ರಾಜ್ಯ ನ್ಯೂಸ್

ಮತ್ತೋಮ್ಮೆ ಯಡಾವಟ್ಟು ಮಾಡಿಕೊಂಡ ರಾಹುಲ್, ಮೈಸೂರು ವಿದ್ಯಾರ್ಥೀನಿಯರ ಪ್ರಶ್ನೆಗೆ ಕಕ್ಕಾಬಿಕ್ಕಿ..!!

ಮತ್ತೋಮ್ಮೆ ಯಡಾವಟ್ಟು ಮಾಡಿಕೊಂಡ ರಾಹುಲ್, ಮೈಸೂರು ವಿದ್ಯಾರ್ಥೀನಿಯರ ಪ್ರಶ್ನೆಗೆ ಕಕ್ಕಾಬಿಕ್ಕಿ..!!

ಪ್ರಸ್ತುತ ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದ ಪ್ರವಾಸದಲ್ಲಿದ್ದಾರೆ‌. ಕರ್ನಾಟಕದಲ್ಲಿ ಶತಾಯಗತಾಯ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಸಾಲು ಸಾಲು ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಮೈಸೂರಿನಲ್ಲಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಅದಕ್ಕೂ ಮುನ್ನ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ನಡೆದ ಸಂವಾದದಲ್ಲಿ ರಾಹುಲ್ ಪಾಲ್ಗೊಂಡರು. ವಿದ್ಯಾರ್ಥಿನಿಯರ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದರು‌.

 

ಆದರೆ ಓರ್ವ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಬಹುತೇಕ ಕಾಂಗ್ರೆಸ್ ನಾಯಕರು ಕಕ್ಕಾಬಿಕ್ಕಿಯಾದರು. ಆ ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ಹೀಗಿತ್ತು. ಸರ್ ನೀವು, ಮತ್ತೆ ಮುಖ್ಯಮಂತ್ರಿಗಳು ಇಲ್ಲೇ ಇರುವುದರಿಂದ ಈ ಪ್ರಶ್ನೆ ಕೇಳುತ್ತಿದ್ದೇನೆ. ಸರ್ ನಿಮ್ಮ ಸರ್ಕಾರದಿಂದ ಏನೇ ಯೋಜನೆಗಳನ್ನು ನಮಗೆ ಕೊಡಬೇಕಾದರು ಯಾಕೆ ತಾರತಮ್ಯ ಮಾಡುತ್ತೀರಾ? ಕಮ್ಯುನಿಟಿ ಆಧಾರದ ಮೇಲೆ ತಾರತಮ್ಯ ಮಾಡೋದು ಸರಿಯಾ ಎಂದು ಆ ವಿದ್ಯಾರ್ಥಿನಿ ಕೇಳಿದಳು..

ಈ ಪ್ರಶ್ನೆ ಪರಮೇಶ್ವರ್ ಇಂಗ್ಲಿಷ್ ಅಲ್ಲಿ ಅನುವಾದ ಮಾಡಿ ಹೇಳಿದ ಕೂಡಲೇ ಒಂದು ಸೆಕೆಂಡ್ ಏನು ಉತ್ತರಿಸಬೇಕು ಎಂದು ಗೊತ್ತಾಗದೆ ರಾಹುಲ್ ಗಾಂಧಿ ತಡಬಡಾಯಿಸಿದರು. ಆನಂತರ ಈ ಪ್ರಶ್ನೆಯಿಂದ ಜಾರಿಕೊಳ್ಳೊಕ್ಕೆ ಈ ಪ್ರಶ್ನೆ ಭಾರತಕ್ಕೊ ಅಥವಾ ಕರ್ನಾಟಕಕ್ಕೋ ಎಂದು ರಾಹುಲ್ ಗಾಂಧಿ ಕೇಳಿದರು. ಆಗ ವಿದ್ಯಾರ್ಥಿನಿ ಗಟ್ಟಿಧ್ವನಿಯಿಂದ ನಾನು ಕರ್ನಾಟಕ ಸರ್ಕಾರಕ್ಕೆ ಕೇಳುತ್ತಿದ್ದೇನೆ ಎಂದಳು. ಹಾಗಾದರೆ ಈ ಪ್ರಶ್ನೆ ಸಿದ್ಧರಾಮಯ್ಯನವರಿಗೆ ಕೇಳಿ ಎಂದು ರಾಹುಲ್ ಗಾಂಧಿ ಜಾರಿಕೊಂಡರು.

 

ಆ ನಂತರ ಉತ್ತರಿಸಲು ಸಿದ್ಧರಾಮಯ್ಯನವರು ಬಂದರು. ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ಇದು ಅನಿವಾರ್ಯ. ದುರ್ಬಲರಿಗೆ ಶಕ್ತಿ ತುಂಬಲು ಆ ತರಹ ಯೋಜನೆಗಳನ್ನು ಘೋಷಿಸಲೇಬೇಕು ಎಂದು ತೇಪೆ ಹಚ್ಚುವ ಕೆಲಸ ಮಾಡಿದರು. ವಿದ್ಯಾರ್ಥಿನಿ ಪ್ರಶ್ನೆ ಕೇಳಿದಾಗ ಇಡೀ ಸಭಾಂಗಣದಲ್ಲಿ ಕರತಾಡನ ಮುಗಿಲು ಮುಟ್ಟಿತ್ತು. ಅಂಗನವಾಡಿ ಮಕ್ಕಳಿಂದ ಉನ್ನತ ವ್ಯಾಸಾಂಗದ ವಿದ್ಯಾರ್ಥಿಗಳವರೆಗೆ ಪ್ರತಿಯೊಂದು ವಿಷಯದಲ್ಲಿಯೂ ಜಾತಿ ಹುಡುಕುವ ಸಿದ್ಧರಾಮಯ್ಯನವರ ಸರ್ಕಾರಕ್ಕೆ ವಿದ್ಯಾರ್ಥಿನಿಯ ಪ್ರಶ್ನೆ ಕಪಾಳಮೋಕ್ಷ ಮಾಡಿದ ಹಾಗಿತ್ತು.

Vishwa News 24

Recent Posts

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಗಾಂಧಿ ಜಯಂತಿ ಆಚರಣೆ -vishwanews24

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಗಾಂಧಿ ಜಯಂತಿ ಆಚರಣೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ…

21 hours ago

ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ -vishwanews24

ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್…

2 days ago

ಕಾಪು : ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ -vishwanews24

ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ ಅ.3ರಿಂದ ಧಾರ್ಮಿಕ ಕಾರ್ಯಕ್ರಮಗಳ ಚಾಲನೆ.. ವರ್ಷಪೂರ್ತಿ ಗೋಸೇವೆ, ಅನ್ನದಾನ, ಆರೋಗ್ಯ–ಶಿಕ್ಷಣ ಸೇವೆ…

2 days ago

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  -vishwanews24

ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ  ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…

2 days ago

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ -vishwanews24

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…

2 days ago

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ -vishwanews24

ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…

2 days ago