ಕಾಪು: ರಾಷ್ಟ್ರ ರಕ್ಷಣೆ, ದೇಶ ಪ್ರೇಮ, ಧರ್ಮ ರಕ್ಷಣೆ ಹಾಗೂ ಸೇವಾ ಮನೋಭಾವದ ತಳಹದಿಯಲ್ಲಿ 97 ವರ್ಷಗಳಿಂದ ತನ್ನ ಸಿದ್ದಾಂತದೊಂದಿಗೆ ಎಂದಿಗೂ ರಾಜೀಯಾಗದೆ ಮುನ್ನಡೆಯುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಂದಿಸಿ ಮತಾಂಧ ಶಕ್ತಿಗಳ ಓಲೈಕೆಗೆ ಮುಂದಾಗಿರುವ ಸಿದ್ಧರಾಮಯ್ಯರ ವಿರುದ್ಧ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ರಾಜಕೀಯ ನೆಲೆಗಾಗಿ ಯಾವುದೇ ಸಿದ್ದಾಂತಕ್ಕೆ ಬದ್ದರಾಗದೆ ಊಸರವಳ್ಳಿಯಂತೆ ಪಕ್ಷ ಬದಲಿಸಿ ಅಧಿಕಾರ ಅನುಭವಿಸಿರುವ ಸಿದ್ದರಾಮಯ್ಯನಿಗೆ ಅರ್ ಎಸ್ ಎಸ್ ಬಗ್ಗೆ ಮಾತನಾಡುವ ಯೋಗ್ಯತೆಯೇ ಇಲ್ಲ.ರಾಷ್ಟ್ರಕ್ಕಾಗಿ ಸೇವೆಗಾಗಿ ಸರ್ವಸ್ವನ್ನೂ ಸಮರ್ಪಿಸಿರುವ ಸಂಘದ ಸ್ವಯಸೇವಕರ ಪಾದದ ಧೂಳಿಗೂ ಸಮನಲ್ಲದ ಸಿದ್ದರಾಮಯ್ಯರಿಂದ ಆರ್ ಎಸ್ ಎಸ್ ಬಗ್ಗೆ ಉತ್ತಮ ಮಾತು ನಿರೀಕ್ಷಿಸುವುದು ಮೂರ್ಖತನ.
ದೇಶದಲ್ಲಿ ತುರ್ತು ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೇ ಅನಾಹುತವಾದಾಗ ಜನ ಸಾಮಾನ್ಯರ ಸೇವೆಗೆ ಮೊದಲಾಗಿ ಧಾವಿಸುವ ಸಂಘದ ಸದಸ್ಯರಿಗೆ ಗಣವೇಶದ ಸಮವಸ್ತ್ರವಾಗಿದ್ದ ಚಡ್ಡಿಯ ಬಗ್ಗೆ ಅವಹೇಳನ ಮಾಡಿ ಸಿದ್ದರಾಮಯ್ಯ ಮಾನಸಿಕ ಸ್ಥೈರ್ಯ ಕುಗ್ಗಿಸುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದು, ಕಳೆದ ಕೆಲವು ವರ್ಷದಿಂದ ಗಣವೇಶದ ಸಮವಸ್ತ್ರ ಪ್ಯಾಂಟ್ ಬದಲಾಗಿರುವ ವಿಚಾರ ಸಿದ್ದರಾಮಯ್ಯನಿಗೆ ಇನ್ನೂ ಅರಿವಾದಂತಿಲ್ಲ. ಸಿದ್ದರಾಮಯ್ಯ ಕೂಡಲೇ ಅಲ್ಪಸಂಖ್ಯಾತರ ಓಲೈಕೆಗಾಗಿ ಸಂಘದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಮುಂದಿನ ದಿನದಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…