Featured

ಮಡಿಕೇರಿ: ಶವಾಗಾರದಲ್ಲಿ ಆಸ್ಪತ್ರೆ ಯುವತಿಯರ ಜೊತೆ ಸೆಕ್ಸ್ ; ಮೃತ ಮಹಿಳೆಯರ ‘ನಗ್ನ’ ಫೋಟೋ ತೆಗೆದು ವಿಕೃತಿ ಮೆರೆದ ಶವಾಗಾರದ ಅಟೆಂಡರ್ – Vishwanews24

ಮಡಿಕೇರಿ: ಶವಾಗಾರದಲ್ಲಿ ಆಸ್ಪತ್ರೆ ಯುವತಿ ಹಾಗೂ ಮಹಿಳೆಯರ ಜತೆ ಕಾಮದಾಟ ..

ಪೋಸ್ಟ್ ಮಾರ್ಟಂಗೂ ಮೊದಲೇ ಮೃತ ಮಹಿಳೆಯರ ‘ನಗ್ನ’ ಫೋಟೋ ತೆಗೆದು ವಿಕೃತಿ ..

ಗುತ್ತಿಗೆ ಆಧಾರದಲ್ಲಿ ಶವಾಗಾರದ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದ ಸೈಯದ್..

ಕೋವಿಡ್ ಟೈಮ್ ನಲ್ಲಿ ಉತ್ತಮ ಕೆಲಸ ಮಾಡಿ ಅಧಿಕಾರಿಗಳ ಪ್ರಶಂಸೆಗೆ ಪಾತ್ರನಾಗಿದ್ದ ಸೈಯದ್..

ಮಡಿಕೇರಿ: ಪೋಸ್ಟ್ ಮಾರ್ಟಂ ಮಾಡುವ ಕೊಠಡಿಯಲ್ಲಿ ಆಸ್ಪತ್ರೆಯ ಯುವತಿ ಹಾಗೂ ಮಹಿಳೆಯರನ್ನು  ಕರೆಸಿ ಕಾಮದಾಟ ಹಾಗೂ ಮೃತಪಟ್ಟ ಮಹಿಳೆಯರ ನಗ್ನ ಫೋಟೋಗಳನ್ನು  ತನ್ನ ಮೊಬೈಲ್‍ನಲ್ಲಿ ತೆಗೆದುಕೊಂಡು ಶವಗಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ವಿಕೃತಿ ಮೆರೆದಿದ್ದಾನೆ.

ಕೊಡಗು  ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಈ ಘಟನೆ ನಡೆದಿದೆ. ಸೈಯ್ಯದ್ ಎಂಬಾತ ಈ ಹೇಯ ಕೃತ್ಯವನ್ನು ಎಸಗಿದ ವ್ಯಕ್ತಿಯಾಗಿದ್ದಾನೆ. ಸಯ್ಯದ್ 2021ರ ಏಪ್ರಿಲ್ ತಿಂಗಳಿನಲ್ಲಿ ಗುತ್ತಿಗೆ ಆಧಾರದಲ್ಲಿ ಶವಾಗಾರದ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದ್ದ. ಈತನಿಗೆ ಕೋವಿಡ್ ಸಂದರ್ಭದಲ್ಲಿ ತುಂಬಾ ಶ್ರಮಿಸಿದ್ದಾನೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಶಂಸಿಸಿ ಸನ್ಮಾನಿಸಿದ್ದರು.

ಆದರೆ ಸೈಯ್ಯದ್ ಶವಾಗಾರದಲ್ಲಿ ಕೆಲಸ ಮಾಡಿಕೊಂಡೇ ಹೊರಪ್ರಪಂಚಕ್ಕೆ ಗೊತ್ತಾಗದಂತೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಸೈಯದ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲವು ಮಹಿಳೆಯರನ್ನು ಫೋನ್ ಕರೆಮಾಡಿ ಶವಾಗಾರಕ್ಕೆ ಕರೆಸಿಕೊಳ್ಳುತ್ತಿದ್ದ. ಶವಗಾರದಲ್ಲೇ ತನ್ನ ಹಲವು ಮಹಿಳೆಯರ ಜೊತೆ ಸೆಕ್ಸ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಅಪಘಾತ ಸೇರಿದಂತೆ ನಾನಾ ರೀತಿಯಲ್ಲಿ ಸತ್ತು ಶವಾಗಾರಕ್ಕೆ ಸೇರುತ್ತಿದ್ದ ಮಹಿಳೆಯರ ನಗ್ನ ಫೋಟೋಗಳನ್ನು ತೆಗೆದು ತನ್ನ ಮೊಬೈಲ್‍ನಲ್ಲೂ ಇಟ್ಟುಕೊಂಡಿದ್ದ. ಇದನ್ನೂ ಓದಿ: ಜನವರಿಯಿಂದ ಕರಾವಳಿ ಜಿಲ್ಲೆಗಳಲ್ಲಿ ಪಡಿತರದಲ್ಲಿ ಕುಚಲಕ್ಕಿ ಲಭ್ಯ – Vishwanews24

ಸೈಯದ್ ತಿಂಗಳ ಹಿಂದೆ ಮಡಿಕೇರಿ ನಗರದ ಮನೆಯೊಂದಕ್ಕೆ ನುಗ್ಗಲು ಯತ್ನಿಸಿ ಈ ವೇಳೆ ಜನರಿಗೆ ಸಿಕ್ಕಿಬಿದ್ದಿದ್ದ. ಆಗ ಆತನಿಗೆ ಗೂಸಾ ಕೊಟ್ಟಿದ್ದ ಜನರು ಆತನ ಫೋನ್ ಅನ್ನು ಪೊಲೀಸ್ ವಶಕ್ಕೆ ನೀಡಿದ್ದರು. ಆತನ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಆತನ ಯಾರೊಂದಿಗೆಲ್ಲಾ, ಏನೆಲ್ಲಾ ಮಾತನಾಡಿದ್ದಾನೆ ಎನ್ನುವುದು ಬಟಾಬಯಲಾಗಿದೆ.

ಸಾಕಷ್ಟು ಹೆಣ್ಣು ಮಕ್ಕಳು, ಮಹಿಳೆಯರನ್ನು ಸಯ್ಯದ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನುವುದು ಗೊತ್ತಾಗಿದೆ. ಯಾರಾದರೂ ಮಹಿಳೆಯರು, ಹೆಣ್ಣುಮಕ್ಕಳು ಸತ್ತು ಅವರ ಮೃತದೇಹಗಳನ್ನು ಶವಾಗಾರಕ್ಕೆ ಹಾಕಿದರೆ, ಪೋಸ್ಟ್ ಮಾರ್ಟಂಗೂ ಮೊದಲೇ ಈ ಕಿರಾತಕ ಆ ಸತ್ತ ಮಹಿಳೆಯರ, ಹೆಣ್ಣುಮಕ್ಕಳ ಬೆತ್ತಲೇ ಮೃತದೇಹಗಳ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ತೆಗೆದುದಿಟ್ಟುಕೊಳ್ಳುತ್ತಿದ್ದ ಎನ್ನುವ ಘೋರ ವಿಷಯವೂ ಗೊತ್ತಾಗಿದೆ. ಇದನ್ನೂ ಓದಿ: ಉಡುಪಿ: ಕರ್ತವ್ಯಲೋಪ -ಬೈಂದೂರು BEO ಮಂಜುನಾಥ್‌ ಅಮಾನತು ಮಾಡಿದ ಸರ್ಕಾರ – Vishwanews24

ಸಯ್ಯದ್‍ನ ದುಷ್ಕೃತ್ಯ ಗೊತ್ತಾಗುತ್ತಿದ್ದಂತೆ ಸಯ್ಯದ್ ವಿರುದ್ಧ ಹಿಂದೂ ಜಾಗರಣಾ ವೇದಿಕೆಯು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಹಾಗೂ ಡೀನ್‍ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜು ಡೀನ್ ಕಾರಿಯಪ್ಪ ಅವರು ಸಯ್ಯದ್ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ್ದಾರೆ. ಇದೀಗ ಘಟನೆ ಸಂಬಂಧಿಸಿ ಮಡಿಕೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago