Featured

ಮದ್ಯ ಮಾರಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ : ಸ್ಪಷ್ಟನೆ ‌ಕೊಟ್ಟ ಮಂಗಳೂರು ಅಬಕಾರಿ ಡಿಸಿ – Vishwanews24

ಮದ್ಯ ಮಾರಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಇದೊಂದು ಸುಳ್ಳು ಸುದ್ದಿ..

ದಕ್ಷಿಣ ಕನ್ನಡ ಜಿಲ್ಲೆ ಮದ್ಯ ಮಾರಾಟದಲ್ಲಿ ಅಗ್ರಸ್ಥಾನ ಎಂಬ ಬಗ್ಗೆ ನಾವು ಯಾರಿಗೂ ಯಾವುದೇ ಅಧಿಕೃತ ವರದಿ ಕೊಟ್ಟಿಲ್ಲ..

ಕೋವಿಡ್ ಬಳಿಕ ನಮ್ಮ ‌ಜಿಲ್ಲೆಯಲ್ಲಿ ಸ್ವಲ್ಪ ಮದ್ಯ ಮಾರಾಟ ಹೆಚ್ಚಾಗಿರುವುದು ನಿಜ..

ರಾಜ್ಯದಲ್ಲಿ ದ‌.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಮದ್ಯ ಮಾರಾಟ ಎನ್ನುವುದು ಸರಿಯಲ್ಲ..

ರಾಜ್ಯದ ಹಲವು ಜಿಲ್ಲೆಗಳಲ್ಲಿ ನಮಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ಆಗ್ತಿದೆ..

ಸ್ಪಷ್ಟನೆ ನೀಡಿದ ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ

ಮಂಗಳೂರು: ಮದ್ಯ ಮಾರಾಟದಲ್ಲಿ ದ.ಕ ಜಿಲ್ಲೆ ಇಡೀ ರಾಜ್ಯಕ್ಕೆ ಟಾಪರ್ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದ್ದು, ಸಾಮಾಜಿಕ ತಾಣಗಳಲ್ಲೂ ಭಾರೀ ವೈರಲ್ ಆಗಿತ್ತು. ಆದರೆ ಈ ಸುದ್ದಿಗೆ ಸಂಬಂಧಿಸಿದಂತೆ ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ ಸ್ಪಷ್ಟನೆ ನೀಡಿದ್ದು, ಇದೊಂದು ಸುಳ್ಳು ಸುದ್ದಿ ಎಂದಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ‌ನೀಡಿದ ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ, ಈ ವರದಿಯನ್ನು ನಾವು ಯಾರಿಗೂ ಕೊಟ್ಟಿಲ್ಲ. ‌ರಾಜ್ಯದಲ್ಲಿ ದ‌.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಮದ್ಯ ಮಾರಾಟ ಎನ್ನುವುದು ಸರಿಯಲ್ಲ. ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಮಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ಆಗ್ತಿದೆ. ಈ ಬಗ್ಗೆ ಯಾವುದೇ ವರದಿಯನ್ನು ನಮ್ಮ ಇಲಾಖೆ ವತಿಯಿಂದ ಕೊಟ್ಟಿಲ್ಲ. ಲೀಟರ್ ಲೆಕ್ಕಾಚಾರದಲ್ಲಿ ಹೇಳಿದರೂ ನಮಗಿಂತ ಬೇರೆ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ. ಆದರೆ ಕೋವಿಡ್ ಬಳಿಕ ನಮ್ಮ ‌ಜಿಲ್ಲೆಯಲ್ಲಿ ಸ್ವಲ್ಪ ಮದ್ಯ ಮಾರಾಟ ಹೆಚ್ಚಾಗಿರುವುದು ನಿಜ. ಹಾಗಂತ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅದು ಕಡಿಮೆ. ಹೀಗಾಗಿ ದ‌.ಕ ಜಿಲ್ಲೆ ಮದ್ಯ ಮಾರಾಟದಲ್ಲಿ ಟಾಪರ್ ಎಂಬ ಸುದ್ದಿ ಸುಳ್ಳು ಅಂತ ಸ್ಪಷ್ಟನೆ ‌ಕೊಟ್ಟಿದ್ದಾರೆ.

ಅಲ್ಲದೇ ಕಳೆದ ವರ್ಷದ ಅಬಕಾರಿ ಆದಾಯ 25 ರಿಂದ 27 ಸಾವಿರ ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ದ‌.ಕ ಜಿಲ್ಲೆಯ ಆದಾಯ ಕೇವಲ 370 ಕೋಟಿ ರೂ. ಮಾತ್ರ. ಹೀಗಾಗಿ ದ.ಕ ಜಿಲ್ಲೆ ಟಾಪರ್ ಆಗಿದ್ದಲ್ಲಿ ಆದಾಯದಲ್ಲೂ ಹೆಚ್ಚಳ ಆಗಿರಬೇಕಿತ್ತು ಎಂದಿದ್ದಾರೆ. ಕಳೆದ ವರ್ಷ 521 ಇದ್ದ ಮದ್ಯದಂಗಡಿಗಳ ಸಂಖ್ಯೆ ಸದ್ಯ ಜಿಲ್ಲೆಯಲ್ಲಿ 526ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆ ಮದ್ಯ ಮಾರಾಟದಲ್ಲಿ ಅಗ್ರಸ್ಥಾನ ಎಂಬ ಬಗ್ಗೆ ನಾವು ಯಾರಿಗೂ ಯಾವುದೇ ಅಧಿಕೃತ ವರದಿ ಕೊಟ್ಟಿಲ್ಲ ಎಂದು ಮಂಗಳೂರು ಅಬಕಾರಿ ಡಿಸಿ ಬಿಂದುಶ್ರೀ ಹೇಳಿದ್ದಾರೆ. ಅಸಲಿಗೆ ಕೆಎಸ್ ಬಿಸಿಎಲ್ ಮೂಲಕ ಈ ವರ್ಷ ಬರೋಬ್ಬರಿ 25 ಲಕ್ಷ ಬಾಟಲ್ ಮದ್ಯ ಮಾರಾಟವಾಗಿದ್ದು ನಿಜ. ಅದರ ಲೆಕ್ಕಾಚಾರ ಪ್ರಕಾರ ಲೀಟರ್ ಗೆ ಹೋಲಿಸಿದರೆ ಕೋಟಿ ದಾಟಬಹುದು. ಆದರೆ ನಮಗಿಂತಲೂ ಹೆಚ್ಚು ಲೀಟರ್ ಗಳಲ್ಲಿ ಬೇರೆ ಜಿಲ್ಲೆಗಳಲ್ಲಿ ಮದ್ಯ ಮಾರಾಟವಾಗುತ್ತದೆ. ಆದರೆ ಎಲ್ಲೂ ಬೇರೆ ಜಿಲ್ಲೆಗಳ ಮದ್ಯ ಮಾರಾಟದ ವರದಿ ಇಲ್ಲ. ಕೇವಲ ದ‌.ಕ ಜಿಲ್ಲೆಯ ಮದ್ಯ ಮಾರಾಟದ ಲೆಕ್ಕಾಚಾರ ಇಟ್ಟುಕೊಂಡು ಅಗ್ರಸ್ಥಾನ ಎನ್ನಲು ಬರಲ್ಲ. ಹಾಗೇನಿದ್ದರೂ ರಾಜ್ಯ ಅಬಕಾರಿ ಇಲಾಖೆ ಮಾಹಿತಿ ನೀಡುತ್ತದೆ. ಇನ್ನು ಕೆಎಸ್ ಬಿಸಿಎಲ್  ಮೂಲಕ ನಾವು ಜಿಲ್ಲೆಯ ಮದ್ಯದಂಗಡಿಗಳಿಗೆ ಮದ್ಯ ಮಾರಾಟ ಮಾಡಿದ್ದೇವೆ ನಿಜ. ಆದರೆ ಅವೆಲ್ಲವೂ ನಮ್ಮ ಮಾರಾಟದ ಲೆಕ್ಕವೇ ಹೊರತು ಗ್ರಾಹಕರಿಗೆ ತಲುಪಿದ ಲೆಕ್ಕವಲ್ಲ ಎಂದಿದ್ದಾರೆ.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

2 days ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

2 days ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

2 days ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 days ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 days ago