ಮಂಗಳೂರು : ಮಹಾಮಳೆಯ ಅವಾಂತರದಿಂದ ಸಂಪರ್ಕ ಕಡಿದುಕೊಂಡಿದ್ದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ-ಮಡಿಕೇರಿ ರಸ್ತೆಯನ್ನು ಕೇವಲ 20 ದಿನಗಳಲ್ಲಿ ಸಂಚಾರ ಯೋಗ್ಯವಾಗಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆ ತನ್ನ ತಾಂತ್ರಿಕ ಕೌಶಲ್ಯವನ್ನು ಎತ್ತಿ ಹಿಡಿದಿದೆ. ಕನಿಷ್ಠ ಆರು ತಿಂಗಳಿಗಿಂತಲೂ ಮೊದಲು ಕಾಮಗಾರಿ ಪೂರ್ಣವಾಗುವುದು ಸಾಧ್ಯವೇ ಎಂದು ಪ್ರಶ್ನಾರ್ಥಕ ಚಿಹ್ನೆಯಂತೆ ಗೋಚರಿಸಿದ್ದ ಪರಿಸರದಲ್ಲೀಗ ಪ್ರಾಧಿಕಾರ ಕ್ಷಿಪ್ರ ಕ್ರಾಂತಿಯನ್ನೇ ನಡೆಸಿದೆ.
ಆ. 14ರಿಂದ ಮದೆನಾಡು, ಬಳಿಕ ಮೊಣ್ಣೆಂಗೇರಿ ಹಾಗೂ ಜೋಡುಪಾಲದಲ್ಲಿ ಗುಡ್ಡ ಕುಸಿತ ಹಾಗೂ ಜಲಸ್ಫೋಟದಿಂದ ಹೆದ್ದಾರಿಯೇ ಮಾಯವಾಗಿತ್ತು. ಸಂಪಾಜೆ-ಮಡಿಕೇರಿ ಮಧ್ಯೆ 14 ಕಿ.ಮೀ. ದೂರದಲ್ಲಿ ಮೂರು ಕಡೆಗಳಲ್ಲಿ ಹೆದ್ದಾರಿಯಲ್ಲೇ
ಬೃಹತ್ ಪ್ರಪಾತ ಸೃಷ್ಟಿಯಾಗಿತ್ತು.
ಪರ್ಯಾಯ ಮಾರ್ಗ ರಚನೆ ವಿನಃ ಬೇರೆ ದಾರಿ ಇಲ್ಲ ಎಂಬ ತೀರ್ಮಾನಕ್ಕೆ ಸ್ಥಳೀಯರು ಬಂದಿದ್ದರು. ಆದರೆ ಬಳಿಕ ಆ. 21ರಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಜೋಡು ಪಾಲದಿಂದ ದ.ಕ. ವಿಭಾಗ ಹಾಗೂ ಮದೆನಾಡಿನಿಂದ ಕೊಡಗು ಹೆದ್ದಾರಿ ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾಮಗಾರಿ ನಡೆಸಿದರು. ಸೆ.೧೧ರಂದು ಲಘು ವಾಹನ ಓಡಾಡುವಷ್ಟು ಕಾಮಗಾರಿ ಪೂರ್ತಿಗೊಂಡಿತ್ತು.
20 ದಿನದಲ್ಲಿ ರಸ್ತೆ ದುರಸ್ತಿ ಹೇಗೆ?: ಮೂರು ಕಡೆ ಉಂಟಾದ ಪ್ರಪಾತವನ್ನು ಮುಚ್ಚುವುದು ಹೆದ್ದಾರಿ ಇಲಾಖೆಗೆ ಸವಾಲಿನ ಕೆಲಸವಾಗಿತ್ತು. ಮೊದಲು, ಭೂಕುಸಿತದಿಂದಾಗಿ ಬಿದ್ದಿದ್ದ ಮುರಿದ ಮರಗಿಡಗಳನ್ನು ಅಡಿಗೆ ಹಾಕಿ ಮೇಲ್ಭಾಗದಲ್ಲಿ ಮಣ್ಣು ತುಂಬಿಸಿ ಮತಟ್ಟುಗೊಳಿಸಲಾಯಿತು. ಆದರೆ ಇದರ ಮೇಲೆ ವಾಹನ ಸಂಚರಿಸಿದರೆ, ಏಕಾಏಕಿ ಮತ್ತೆ ಕುಸಿತ ಸಂಭವಿಸುವ ಸಾಧ್ಯತೆಯಿಂದ ಅಡಿಗೆ ಹಾಕಿದ ಮರಗಿಡಗಳನ್ನು ತೆರವುಗೊಳಿ ಸಲಾಯಿತು. ಹೊಸದಾಗಿ ಜಿಯೋ ಫ್ಯಾಬ್ರಿಕ್ ಮತ್ತು ಜಿಯೋ ಗ್ರೇಡ್‌ನ್ನು ಹಾಸಲಾಯಿತು.
ಅದರ ಮೇಲಿನಿಂದ ನಾಲ್ಕು ಹಂತದವರೆಗೆ ಜಲ್ಲಿ ಸೇರಿದಂತೆ ಜಿಎಸ್‌ಬಿ ತುಂಬಿಸಿ ತಾತ್ಕಾಲಿಕವಾದರೂ ರಸ್ತೆ ಗಟ್ಟಿಯಾಗಿರಬೇಕು ಎಂದು ಜಲ್ಲಿ ಮಿಶ್ರಣ ಬಳಸಲಾಯಿತು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…