Featured

ಮತಾಂತರ ನಿಷೇಧ ಕಾಯ್ದೆ: 2023ಕ್ಕೆ ನಮ್ಮ‌ ಸರ್ಕಾರ ಬಂದ ಕೂಡಲೇ ವಾಪಸ್ ತೆಗೆದುಕೊಳ್ಳುತ್ತೇವೆ :  ಸಿದ್ದರಾಮಯ್ಯ – Vishwanews24

ಮತಾಂತರ ನಿಷೇಧ ಕಾಯ್ದೆ: 2023ಕ್ಕೆ ನಮ್ಮ‌ ಸರ್ಕಾರ ಬಂದ ಕೂಡಲೇ ವಾಪಸ್ ತೆಗೆದುಕೊಳ್ಳುತ್ತೇವೆ :  ಸಿದ್ದರಾಮಯ್ಯ – Vishwanews24

ಬೆಳಗಾವಿ: ‘ಮತಾಂತರ ನಿಷೇಧ ಕಾಯ್ದೆಗೆ ವಿಧಾನ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವುದಕ್ಕೆ ನಾವು ಬಿಡುವುದಿಲ್ಲ. ಹಾಗೊಂದು ವೇಳೆ ದುಸ್ಸಾಹಸ ಮಾಡಿದರೆ, 2023ಕ್ಕೆ ನಮ್ಮ‌ ಸರ್ಕಾರ ಬಂದ ಕೂಡಲೇ ವಾಪಸ್ ತೆಗೆದುಕೊಳ್ಳುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸುವರ್ಣ ವಿಧಾನ ಸೌಧದ ಬಳಿ ಭಾರತೀಯ ಕ್ರೈಸ್ತ ಒಕ್ಕೂಟದಿಂದ ಕ್ರೈಸ್ತರು ಶುಕ್ರವಾರ ಹಮ್ಮಿಕೊಂಡಿರುವ ಸಾಂಕೇತಿಕ‌ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಈಗಾಗಲೇ ನಾವು ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ ಎಂದಿದ್ದಾರೆ. ಮುಂದಿನ ವಾರ ತರುತ್ತಾರೆ ಎಂದುಕೊಂಡಿದ್ದೇನೆ. ನಮ್ಮ ಪಕ್ಷವು ಈ ಕಾಯ್ದೆಯನ್ನು ತೀವ್ರವಾಗಿ ವಿರೋಧ ಮಾಡುತ್ತದೆ’ ಎಂದು ತಿಳಿಸಿದರು.

‘ಇದು ಗಂಭೀರ ವಿಚಾರ. ದೇಶದಲ್ಲಿ ಕೋಮು ಸೌಹಾರ್ದ ಹಾಳು ಮಾಡಲು, ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ಕಾಯ್ದೆ ತರುತ್ತಿದ್ದಾರೆ. ಇದರಲ್ಲಿ ರಾಜ್ಯದ ಹಿತ ಇಲ್ಲ. ನಿಮ್ಮ (ಕ್ರೈಸ್ತರ) ಜೊತೆ ಯಾವಾಗಲೂ ಇರುತ್ತೇವೆ. ಯಾವುದೇ ಸರ್ಕಾರ ಸಂವಿಧಾನ ಏನು ಹೇಳಿದೆಯೋ ಅದರಂತೆ ನಡೆದುಕೊಳ್ಳಬೇಕು’ ಎಂದರು.

‘ಯಾವುದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದು, ಒಪ್ಪಿ ಪೂಜಿಸುವುದು ಹಾಗೂ ಪ್ರಚಾರದ ಹಕ್ಕನ್ನು ಸಂವಿಧಾನವು ಪ್ರತಿಯೊಬ್ಬರಿಗೂ ಕೊಟ್ಟಿದೆ. ಯಾವುದೇ ಧರ್ಮದ ಆಧಾರದ ಮೇಲೆ ಸಂವಿಧಾನ ರಚನೆಯಾಗಿಲ್ಲ. ಎಲ್ಲ ಧರ್ಮದವರಿಗೂ ಸಮಾನವಾದ ಸ್ಥಾನ ಕೊಟ್ಟಿದೆ. ನಾವೆಲ್ಲರೂ ಮೊದಲಿಗೆ ಭಾರತೀಯರು. ನಂತರ ಜಾತಿ, ಧರ್ಮ ಬರುತ್ತದೆ. ಜಾತಿ ನಾವು ಮಾಡಿಕೊಂಡಿದ್ದಲ್ಲ. ದೇವರು ಮಾಡಿಲ್ಲ. ಸ್ವಾರ್ಥಕ್ಕೋಸ್ಕರ ಹುಟ್ಟಿಕೊಂಡದ್ದು’ ಎಂದರು.

‘ದೇಶಕ್ಕೆ ಕ್ರೈಸ್ತ ಧರ್ಮದ ಕೊಡುಗೆ ಅಪಾರವಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಹಾಗಾದರೆ ಆ ಕಾಲೇಜಿಗೆ ಅಥವಾ ಆಸ್ಪತ್ರೆಗೆ ಹೋದವರು ಮತಾಂತರ ಆಗಬಹುದಾಗಿತ್ತಲ್ಲಾ? ಬಲವಂತವಾಗಿ ಏನನ್ನೂ ಮಾಡುವುದಕ್ಕೆ ಬರುವುದಿಲ್ಲ. ಮತಾಂತರ ನಿಷೇಧ ಎನ್ನುವುದೇ ಸರಿ ಇಲ್ಲ’ ಎಂದು ಹೇಳಿದರು.

‘ಈ ದೇಶದಲ್ಲಿ ಇಚ್ಛೆ ಇರುವ ಧರ್ಮ ಪಾಲನೆ ಮಾಡಬಹುದು. ಅದು ಅವರ ಸ್ವಾತಂತ್ರ್ಯ. ಅದನ್ನು ಕಿತ್ತಕೊಳ್ಳಬಾರದು. ಕಿತ್ತುಕೊಂಡರೆ ಅದು ಸಂವಿಧಾನ ವಿರೋಧಿಯಾಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಚರ್ಚ್ ಮೇಲೆ ಒಂದೇ ಒಂದು ದಾಳಿಯೂ ನಡೆಯದಂತೆ ನೋಡಿಕೊಂಡಿದ್ದೆ. ಆಗಲೂ ಇದ್ದ ಪೊಲೀಸರೇ ಈಗಲೂ ಇದ್ದಾರೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಆಡಳಿತ ನಡೆಸುವವರು ವಿವೇಚನೆಯಿಂದ ನಿರ್ಧರಿಸಬೇಕು’ ಎಂದರು.

‘ಸಂವಿಧಾನ ಒಳ್ಳೆಯವರ ಕೈಯಲ್ಲಿ ಇದ್ದರೆ ಒಳ್ಳೆಯದಾಗುತ್ತದೆ. ಕೆಟ್ಟವರ ಕೈಯಲ್ಲಿ ಇದ್ದರೆ ಕೆಟ್ಟದ್ದಾಗುತ್ತದೆ. ಅಸ್ಪೃಶ್ಯತೆ, ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಸರಿಪಡಿಸುವುದು ಸರ್ಕಾರದ ಕೆಲಸ. ಅದನ್ನು ಬಿಟ್ಟು ಅನಗತ್ಯವಾಗಿ ಕಾಯ್ದೆ ತರುವುದು‌ ಒಳ್ಳೆಯದು’ ಎಂದರು.

‘ಈ ಬಿಜೆಪಿ ಸರ್ಕಾರದವರು ನಿಮ್ಮನ್ನು (ಕ್ರೈಸ್ತರನ್ನು) ಗುರಿಯಾಗಿಟ್ಟುಕೊಂಡು ಕಾಯ್ದೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಂದು ದೇಶ ಹಾಳು ಮಾಡಿದರು. ಇಲ್ಲಿನ ಸರ್ಕಾರ ರಾಜ್ಯ ಹಾಳುಗೆಡವುತ್ತಿದೆ. ಇದು ಆರ್‌ಎಸ್‌ಎಸ್ ಹುನ್ನಾರ. ಬಿಜೆಪಿ ಕುತಂತ್ರ. ಅದೆಲ್ಲವೂ ನಮಗೆ ಗೊತ್ತಾಗಿದೆ. ಕ್ರೈಸ್ತರು ಕೇಳಲಿ ಬಿಡಲಿ ನಾವು ವಿರೋಧಿಸಿ ತೋರಿಸುತ್ತೇವೆ. ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ವಿರೋಧಿಸುತ್ತೇವೆ’ ಎಂದು ತಿಳಿಸಿದರು.

‘ಅಂಥಾದ್ದೆಲ್ಲ ಮಾಡುವುದಕ್ಕೆ ಬಿಡುವುದಿಲ್ಲ ನಾವು ಎಂದಿಗೂ ಮನುಷ್ಯರಾಗಿ ಬದುಕಬೇಕು. ಮನುಷ್ಯತ್ವ ಇಲ್ಲವಾದರೆ ಅದ್ಯಾವ ಸಮಾಜ? ದಯವೇ ಧರ್ಮದ ಮೂಲ ಎಂದು ಬಸವಣ್ಣ ಹೇಳಿದ್ದಾರೆ. ಇದು ಈ ಸರ್ಕಾರದವರಿಗೆ ಅರ್ಥ ಆಗಿಲ್ಲ. ನಿಮ್ಮ ಜೊತೆ ನಾವಿದ್ದೀವೆ. ಆತಂಕ ಪಡಬೇಡಿ’ ಎಂದು ಅಭಯ ನೀಡಿದರು.

ಧರ್ಮ ಪ್ರಾಂತ್ಯದ ಬಿಷಪ್ ಡೆರಿಕ್ ಫರ್ನಾಂಡೀಸ್, ಮುಖಂಡರಾದ ಐವನ್‌ ಡಿಸೋಜಾ, ನಂದಕುಮಾರ್, ಕೆ.ಜೆ. ಜಾರ್ಜ್ ಪಾಲ್ಗೊಂಡಿದ್ದರು.

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

9 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

9 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

10 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

10 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

10 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

10 hours ago