ಮಣಿಪಾಲ: ಸಮರ್ಪಕವಾದ ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ 100 ಮೂಟೆ ಭತ್ತ ತುಂಬಿದ ಗೋಣಿ ಚೀಲವನ್ನು ಮಣಿಪಾಲ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಎಂ ಐ ಟಿ ಜಂಕ್ಷನ್ ಬಳಿ ಪರ್ಕಳ – ಉಡುಪಿ ರಾ.ಹೆ. 169ರಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರುಕ್ಮ ನಾಯ್ಕ್ ಮಾ.೫ ರಂದು ದಿಡೀರ್ ವಾಹನ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಪರ್ಕಳ ಕಡೆಯಿಂದ ಮಣಿಪಾಲದ ಕಡೆಗೆ KA-31-4536 ಲಾರಿಯ ಚಾಲಕ ಡೇನಿಲ್ ಆಂತೋನಿ ಫರ್ನಾಂಡೀಸ್ ಎಂಬಾತ ಹಳಿಯಾಳದಿಂದ ಬೆಳ್ತಂಗಡಿ ತಾಲೂಕಿನ ಮಾರುತಿಪುರದ ಅಕ್ಕಿ ಮಿಲ್ ಗೆ ಸಮರ್ಪಕವಾದ ದಾಖಲಾತಿ ಇಲ್ಲದೇ 100 ಮೂಟೆ ಭತ್ತ ತುಂಬಿದ ಗೋಣಿ ಚೀಲ ಸಾಗಾಟ ಮಾಡುತ್ತಿರುವುದು ತನಿಖೆ ವೇಳೆ ಕಂಡುಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2023, ಕಲಂ: 98 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.
ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…
ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…
ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್ ಅಲರ್ಟ್ ಘೋಷಣೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…
ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…
ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…