Featured

ಮತಾಂತರ ನಿಷೇಧ ಕಾಯ್ದೆ : ಕರ್ನಾಟಕದಲ್ಲಿ ಶಾಂತಿ ಕೆಡೆಸಲು ಇದೊಂದು ಪ್ರಯತ್ನ : ಡಿಕೆಶಿ – VIshwanews24

ಮತಾಂತರ ನಿಷೇಧ ಕಾಯ್ದೆ : ಕರ್ನಾಟಕದಲ್ಲಿ ಶಾಂತಿ ಕೆಡೆಸಲು ಇದೊಂದು ಪ್ರಯತ್ನ : ಡಿಕೆಶಿ – VIshwanews24

ಬೆಂಗಳೂರು: ಮಂಡನೆ ವಿಚಾರವು ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಅಶಾಂತಿ ಮೂಡಿಸುವ ಜೊತೆಗೆ ರಾಜಕೀಯವಾಗಿ ಕೆಲ ವಿಷಯಗಳನ್ನು ವಿಷಯಾಂತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಮಾಡಿದ ಸಂವಿಧಾನಕ್ಕೆ ಈ ತೀರ್ಮಾನ ಅನ್ವಯಿಸುವುದಿಲ್ಲ. ಅಂಬೇಡ್ಕರ್ ಅವರು ನಂತರದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು ಎಂದರು.

ಬೇರೆ ಬೇರೆಯವರು ಬಂದು ಹರೇ ರಾಮ ಹರೇ ಕೃಷ್ಣಾ ಎಂದು ನಮ್ಮ ರಾಜ್ಯದಲ್ಲಿ ಭಜನೆ ಮಾಡುತ್ತಾರೆ. ಇದೊಂದು ಸೆಕ್ಯೂಲರ್ ರಾಜ್ಯವಾಗಿದೆ. ಶಾಂತಿಯ ನೆಲವೀಡಾದ ಕರ್ನಾಟಕದ ಬಗ್ಗೆ ಅಪಾರವಾದ ಪ್ರೀತಿ ಇದೆ. ಕರ್ನಾಟಕದಲ್ಲಿ ಶಾಂತಿ ಕೆಡೆಸಲು ಇದೊಂದು ಪ್ರಯತ್ನವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇಂದು ಎಲ್ಲರಿಗೂ ಸೆಂಟ್ ಜೋಸೆಫ್, ಸೆಂಟ್ ಮಾರ್ಥಸ್‌ನಂತಹ ಕ್ರೈಸ್ತ ಶಾಲೆ ಬೇಕು. ನಾನು ನಮ್ಮ ಹಳ್ಳಿಯಲ್ಲಿ ಕ್ರೈಸ್ತ್ ಸ್ಕೂಲ್ ನಲ್ಲಿ ಓದಿದೆ. ನನಗೆ ಅಲ್ಲಿ ಯಾವತ್ತೂ ಅವರ ಧರ್ಮದ ಬಗ್ಗೆ ಭೋದಿಸಿಲ್ಲ. ಎಲ್ಲಾದರೂ ಅವರು ಬಲವಂತ ಮಾಡಿರುವ ಉದಾಹರಣೆಯೂ ಇಲ್ಲ. ಸುಮ್ಮನೆ ಮಾನಸಿಕವಾಗಿ ಅವರಿಗೆ ಹಿಂಸೆ ಕೊಡುವ ಕೆಲಸ ಆಗುತ್ತಿದೆ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಟೀಕಿಸಿದರು.

 

Vishwa News 24

Recent Posts

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ – vishwanews24

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…

6 hours ago

ಮಹಾರಾಷ್ಟ್ರ : ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ- vishwanews24

ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…

6 hours ago

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  – vishwanews24

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…

6 hours ago

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ – vishwanews24

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…

6 hours ago

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ – vishwanews24

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…

6 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

3 days ago