ತುಮಕೂರು: ಸೋಲನ್ನ ಸ್ಪೂರ್ತಿ ಎಂದು ಸ್ವೀಕಾರ ಮಾಡಬೇಕು. ಒಂದು ಸೋಲಿಗೆ ಅಂಜಬಾರದು. ಸೋತರೂ ಮತಕೊಟ್ಟ 6.9 ಲಕ್ಷ ಜನರಿಗೆ ನನ್ನ ನಮಸ್ಕಾರ. ನಾನು 15 ಚುನಾವಣೆಗೆ ನಿಂತಿದ್ದಿನಿ. ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ತುಮಕೂರಿನಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ದೈವೇಚ್ಛೆ ಏನೋ ನಡೀತದೆ. ಮಧ್ಯಂತರ ಚುನಾವಣೆ ಬರೋದು ಗ್ಯಾರಂಟಿ. ಅದಕ್ಕೆ ನೀವೆಲ್ಲಾ ತಯಾರಾಗಬೇಕು ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತ ರಿಗೆ ಜೆಡಿಎಸ್ ವರಿಷ್ಠ ದೇವೇಗೌಡರು ಕರೆ ನೀಡಿದರು. ಬಡವರ ಕಷ್ಟಕ್ಕೆ ಸ್ಪಂಧಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಹೇಳುತ್ತೆನೆ. ಅವರು ಈ ರಾಜ್ಯದ 6.5 ಕೋಟಿ ಜನರ ಮುಖ್ಯಮಂತ್ರಿ ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ, ಬಡವರಿಗೆ ಮೋಸ ಮಾಡಬಾರದು ಎಂದರು.
ಮಾಧ್ಯಮಗಳಿಂದ ಪ್ರಧಾನಿ ನರೇಂದ್ರ ಅವರು ರಾಷ್ಟ್ರಪಿತ ಆಗಿದ್ದಾರೆ. ವಿಶ್ವದಲ್ಲಿ ಗಾಂಧಿಜಿಗೆ ಮಾತ್ರ ರಾಷ್ಟ್ರಪಿತ ಅಂತಿದ್ರು. ಯಾರಿಗೂ ಆ ಪದವನ್ನು ಬಳಕೆ ಮಾಡುವ ಅಧಿಕಾರ ಇಲ್ಲ ಕಾಂಗ್ರೆಸ್ ಗೂ ಇಲ್ಲ ನನಗೂ ಇಲ್ಲ ಎಂದು ಹೇಳಿದರು. ಪಕ್ಷದ ಕಾರ್ಯಕರ್ತರೇ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ ಮುಂದೆ ನಿಮ್ಮದೆ ಸರ್ಕಾರ ಬರುತ್ತೆ ಸಿಎಂ ಯಡಿಯೂರಪ್ಪ ನವರು ಅಕ್ಟೋಬರ್ 10,11,12 ಮೂರು ದಿನ ಮಾತ್ರ ಅಧಿವೇಶನ ಇಟ್ಟುಕೊಂಡಿದ್ದಾರೆ. ಇದು ದುರಂತದ ವಿಚಾರ. ಮೂರು ದಿನಕ್ಕೆ 9 ತಿಂಗಳ ಬಜೆಟ್ ಅನುಮೋದನೆ ಮಾಡಬೇಕು ಎಂದರು.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…