Featured

ಮಣಿಪಾಲ : ಯುವಕನ ಅಪಹರಿಸಿ ಹಲ್ಲೆ, ಜೀವ ಬೆದರಿಕೆ – vishwanews24

ಮಣಿಪಾಲ : ಗಾಂಜಾ ಮಾರಾಟದ ಬಗ್ಗೆ ಹಫ್ತಾ ನೀಡುವಂತೆ ಒತ್ತಾಯಿಸಿ ಯುವಕನ ಅಪಹರಿಸಿ ಹಲ್ಲೆ, ಜೀವ ಬೆದರಿಕೆ

ಮಣಿಪಾಲ: ಗರುಡ ಗ್ಯಾಂಗ್‌ ನಡೆಸಿದ ಗ್ಯಾಂಗ್‌ವಾರ್‌ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಂಧಲೆ, ಹಲ್ಲೆ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳೀಯರನ್ನು ಆತಂಕಗೊಳಿಸಿದೆ.

ಗಾಂಜಾ ಮಾರಾಟದ ಬಗ್ಗೆ ಹಫ್ತಾ ನೀಡುವಂತೆ ಒತ್ತಾಯಿಸಿ ಯುವಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಉದ್ಯಾವರ ಕಂಪನ್‌ಬೆಟ್ಟು ನಿವಾಸಿ ಮೊಹಮ್ಮದ್‌ ಪರ್ವೇಜ್‌ ಉಮರ್‌ (25)ಗೆ ಪರಿಚಯದ ಪೈಝಲ್‌ ಕರೆ ಮಾಡಿ ನಿನ್ನ ಬಳಿ ಮಾತನಾಡಲು ಇದೆ ಎಂದು ಮಣಿಪಾಲಕ್ಕೆ ಕರೆಸಿಕೊಂಡಿದ್ದಾನೆ. ಪೈಝಲ್‌ ಜತೆಗೆ ದಾವುದ್‌ ಇಬ್ರಾಹಿಂ, ಇಸಾಕ್‌ ಮೂವರು ಜತೆಗೆ ಸೇರಿ ಪರ್ವೇಜ್‌ ಉಮರ್‌ನನ್ನು ಬಲತ್ಕಾರದಿಂದ ಕಾರಿನಲ್ಲಿ ಎಳೆದು ಹಾಕಿಕೊಂಡು ಅಪರಿಚಿತ ಜಾಗಕ್ಕೆ ಕೊಂಡೊಯ್ದಿದ್ದಾರೆ. ಅನಂತರ ಪರ್ವೇಜ್‌ ಉಮರ್‌ಗೆ ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯ ಎಂದು ನಮಗೆ ಮಾಹಿತಿ ಬಂದಿದ್ದು, ಮಣಿಪಾಲದಲ್ಲಿ ನೀನು ಗಾಂಜಾ ಮಾರಾಟ ಮಾಡಿದರೆ ನಮಗೆ ತಿಂಗಳ ಮಾಮೂಲಿ ಹಣ ಕೊಡಬೇಕು. ಇದಕ್ಕೆ ಒಪ್ಪದದ್ದಿರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ.

ಜತೆಗೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅನಂತರ ನೀವು ಹೇಳಿದ ಹಾಗೇ ಕೇಳುತ್ತೇನೆ ನನ್ನನ್ನು ಬಿಟ್ಟುಬಿಡಿ ಎಂದಿದ್ದಕ್ಕೆ ಬೆಳಗಿನ ಜಾವ ಅವರ ಮನೆ ಬಳಿ ಬಿಟ್ಟು ಹೋಗಿದ್ದಾರೆ. ಪೊಲೀಸರಿಗೆ ದೂರು ನೀಡಿದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಪರ್ವೇಜ್‌ ದೂರು ನೀಡಿದ್ದಾರೆ.

ಯುವಕ ಆಸ್ಪತ್ರೆಗೆ ದಾಖಲು
ತಂಡದಲ್ಲಿದ್ದ ದಾವೂದ್‌ ಇಬ್ರಾಹಿಂ ಎಂಬವನು ಪರ್ವೇಜ್‌ಗೆ ದೊಣ್ಣೆಯಿಂದ ಕಾಲಿಗೆ, ಕೈಗೆ, ಬೆನ್ನಿಗೆ ಹೊಡೆದಿದ್ದು, ಅದೇ ಕೋಲಿನಿಂದ ಇಸಾಕ್‌ ಬೆನ್ನಿಗೆ ಮತ್ತು ಕಾಲಿಗೆ ಹೊಡೆದಿದ್ದಾನೆ. ಫೈಝಲ್‌ ಕೈಯಿಂದ ಕೆನ್ನೆಗೆ, ಬೆನ್ನಿಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.

ಗಾಯಗೊಂಡ ಪರ್ವೇಜ್‌ ಉಮರ್‌ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

Vishwa News 24

Recent Posts

ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ ; ಶೀಘ್ರವೇ ಅಧಿಕೃತ ಉದ್ಘಾಟನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ – vishwanews24

ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ ; ಶೀಘ್ರವೇ ಅಧಿಕೃತ ಉದ್ಘಾಟನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ…

3 minutes ago

ಈಸ್ಟರ್ ಪ್ರಯುಕ್ತ ಯಶವಂತಪುರ-ಮಡಗಾಂವ್ ಮಧ್ಯೆ ವಿಶೇಷ ರೈಲು – vishwanews24

ಈಸ್ಟರ್ ಪ್ರಯುಕ್ತ ಯಶವಂತಪುರ-ಮಡಗಾಂವ್ ಮಧ್ಯೆ ವಿಶೇಷ ರೈಲು ಉಡುಪಿ: ಮುಂಬರುವ ಗುಡ್‌ಫ್ರೈಡೇ ಹಾಗೂ ಈಸ್ಟರ್ ಪ್ರಯುಕ್ತ ಜನರ ವಿಶೇಷ ಒತ್ತಡವನ್ನು…

22 minutes ago

ಉಡುಪಿ: ಏ.1ರಂದು ಪಿಂಕ್​ ಸೂಪರ್​ ಮೂನ್​ ವೀಕ್ಷಣೆಗೆ ಅವಕಾಶ – vishwanews24

ಉಡುಪಿ: ಏ.1ರಂದು ಪಿಂಕ್​ ಸೂಪರ್​ ಮೂನ್​ ವೀಕ್ಷಣೆಗೆ ಅವಕಾಶ ಉಡುಪಿ: ಆಕಾಶಕಾಯದಲ್ಲಿ ದಿನವೂ ಬೆಳ್ಳಗೆ ಗೋಚರಿಸುವ ಚಂದ್ರ ಏ.1ರಂದು ಸಂಜೆ…

37 minutes ago

ಜನಗಣತಿ: ಆನ್ ಲೈನ್ ನಲ್ಲಿ ಮನೆ ಲಿಂಕ್ ಮಾಡಲು ತಹಸೀಲ್ದಾರ್ ಕರೆ – vishwanews24

ಜನಗಣತಿ: ಆನ್ ಲೈನ್ ನಲ್ಲಿ ಮನೆ ಲಿಂಕ್ ಮಾಡಲು ತಹಸೀಲ್ದಾರ್ ಕರೆ ಮಂಗಳೂರು: ಭಾರತದ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ…

42 minutes ago

ಮಂಗಳೂರು :  2025ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ – vishwanews24

ಮಂಗಳೂರು :  2025ನೇ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರ ಮಂಗಳೂರು : ಕರ್ನಾಟಕ…

49 minutes ago

ಮಂಗಳೂರು: ಕಟ್ಟಡದ 12ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ – vishwanews24

ಮಂಗಳೂರು: ಕಟ್ಟಡದ 12ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಂಗಳೂರು: ನಗರದ ಅತ್ತಾವರದಲ್ಲಿರುವ ಕಾಸ ಗ್ರ್ಯಾಂಡ್ ಕಟ್ಟಡದಲ್ಲಿ 12ನೇ ಮಹಡಿಯಿಂದ…

55 minutes ago