Featured

ಮಣಿಪಾಲ: ಮೆದುಳು ಜ್ವರ ವೈರಸ್‌ನಿಂದ ಹರಡುವ ಕಾಯಿಲೆ , ಲಸಿಕೆ ಪಡೆಯಲು ಭಯಬೇಡ – Vishwanews24

1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು..

ಮಣಿಪಾಲ: ಮೆದುಳು ಜ್ವರ ವೈರಸ್‌ನಿಂದ ಹರಡುವ ಕಾಯಿಲೆ. ಬ್ಯಾಕ್ಟೀರಿಯಾದಿಂದ ಹಬ್ಬಿದರೆ ಇದಕ್ಕೆ ಆಯಂಟಿಬಯೋಟಿಕ್‌ ಲಭ್ಯವಿದೆ. ಆದರೆ ವೈರಸ್‌ ರೋಗಕ್ಕೆ ಆಯಂಟಿಬಯೋಟಿಕ್‌ ಇಲ್ಲ. ಈ ನಿಟ್ಟಿನಲ್ಲಿ 1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು, ಭಯ ಬೇಡ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಮತ್ತು ಮಣಿಪಾಲ ಕೆಎಂಸಿ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಲೆಸ್ಲಿ ಲೂವಿಸ್‌ ಹೇಳಿದರು.

ಜೆಇ ಲಸಿಕೆ ಪಡೆಯದೆ ಮೆದುಳು ಜ್ವರ ಬಾಧಿಸಿದವರಿಗೆ ಜ್ವರ, ಮೈಕೈ ನೋವು, ವಾಂತಿ, ಫಿಟ್ಸ್‌, ಮಾತನಾಡಲಾಗದ ಸ್ಥಿತಿಯೂ ಎದುರಾಗಬಹುದು. ಪೂರ್ಣ ಗುಣಮುಖರಾಗುವುದು ಕಷ್ಟ. ಸಾವು ಬಂದರೂ ಅಚ್ಚರಿಯಲ್ಲ. ಒಂದು ಬಾರಿ ಮೆದುಳು ನಿಷ್ಕ್ರಿಯಗೊಂಡರೆ ಸರಿಪಡಿಸುವುದು ಕಷ್ಟ ಎಂದರು.

ಹರಡುವ ಬಗೆ ಹೇಗೆ?:

ಹಂದಿಗಳಿಂದ ಪಕ್ಷಿ, ಪಕ್ಷಿಗಳಿಂದ ಸೊಳ್ಳೆ, ಸೊಳ್ಳೆಯಿಂದ ಮನುಷ್ಯರಿಗೆ, ಕೊಕ್ಕರೆಯಂತಹ ಪಕ್ಷಿಗಳಿಂದ ಇದು ಹೆಚ್ಚಾಗಿ ಹರಡುತ್ತದೆ. ಜೂನ್‌ನಿಂದ ಜನವರಿ ವರೆಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಎಂದರು.

ಲಕ್ಷಣಗಳೇನು?:

3ರಿಂದ 5 ದಿನ ಜ್ವರವಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಮಲಗುತ್ತಾರೆ. ನಡೆದಾಡಲು, ಮಾತನಾಡಲು, ನುಂಗಲು ಕಷ್ಟವಾಗುವುದು ಮೆದುಳು ಜ್ವರದ ಲಕ್ಷಣಗಳಾಗಿವೆ. ಶಾಲೆಗೆ ಹೋಗುವ ಮಕ್ಕಳು ಉತ್ಸಾಹದಿಂದ ಇರದಿರುವುದೂ ಕೂಡ ಇದರ ಮುನ್ಸೂಚನೆಯಾಗಿದೆ.

ಡಿ. 25ರ ವರೆಗೆ ಉಚಿತ ಲಸಿಕೆ: ಜೆಇ ಲಸಿಕೆ ತೆಗೆದುಕೊಂಡರೆ ಅಡ್ಡಪರಿಣಾಮವಿಲ್ಲ. ಜ್ವರ, ಸಾಮಾನ್ಯ ಜ್ವರ, ಇಂಜೆಕ್ಷನ್‌ ನೀಡಿದ ಜಾಗದಲ್ಲಿ ನೋವು, ಸುಸ್ತು ಉಂಟಾಗಬಹುದು. 2-3 ದಿನದಲ್ಲಿ ಗುಣಮುಖವಾಗುತ್ತದೆ. ಗುಣಮುಖರಾಗದಿದ್ದಲ್ಲಿ 9449843213 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ವೈದ್ಯರ ತಂಡ ಬಂದು ತಪಾಸಣೆ ನಡೆಸಲಿದೆ. ಜ್ವರವಿದ್ದು, ಔಷಧ ತೆಗೆದುಕೊಳ್ಳುತ್ತಿರುವವರು ಗುಣ ಮುಖರಾದ ಬಳಿಕ ಲಸಿಕೆ ತೆಗೆದುಕೊಂಡರೆ ಉತ್ತಮ. ಡಿ. 25ರ ವರೆಗೆ ಈ ಲಸಿಕೆಯನ್ನು ನೀಡಲಾಗುತ್ತದೆ. ಬಳಿಕ ಬಂದವರು ಶುಲ್ಕ ಪಾವತಿಸಿ ಪಡೆಯಬಹುದು.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

11 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

11 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

12 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

12 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

12 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

12 hours ago