Featured

ಮಣಿಪಾಲ್‌ ಅಕಾಡೆಮಿ ಆಫ್‌ ಹೆಯರ್‌ ಎಜುಕೇಶನ್‌ [ಮಾಹೆ] : ಕೋವಿಡ್‌ ಸಂದರ್ಭದಲ್ಲಿ ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ ವಿದ್ಯಾರ್ಥಿಗಳಿಗಾಗಿ ಮತ್ತೆ ತೆರೆಯುತ್ತಿರುವ ಕ್ಯಾಂಪಸ್‌ -Vishwanews24

ಮಣಿಪಾಲ್‌ ಅಕಾಡೆಮಿ ಆಫ್‌ ಹೆಯರ್‌ ಎಜುಕೇಶನ್‌ [ಮಾಹೆ] : ಕೋವಿಡ್‌ ಸಂದರ್ಭದಲ್ಲಿ ಸೂಕ್ತ ಸುರಕ್ಷಾ ಕ್ರಮಗಳೊಂದಿಗೆ ವಿದ್ಯಾರ್ಥಿಗಳಿಗಾಗಿ ಮತ್ತೆ ತೆರೆಯುತ್ತಿರುವ ಕ್ಯಾಂಪಸ್‌ -Vishwanews24

ಮಣಿಪಾಲ್‌ : ಭಾರತದ ಶೆಕ್ಷಣಿಕ ಮತ್ತು ಸಂಶೋಧನ ಸಂಸ್ಥೆಗಳಲ್ಲಿ ಉನ್ನತವಾದ ಮನ್ನಣೆಗೆ ಪಾತ್ರವಾಗಿರುವ ಮಣಿಪಾಲ್‌ ಅಕಾಡೆಮಿ ಆಫ್‌ ಹೆಯರ್‌ ಎಜುಕೇಶನ್‌ [ಮಾಹೆ] ಸಂಸ್ಥೆಯು ಕೋವಿಡ್‌ ಸವಾಲಿನ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತೆ ಕ್ಯಾಂಪಸ್‌ನ್ನು ತೆರೆಯುವಲ್ಲಿ ಯೋಜನೆಗಳನ್ನು ಸಿದ್ಧಗೊಳಿಸುತ್ತಿದೆ ಮತ್ತು ಆನ್‌ಲೈನ್‌ನಿಂದ ತರಗತಿಯ ಬೋಧನ ವಿಧಾನಕ್ಕೆ ಬದಲಾಯಿಸಿಕೊಳ್ಳುವ ತಯಾರಿಯಲ್ಲಿದೆ ಎಂದು ಮಣಿಪಾಲ್‌ ಅಕಾಡೆಮಿ ಆಫ್‌ ಹೆಯರ್‌ ಎಜುಕೇಶನ್‌ [ಮಾಹೆ] ಸಂಸ್ಥೆಯ ಸಹಕುಲಾಧಿಪತಿಗಳಾದ ಡಾ. ಎಚ್‌. ಎಸ್‌. ಬಲ್ಲಾಳ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಕುಲಪತಿಗಳಾದ ಲೆಫ್ಟಿನೆಂಟ್‌ ಜನರಲ್‌ [ಡಾ] ಎಂ. ಡಿ. ವೆಂಕಟೇಶ್‌, ರಿಜಿಸ್ಟ್ರಾರ್‌ ಡಾ. ನಾರಾಯಣ ಸಭಾಹಿತ್‌, ಸಾರ್ವಜನಿಕ ಸಂಪರ್ಕ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ, ಪತ್ರಿಕಾಗೋಷ್ಠಿಯ ಸಂಯೋಜಕ ಎಸ್‌. ಪಿ. ಕಾರ್‌ ಉಪಸ್ಥಿತರಿದ್ದರು.

ಉನ್ನತಶಿಕ್ಷಣ ಮತ್ತು ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕ್ಯಾಂಪಸನ್ನು ಮತ್ತೆ ತೆರೆಯುವ ಕುರಿತ ಕರ್ನಾಟಕ ಸರಕಾರದ ಪ್ರಕಟಣೆಯನ್ನು ಅನುಸರಿಸಿ, ಮಾಹೆ ಸಂಸ್ಥೆಯು ಈ ನಿಟ್ಟಿನಲ್ಲಿ ಕಾರ್ಯಶೀಲವಾಗಿದೆ. ಅಲ್ಲದೆ. ಮಾಹೆಯ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳು ನಿಯಮಾವಳಿಗನುಸಾರವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಪ್ಯಾಂಡಮಿಕ್‌ ಕರಿಛಾಯೆಯ ನಡುವೆ ಕ್ಷೇಮವಾಗಿ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಿರುವ ಬಗ್ಗೆ ಸಂಪೂರ್ಣ ಕಾಳಜಿಪಡಿಸಿಕೊಳ್ಳುತ್ತಿದೆ. ಜೊತೆಗೆ, ಭಾರತ ಸರ್ಕಾರವು ಕಳೆದ ವರ್ಷ ಪ್ರಸ್ತಾವಿಸಿದ ಮಾರ್ಗಸೂಚಿಯಂತೆ ಮೊದಲನಿಂದಲೇ ಮಾಹೆಯು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ಯನ್ವಯ ತನ್ನ ಕಾಲೇಜುಗಳ ಪಠ್ಯ ವಿಷಯಗಳನ್ನು ರೂಪಿಸಿಕೊಂಡಿದೆ.

‘‘ಕೋವಿಡ್‌ ಲಸಿಕೆ ಒದಗಿಸುವುದರಿಂದ ತೊಡಗಿ ಕೋವಿಡ್‌ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವವರೆಗೆ ನಮ್ಮ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಿದ್ದೇವೆ. ಪ್ಯಾಂಡಮಿಕ್‌ ಸವಾಲಿನ ಸಮಯದಲ್ಲಿಯೂ ಸುವ್ಯವಸ್ಥೆಯನ್ನು ಕಾಪಾಡಿದ್ದೇವೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ವರೀತಿಯ ಬೆಂಬಲವನ್ನು ನೀಡುತ್ತ ಬಂದಿದ್ದೇವೆ. ಮಾಹೆಯ ಶಿಕ್ಷಣ ಸಂಸ್ಥೆಗಳು ವಿನೂತನವಾದ ಮತ್ತು ವರ್ಚುವಲ್‌ ಮಾದರಿಯ ಶಿಕ್ಷಣ ಪದ್ಧತಿಯನ್ನು ಅಳವಡಿಸಿದುದರಿಂದ ವಿದ್ಯಾರ್ಥಿಗಳ ಪಾಠಪ್ರವಚನಗಳಲ್ಲಿ ನಿರ್ವಿಘ್ನವಾಗಿ ಸಾಗುತ್ತ ಬಂದಿದೆ. ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನ್ನು ಮುಕ್ತವಾಗಿಸುತ್ತಿರುವ ಈ ಸಮಯದಲ್ಲಿಯೂ ಕೋವಿಡ್‌ ನಿಯಂತ್ರಣದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತೇವೆ.’’ ಎಂದು ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌ ಹೇಳಿದರು.

ಮಾಹೆ ಉಪಕುಲಪತಿ ಲೆಫ್ಟಿನೆಂಟ್‌ ಜನರಲ್‌ [ಡಾ] ಎಂ. ಡಿ. ವೆಂಕಟೇಶ್‌ ಮಾತನಾಡಿ, ‘‘ಕೋವಿಡ್‌ ಕಾಲದಲ್ಲಿ ಶೆಕ್ಷಣಿಕ ಕ್ಷೇತ್ರದ ಮೇಲೆ ಆಗಿರುವ ಪರಿಣಾಮವನ್ನು ಗಮನಿಸಿ ಮಾಹೆ ವಿಶ್ವವಿದ್ಯಾನಿಲಯ ಮತ್ತು ಅಧೀನ ಸಂಸ್ಥೆಗಳು ಡಿಜಿಟಲ್‌ ಕಲಿಕೆಯ ಅವಕಾಶವನ್ನು ನೀಡಿವೆ ಮತ್ತು ಪ್ಯಾಂಡಮಿಕ್‌ ನಿರೋಧ ವಾತಾವರಣವನ್ನು ಬೆಳೆಸಲು ಪ್ರಯತ್ನಿಸಿವೆ. ನಾವು ಈಗ ಕ್ಯಾಂಪಸ್ಸನ್ನು ವಿದ್ಯಾರ್ಥಿಗಳಿಗೆ ಮುಕ್ತವಾಗಿಸಲು ಸಿದ್ಧರಾಗಿದ್ದೇವೆ. ನಮ್ಮ ಸಿಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗಾಗಿ ವ್ಯಾಕ್ಸಿನೇಶನ್‌ ಅಭಿಯಾನವನ್ನು ಕೈಗೊಂಡಿದ್ದೇವೆ. ಆನ್‌ಲೆನ್‌ ವಿಧಾನದಿಂದ ಕ್ಲಾಸ್‌ರೂಮ್‌ ವಿಧಾನದತ್ತ ಸುಗಮ ಬದಲಾವಣೆಗೆ ಮಾಹೆ ಸಜ್ಜುಗೊಂಡಿದೆ. ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಸಂಪೂರ್ಣ ಸುರಕ್ಷೆಗಾಗಿ ಸೂಕ್ತ ಮುಂಜಾಗರೂಕತಾ ಕ್ರಮಗಳೊಂದಿಗೆ ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಸದಾ ಅನುಷ್ಠಾನದಲ್ಲಿರಿಸುತ್ತೇವೆ. ಎನ್‌ಇಪಿ-೨೦೨೦ನ್ನು ಅನುಷ್ಠಾನಕ್ಕೆ ತರುವಲ್ಲಿ ಮಾಹೆಯು ಈಗಾಗಲೇ ಸೂಕ್ತ ಪಥನಿರ್ದೇಶನವನ್ನು ರೂಪಿಸಿದೆ’’ ಎಂದು ಹೇಳಿದರು.

‘‘ಮಾಹೆಯಲ್ಲಿ ನಾವು ವಿದ್ಯಾರ್ಥಿಗಳನ್ನು ನಮ್ಮ ವಿದ್ಯಾರ್ಥಿಗಳ ಕ್ಷೇಮವನ್ನು ಅಗ್ರ ಆದ್ಯತೆಯನ್ನಾಗಿರಿಸಿದ್ದೇವೆ. ಈಗಾಗಲೇ ನಮಗೆ ಪಾಠಪ್ರವಚನಗಳನ್ನು ಮತ್ತು ಶೆಕ್ಷಣಿಕವಾಗಿ ನಿರಾತಂಕವಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಕಳೆದವರ್ಷ ೨೦೨೦ರಲ್ಲಿ ಪ್ಯಾಂಡಮಿಕ್‌ ಆರಂಭವಾದ ದಿನಗಳಿಂದಲೇ ನಾವು ನಮ್ಮ ವಿದ್ಯಾರ್ಥಿಗಳಿಗೆ ಪ್ರತಿಹಂತದಲ್ಲಿಯೂ ಮಾರ್ಗದರ್ಶನ ನೀಡುತ್ತ ಬಂದಿದ್ದೇವೆ. ಹಾಗಾಗಿ, ನಮ್ಮ ಪಾಠಪ್ರವಚನಗಳು, ಪರೀಕ್ಷೆಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಅಪಾರಸಂಖ್ಯೆಯ ವಿದ್ಯಾರ್ಥಿಗಳು ಮಾಹೆಯಲ್ಲಿ ಪ್ರವೇಶ ಬಯಸಿ ಮುಂದೆ ಬರುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪ್ಯಾಂಡಮಿಕ್‌ ಸಂಕಷ್ಟವನ್ನು ದಾಟುವಲ್ಲಿ ಪರಸ್ಪರ ಕೈಜೋಡಿಸಲಿದ್ದಾರೆ ಎಂಬುದು ನಮಗೆ ಹೆಮ್ಮೆಯ ಸಂಗತಿ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಣಾನದೊಂದಿಗೆ ಸಮರ್ಥವಾದ ಮತ್ತು ಮೌಲ್ಯಾಧಾರಿತವಾದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಗುರಿಯನ್ನು ಹೊಂದಿದ್ದೇವೆ’’ ಎಂದು ಮಾಹೆಯ ರಿಜಿಸ್ಟ್ರಾರ್‌ ನಾರಾಯಣ ಸಭಾಹಿತ್‌ ತಿಳಿಸಿದರು.

‘‘ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಸಂಸ್ಥೆಯು ವಿಶೇಷ ಸಾಧನೆಯೊಂದಿಗೆ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಉನ್ನತ ಶ್ರೇಣಿಯ ಮಾನ್ಯತೆಯನ್ನು ಪಡೆದಿದೆ. ಮಾಹೆ ಅಧೀನ ಸಂಸ್ಥೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತಮ್ಮ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಿಕೊಂಡಿವೆ’’ ಎಂದು ಸಾರ್ವಜನಿಕ ಸಂಪರ್ಕ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ, ಪತ್ರಿಕಾಗೋಷ್ಠಿಯ ಸಂಯೋಜಕ ಎಸ್‌. ಪಿ.. ಕಾರ್‌ ಹೇಳಿದರು.

ಗುಣಾತ್ಮಕ ಶಿಕ್ಷಣ ಮತ್ತು ಶೈಕ್ಷಣಿಕ ಸೇವೆಯನ್ನು ಒದಗಿಸುವ ಅತ್ಯುತ್ತಮ ಸಂಸ್ಥೆಯಾಗಿ ಮಾಹೆಯು ಈಗ ಪ್ರಧಾನವಾಗಿ ಗುರುತಿಸಿಕೊಂಡಿದೆ. ಹಾಗೂ ಭಾರತದಲ್ಲಿ ಉನ್ನತ ಶಿಕ್ಷಣದ ನಿರಂತರ ಅಭಿವೃದ್ಧಿಗೆ ಮತ್ತು ತೀವ್ರತರವಾದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ. ತನ್ನ ವ್ಯಾಪ್ತಿಯ 21 ಸಂಯೋಜಿತ ಸಂಸ್ಥೆಗಳ ಮೂಲಕ ಅದು ವೈದ್ಯಕೀಯ, ಎಂಜಿನಿಯರಿಂಗ್, ದಂತವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಆರೋಗ್ಯ ಸಂಬಂಧಿ, ಆಡಳಿತ, ಸಂವಹನ, ಜೀವವಿಜ್ಞಾನ, ಹೋಟೆಲ್ ಮ್ಯಾನೇಜ್ ಮೆಂಟ್ ಮುಂತಾದ ಅಧ್ಯಯನ ಶಿಸ್ತನ್ನು ಒಳಗೊಂಡಂತೆ ಕೌಶಲ ವೃದ್ಧಿಸುವ,  ವೈವಿಧ್ಯಮಯವಾದ ಹಲವಾರು ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ಒದಗಿಸುತ್ತದೆ.

ಅಷ್ಟೇ ಅಲ್ಲ. ಸಂಖ್ಯಾಶಾಸ್ತ್ರ, ವಾಣಿಜ್ಯ, ಭೌಗೋಳಿಕ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು, ಯುರೋಪಿಯನ್ ಅಧ್ಯಯನ, ತತ್ವಶಾಸ್ತ್ರ ಮತ್ತು ಮಾನವಿಕ ಅಧ್ಯಯನ, ಅಟೋಮಿಕ್ ಅಂಡ್, ಮಾಲಿಕ್ಯುಲರ್ ಫಿಸಿಕ್ಸ್ (ಪರಮಾಣು ಮತ್ತು ಅಣು ಭೌತಶಾಸ್ತ್ರ) ಮುಂತಾಗಿ ಬೋಧನೆ ಮತ್ತು  ಸಂಶೋಧನೆಗೆ ಸಂಬಂಧಿಸಿದ ಹಲವು ವಿಭಾಗಗಳಿವೆ. ಜಗತ್ತಿನ ವಿವಿಧೆಡೆಗಳ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವೈವಿಧ್ಯಮಯ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಅತ್ಯುತ್ತಮವಾದ ಮೂಲ ಸೌಕರ್ಯಗಳು, ಸುಸ್ಥಿತಿಯಲ್ಲಿರುವ ಉಪಕರಣಗಳು, ಸುಸಜ್ಜಿತವಾದ ಪ್ರಯೋಗಾಲಯಗಳು ಮತ್ತು ಸಮರ್ಪಣಾ ಮನೋಭಾವದ, ಸಮರ್ಥರಾದ ಸಿಬ್ಬಂದಿಯ ಕಾರಣದಿಂದಾಗಿ ಈ ಸಂಸ್ಥೆಯು ಅತ್ಯುತ್ತಮ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ನಿಲ್ಲುತ್ತದೆ. ಜಗತ್ತಿನಲ್ಲಿ ಇಂಗ್ಲಿಷ್ ಮಾತನಾಡುವ 57 ದೇಶಗಳಿಂದ ಹಾಗೂ ಭಾರತದ ಎಲ್ಲೆಡೆಯಿಂದ ವಿದ್ಯಾರ್ಥಿಗಳನ್ನು ಇದು ಆಕರ್ಷಿಸುತ್ತಿದೆ. ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ 2856 ಸಿಬ್ಬಂದಿ ಮತ್ತು 9035 ಮಂದಿ ಸಹಾಯಕ ಮತ್ತು ಸೇವಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಆವರಣದಲ್ಲಿ  ವೈಫೈ ಸಂಪರ್ಕವಿದೆ. ಕ್ರೀಡೆ ಹಾಗೂ ಆಟೋಟಗಳಿಗೂ ಅತ್ಯುತ್ತಮ ಸೌಕರ್ಯ ಒದಗಿಸಲಾಗಿದೆ.

ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮತ್ತು ಸಾಗರೋತ್ತರ ದೇಶಗಳಾದ ದುಬೈ [ಯುಎಇ] ಮತ್ತು ಮಲೇಕಾ [ಮಲೇಶ್ಯಾ] ಗಳಲ್ಲಿ ಮಾಹೆಯ ಕೇಂದ್ರಗಳಿವೆ ಅವು ಜಾಗತಿಕ ಮಟ್ಟದ ಮೂಲಸೌಕರ್ಯಗಳನ್ನು ಹೊಂದಿವೆ ಮತ್ತು ಅತ್ಯುನ್ನತ ಮಟ್ದದ ಶೈಕ್ಷಣಿಕ ಪದ್ಧತಿಯನ್ನು ಹೊಂದಿವೆ. ಮಾಹೆಯ ಅಧ್ಯಯನಶಿಸ್ತುಗಳನ್ನು ಆಯಾ ಕಾಲದ ಶೈಕ್ಷಣಿಕ ಒಲವು ಮತ್ತು ಪ್ರಗತಿಗನುಗುಣವಾಗಿ ಉನ್ನತ ದರ್ಜೆಗೇರಿಸಲಾಗುತ್ತದೆ.

Vishwa News 24

Recent Posts

ಪ್ರವಾಸಿ ಬೋಟ್ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ – vishwanews24

ಪ್ರವಾಸಿ ಬೋಟ್ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ ಜಬಲ್ಪುರ : ಮಧ್ಯಪ್ರದೇಶದ ಜಬಲ್ಪುರದಲ್ಲಿನ ಬಾರ್ಗಿ ಅಣೆಕಟ್ಟು ಬಳಿ ದುರಂತಕ್ಕೀಡಾದ…

7 hours ago

ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ಪಕ್ಷದ ಎಲ್ಲರೂ ಸ್ವಾಗತಿಸುತ್ತಾರೆ : ಗೃಹ ಸಚಿವ ಪರಮೇಶ್ವರ್ – vishwanews24

ಖರ್ಗೆ ಅವರು  ರಾಜ್ಯದ ಮುಖ್ಯಮಂತ್ರಿಯಾದರೆ ಪಕ್ಷದ ಎಲ್ಲರೂ ಸ್ವಾಗತಿಸುತ್ತಾರೆ : ಗೃಹ ಸಚಿವ ಪರಮೇಶ್ವರ್ ಬೆಂಗಳೂರು: ಅನುಭವ ಹೊಂದಿರುವ ಎಐಸಿಸಿ…

8 hours ago

ಪವನ್ ಖೇರಾಗೆ ಕಾನೂನು ಹೋರಾಟದಲ್ಲಿ ಗೆಲುವು : ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶ – vishwanews24

ಪವನ್ ಖೇರಾಗೆ ಕಾನೂನು ಹೋರಾಟದಲ್ಲಿ ಗೆಲುವು - ಸುಪ್ರೀಂ ಕೋರ್ಟ್‌ನ ಮಹತ್ವದ ಆದೇಶ ನವದೆಹಲಿ: ಪವನ್ ಖೇಡಾ ವಿರುದ್ಧ ಅಸ್ಸಾಂ…

9 hours ago

ಸಿಲಿಂಡರ್ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ – vishwanews24

ಸಿಲಿಂಡರ್ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ ಬೆಳಗಾವಿ : ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು…

9 hours ago

ಬೆಳ್ತಂಗಡಿ : ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತ್ಯು – vishwanews24

ಬೆಳ್ತಂಗಡಿ : ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಮೃತ್ಯು ಬೆಳ್ತಂಗಡಿ : ಮನೆಯಲ್ಲಿ ಇಲಿಪಾಷಣ ತೆಗೆದುಕೊಂಡು…

9 hours ago

ಉಡುಪಿ: ಮಹಿಳೆಯ ಉಸಿರುಗಟ್ಟಿಸಿ ಕೊಲೆ ಯತ್ನ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ – vishwanews24

ಉಡುಪಿ: ಮಹಿಳೆಯ ಉಸಿರುಗಟ್ಟಿಸಿ ಕೊಲೆ ಯತ್ನ ಪ್ರಕರಣ; ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಉಡುಪಿ: ನಾಲ್ಕು ವರ್ಷಗಳ ಹಿಂದೆ ಮಂಚಿಕುಮೇರಿಯಲ್ಲಿ…

9 hours ago