Featured

ಮಣಿಪಾಲ: ಡಿವೈಡರ್ ಗೆ ಬೈಕ್ ಡಿಕ್ಕಿ – ಎಂಐಟಿ ವಿದ್ಯಾರ್ಥಿ ಮೃತ್ಯು , ಇಬ್ಬರು ಗಂಭೀರ ಗಾಯ – Vishwanews24

ಮಣಿಪಾಲ: ಡಿವೈಡರ್ ಗೆ ಬೈಕ್ ಡಿಕ್ಕಿ – ಎಂಐಟಿ ವಿದ್ಯಾರ್ಥಿ ಮೃತ್ಯು , ಇಬ್ಬರು ಗಂಭೀರ ಗಾಯ

ಮಣಿಪಾಲ: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಣಿಪಾಲದ ಎಂಐಟಿ ವಿದ್ಯಾರ್ಥಿಯೋರ್ವ ಮೃತಪಟ್ಟು ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಮಣಿಪಾಲದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಎಂಐಟಿ ವಿದ್ಯಾರ್ಥಿ ನಿಖಿಲ್ (23) ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗ ಮೂಲದವರಾಗಿದ್ದು, ಮಣಿಪಾಲದಲ್ಲಿ ವ್ಯಾಸಂಗ ಮಾಡಿಕೊಂಡಿದ್ದರು.

ಮಹೇಂದ್ರ ಜಿ.ಅವರು ಶುಕ್ರವಾರ ತನ್ನ ಸ್ನೇಹಿತರಾದ ನಿಹಾಲ್‌ ಮತ್ತು ನಿಖಿಲ್ ಅವರೊಂದಿಗೆ ಬೈಕ್‌ನಲ್ಲಿ ಕೆಳ ಪರ್ಕಳ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದು, ಬೈಕನ್ನು ನಿಹಾಲ್ ಚಲಾಯಿಸುತ್ತಿದ್ದರು ಎನ್ನಲಾಗಿದೆ.

ಮಹೇಂದ್ರ ಅವರ ಸ್ನೇಹಿತ ನಿಖಿಲ್ ಮಧ್ಯದಲ್ಲಿ ಮತ್ತು ಮಹೇಂದ್ರ ಅವರು ನಿಖಿಲ್ ನ ಹಿಂಬದಿಯಲ್ಲಿ ಕುಳಿತುಕೊಂಡಿದ್ದರು. ಬೈಕ್‌ ಮಣಿಪಾಲದ ಟೈಗರ್‌ ಸರ್ಕಲ್‌ನ ಸ್ವಲ್ಪ ಮುಂದೆ ತಲುಪಿದಾಗ ಆರೋಪಿ ನಿಹಾಲ್‌ ಬೈಕ್‌ ಅನ್ನು ಅತೀ ವೇಗದಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಈ ವೇಳೆ ಮೂರೂ ಮಂದಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ನಿಖಿಲ್ ನ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಉಳಿದ ಇಬ್ಬರಿಗೂ ಗಾಯ ಉಂಟಾಗಿತ್ತು. ಸ್ಥಳೀಯರು ಗಾಯಾಳುಗಳನ್ನು ಆಯಂಬುಲೆನ್ಸ್‌ನಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಉಡುಪಿ : ನೇರ ಸಂದರ್ಶನ -vishwanews24

ಉಡುಪಿ : ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ…

10 minutes ago

ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ : ನಾಲ್ಕು ವರ್ಷದ ಬಾಲಕಿ ದುರ್ಮರಣ -vishwanews24

ಚಾ.ನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ – ನಾಲ್ಕು ವರ್ಷದ ಬಾಲಕಿ ದುರ್ಮರಣ ಚಾಮರಾಜನಗರ: ಗ್ರೈಂಡರ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು…

15 minutes ago

ಉಡುಪಿ : ಎಸ್‌ಐಆರ್ ಹೆಸರಿನಲ್ಲಿ ಅವರ ಮತದಾನದ ಹಕ್ಕನ್ನು ಕಸಿಯುವ ಕೆಲಸವಾಗುತ್ತಿದೆ :ವಿನಯ ಕುಮಾರ್ ಸೊರಕೆ ಆರೋಪ – vishwanews24

ಉಡುಪಿ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಜಿಲ್ಲೆಯ ಮನೆಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ:…

30 minutes ago

ಆರ್‌ಎಸ್‌ಎಸ್​ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – vishwanews24

ಆರ್‌ಎಸ್‌ಎಸ್​ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…

18 hours ago

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ – vishwanews24

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…

19 hours ago

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…

19 hours ago