ನವದೆಹಲಿ:ಮದುವೆಯ ನೆಪದಲ್ಲಿ ಯುವ ಹಿಂದೂ ಯುವಕ ಮತ್ತು ಯುವತಿಯರನ್ನು ಮತಾಂತರ ಮಾಡುವುದು ತಪ್ಪು ಎಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಯುವಕ, ಯುವತಿಯರಲ್ಲಿ ತಮ್ಮ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ಹೆಮ್ಮೆ ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ್‌ನಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತರ ಹಾಗೂ ಕುಟುಂಬ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ಮಕ್ಕಳನ್ನು ನಾವು ಪೋಷಿಸುವುದರ ಜೊತೆಗೆ ಮನೆಯಲ್ಲೇ ಅವರಿಗೆ ನಾವು ಧರ್ಮದ ಕುರಿತು ತಿಳಿಸಿಕೊಡುವ ಅವಶ್ಯಕತೆ ಇದೆ. ನಮ್ಮ ಧರ್ಮದ ಬಗ್ಗೆ ಸೇರಿದಂತೆ ನಮ್ಮ ಬಗ್ಗೆ, ನಮ್ಮ ಸಂಪ್ರದಾಯ ಹಾಗೂ ಪೂಜೆಗಳನ್ನು ಗೌರವಿಸುವ ಬಗ್ಗೆ ಹೇಳಿಕೊಡಬೇಕಾಗಿದೆ” ಎಂದಿದ್ದಾರೆ.
“ಹೇಗೆ ಮತಾಂತರ ನಡೆಯುತ್ತಿದೆ. ಹಿಂದು ಯುವಕ, ಯುವತಿಯರು ಇತರ ಧರ್ಮಗಳನ್ನು ವಿವಾಹದಂತಹ ಸಣ್ಣ ಸ್ವಾರ್ಥಕ್ಕಾಗಿ ಹೇಗೆ ಮತಾಂತರವಾಗುತ್ತಿದ್ದಾರೆ? ಈ ರೀತಿಯ ಕೆಲಸವನ್ನು ಯಾರು ಮಾಡುತ್ತಿದ್ದಾರೋ ಅದು ಸರಿಯಲ್ಲ. ಆದರೆ, ಅದು ಬೇರೆ ವಿಚಾರವಾಗಿದೆ” ಎಂದು ಹೇಳಿದ್ದಾರೆ.
“ಮತಾಂತರದ ಪ್ರಶ್ನೆ ಒಂದು ವೇಳೆ ಎದುರಾದಲ್ಲಿ ಅದಕ್ಕೆ ತಕ್ಕ ಉತ್ತರ ನೀಡಬೇಕು. ನಮ್ಮಲ್ಲಿ ಆ ಕುರಿತು ಗೊಂದಲ ಇರಬಾರದು. ಆ ರೀತಿಯಾಗಿ ನಾವು ನಮ್ಮ ಮಕ್ಕಳನ್ನು ಬೆಳೆಸುವುದು ಅವಶ್ಯಕ” ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…
ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…
ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…
ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…