಮಂಡಿಸಿದಳು.

ನಳಿನಿಗೆ ನೀಡುವ ಭದ್ರತಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ. 28 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ನಳಿನಿ ಕಳೆದ ವರ್ಷ ಆಕೆ ತಂದೆ ಅಂತ್ಯಸಂಸ್ಕಾರಕ್ಕೆಂದು ಒಂದು ದಿನದ ಮಟ್ಟಿಗೆ ಪೆರೋಲ್ ಪಡೆದಿದ್ದಳು.

ನಳಿನಿ ಪುತ್ರಿ ಲಂಡನ್ ನಲ್ಲಿ ಮೆಡಿಸಿನ್ ಶಿಕ್ಷಣವನ್ನು ಪಡೆದಿದ್ದಾರೆ. ವೆಲ್ಲೂರಿನಲ್ಲಿ ಇವರ ವಿವಾಹ ಸರಳವಾಗಿ ನೆರವೇರಲಿದೆ ಎಂದು ತಿಳಿದುಬಂದಿದೆ.ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿಗೆ ಗಲ್ಲುಶಿಕ್ಷೆಯನ್ನು ಕೋರ್ಟ್ ವಿಧಿಸಿತ್ತು. ಆದರೆ ಸೋನಿಯಾ ಗಾಂಧಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದರು. ಆ ಬಳಿಕ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ಕೋರ್ಟ್ ತೀರ್ಪು ನೀಡಿತ್ತು. ತದನಂತರ ನಳಿನಿ ಜೈಲಿನಲ್ಲಿಯೇ ಮಗಳಿಗೆ ಜನ್ಮ ನೀಡಿದ್ದಳು.

Vishwa News 24

Recent Posts

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು – vishwanews24

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…

8 minutes ago

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು – vishwanews24

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…

15 minutes ago

ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ : 3 ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು – vishwanews24

ಪುತ್ತೂರು: ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: 3ನೇ ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಪುತ್ತೂರು: ಕಲ್ಲೇಗ ಟೈಗರ್ಸ್…

31 minutes ago

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ – vishwanews24

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ ನವದೆಹಲಿ: ಎಲ್​ಪಿಜಿ(LPG) ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ…

40 minutes ago

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು – vishwanews24

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು ಸುಳ್ಯ,: ತಾಲೂಕಿನ ನಿಂತಿಕಲ್ಲು ಬಳಿ ವಿದ್ಯುತ್ ಕಂಬಕ್ಕೆ ಬೈಕ್…

52 minutes ago

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ – vishwanews24

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ ಹೊಸದಿಲ್ಲಿ: 13 ವರ್ಷಗಳಿಂದ…

2 hours ago