ಬಳ್ಳಾರಿ: ಮದುವೆಯ ವಿಚಾರಕ್ಕೆ ಜಾತಿ ಅಡ್ಡಬಂದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೊಬ್ಬಳು ಇದೀಗ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ.
ಮೃತಳನ್ನು ಅಮೃತಾ ಎಂದು ಗುರುತಿಸಲಾಗಿದೆ. ಈಕೆ ನಾಲ್ಕು ದಿನಗಳ ಕಾಲ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ.
ಘಟನೆ ಏನು..?: ಮೃತ ಅಮೃತಾ ಪಿಯುಸಿ ಮುಗಿದ ಬಳಿಕ ಸ್ನೇಹಿತೆಯ ಗಂಡನ ಸಹೋದರ ಸುನೀಲ್ ಪರಿಚಯವಾಗಿತ್ತು. ಪರಿಚಯವು ಪ್ರೀತಿಗೆ ತಿರುಗಿದೆ. ಪ್ರೇಮ ಪ್ರಣಯ ಹೀಗೆ ಎಲ್ಲಾ ರೀತಿಯಲ್ಲಿ ಬಳಸಿಕೊಂಡ ಬಳಿಕ ಮದುವೆಯಾಗಲು ನಿನ್ನ ಜಾತಿ ಬೇರೆ ಎಂದು ಸುನೀಲ್ ನಿರಾಕರಿಸಿದ್ದ. ಮದುವೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅಮೃತಾ ನೇಣಿಗೆ ಶರಣಾಗಿದ್ದಳು.
ಕೊನೆಯ ಕ್ಷಣದಲ್ಲಿ ನೇಣಿನಿಂದ ಇಳಿಸಿ ಬದುಕಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಅಂತೆಯೇ ಕೂಡಲೇ ಆಕೆಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಇ ಚಿಕಿತ್ಸೆ ನೀಡಲಾಗುತ್ತಿತ್ತು. 4 ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದ ಅಮೃತಾ ಇದೀಗ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.
ಮದುವೆ ನಿಕಾರಣೆ ಯಾಕೆ..?: ಅಮೃತ (ವಡ್ಡರ) ತಳ ಸಮುದಾಯಕ್ಕೆ ಸೇರಿದ ಯುವತಿಯೆಂದು ಸುನೀಲ್ (ಬಲಿಜ) ಮೇಲ್ಜಾತಿಗೆ ಸೇರಿದ್ದವರೆಂದು ಮದುವೆ ಬೇಡ ಎಂದಿರುವ ಆರೋಪ ಕೇಳಿಬಂದಿದೆ.
ಡೆತ್‍ನೋಟ್‌ನಲ್ಲಿ ಏನಿದೆ?: ಆತ್ಮಹತ್ಯೆಗೂ ಮುನ್ನ ತನಗೆ ಕೈ ಕೊಟ್ಟ ಪ್ರೇಮಿಯ ಮೋಸದ ಕತೆಯನ್ನು ಅಮೃತಾ ಪತ್ರದ ಮೂಲಕ ಬರೆದಿಟ್ಟಿದ್ದಳು. ಮದುವೆ ನಿರಾಕರಿಸಿದ ಯುವಕ ಸುನಿಲ್ ಮಾಡಿದ ಅತ್ಯಾಚಾರ ಮತ್ತು ಅವರ ಕುಟುಂಬದವರು ಮಾಡಿದ ನಿಂದನೆ ಬಗ್ಗೆಯೂ ಅಮೃತಾ ಪತ್ರದಲ್ಲಿ ತಿಳಿಸಿದ್ದಾಳೆ.
ಸದ್ಯ ಪ್ರಕರಣ ಸಂಬಂಧ ಆರೋಪಿ ಸುನೀಲ್ ನನ್ನ ಬಳ್ಳಾರಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…