ಮಣಿಪಾಲ: ಸಾಂವಿಧಾನಿಕವಾಗಿ ತೆಗೆದುಕೊಂಡಿರುವ ಪ್ರಮಾಣವಚನದ ವಿರುದ್ಧ ಸಿಎಂ ನೀಡಿರುವ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಉಡುಪಿಯ ಮಣಿಪಾಲದಲ್ಲಿಂದು ಪ್ರತಿಭಟನೆ ನಡೆಯಿತು.ಮಣಿಪಾಲದ ರಜತಾದ್ರಿ ಎದುರು ಪ್ರಗತಿಪರ ಸಂಘಟನೆಗಳು ಈ ಪ್ರತಿಭಟನೆ ಆಯೋಜಿಸಿದ್ದವು.
ಮಂಗಳೂರಿನಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಸಿಎಂ ಮಾತನಾಡುತ್ತಾ “ಕಾನೂನು ಪಾಲನೆ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡೋದು ಸರ್ಕಾರದ ಕರ್ತವ್ಯ. ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಮೊರಾಲಿಟಿ ಅನ್ನೋದು ಸಮಾಜದಲ್ಲಿ ಬೇಕಲ್ವಾ, ನೈತಿಕತೆ ಇಲ್ಲದೆ ಸಮಾಜದಲ್ಲಿ ಬದುಕೋಕೆ ಆಗುತ್ತಾ? ಇವತ್ತು ನಾವು ನೈತಿಕತೆ ಇಲ್ಲದೆ ಬದುಕೋಕೆ ಆಗಲ್ಲ. ನಮ್ಮೆಲ್ಲರ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ನಿಂತಿರೋದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್- ರಿಯಾಕ್ಷನ್ ಆಗುತ್ತದೆ. ಇದು ಸಹಜ ಎಂದು ಹೇಳಿದ್ದೀರಿ.ಈ ನಿಮ್ಮ ಹೇಳಿಕೆ ಒಬ್ಬ ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ.ಅನೈತಿಕ ಪೊಲೀಸ್ ಗಿರಿ ಮತ್ತು ಮತೀಯ ಗೂಂಡಾಗಿರಿ ಯನ್ನು ಈ ನಿಮ್ಮ ಹೇಳಿಕೆ ಸಮರ್ಥಿಸುತ್ತದೆ.ನೀವು ತಕ್ಷಣ ಈ ಹೇಳಿಕೆ ಹಿಂಪಡೆದು ,ರಾಜ್ಯದಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಬೇಕು ಎಂದು ಮುಖಂಡರು ಆಗ್ರಹಿಸಿದರು.ಬಳಿಕ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
DCM ಹುದ್ದೆ ಸೇರಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ : ಸಚಿವ ಝಮೀರ್ ಅಹಮ್ಮದ್ ಬೆಂಗಳೂರು: ‘ಉಪಮುಖ್ಯಮಂತ್ರಿ ಸ್ಥಾನವೂ…
DCM ಹುದ್ದೆ ಸೇರಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ : ಸಚಿವ ಝಮೀರ್ ಅಹಮ್ಮದ್ ಬೆಂಗಳೂರು: ‘ಉಪಮುಖ್ಯಮಂತ್ರಿ ಸ್ಥಾನವೂ…
ಮೂಡುಬಿದಿರೆ: ಖಾಸಗಿ ಬಸ್ ಹಾಗೂ ಕಾರು ನಡುವೆ ಮುಖಮುಖಿ ಢಿಕ್ಕಿ ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕಾಂತಾವರ ಕ್ರಾಸ್…
ಎಲ್ಲರ ಸಹಕಾರ ಮುಂದೆಯು ಹೀಗೆ ಇರಲಿ : ಮಂತ್ರಿಗಳಿಗೆ ಡಿಕೆಶಿ ಮನವಿ ಬೆಂಗಳೂರು: ಬ್ರೇಕ್‌ಫಾಸ್ಟ್ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ …
ಮಂಗಳೂರು : ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ: ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ ಮಂಗಳೂರು : ರಾತ್ರಿ…
ಗಂಗಾ ನದಿಯಲ್ಲಿ ಭೀಕರ ದೋಣಿ ದುರಂತ :ಇಬ್ಬರ ಶವ ಪತ್ತೆ, ಹಲವರು ನಾಪತ್ತೆ ಪಾಟ್ನಾ : ಬಿಹಾರದ ಪಾಟ್ನಾ ಸಮೀಪದ…