Featured

ಮಧ್ಯಂತರ‌ ಚುನಾವಣೆ‌ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಯಾರಾಗಿರಬೇಕು : ಎಚ್.ಡಿ. ದೇವೇಗೌಡ -Vishwanews24

ತುಮಕೂರು: ಸೋಲನ್ನ ಸ್ಪೂರ್ತಿ ಎಂದು ಸ್ವೀಕಾರ ಮಾಡಬೇಕು. ಒಂದು ಸೋಲಿಗೆ ಅಂಜಬಾರದು. ಸೋತರೂ ಮತಕೊಟ್ಟ‌ 6.9 ಲಕ್ಷ ಜನರಿಗೆ ನನ್ನ ನಮಸ್ಕಾರ. ನಾನು 15 ಚುನಾವಣೆಗೆ ನಿಂತಿದ್ದಿನಿ. ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ತುಮಕೂರಿನಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ದೈವೇಚ್ಛೆ ಏನೋ ನಡೀತದೆ. ಮಧ್ಯಂತರ‌ ಚುನಾವಣೆ‌ ಬರೋದು ಗ್ಯಾರಂಟಿ. ಅದಕ್ಕೆ ನೀವೆಲ್ಲಾ ತಯಾರಾಗಬೇಕು ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತ ರಿಗೆ‌  ಜೆಡಿಎಸ್ ವರಿಷ್ಠ ದೇವೇಗೌಡರು ಕರೆ ನೀಡಿದರು. ಬಡವರ ಕಷ್ಟಕ್ಕೆ ಸ್ಪಂಧಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಹೇಳುತ್ತೆನೆ. ಅವರು ಈ ರಾಜ್ಯದ 6.5 ಕೋಟಿ ಜನರ ಮುಖ್ಯಮಂತ್ರಿ ನಮ್ಮಲ್ಲಿ ರಾಜಕೀಯ‌ ಭಿನ್ನಾಭಿಪ್ರಾಯ ಇರಬಹುದು. ಆದರೆ, ಬಡವರಿಗೆ ಮೋಸ‌ ಮಾಡಬಾರದು ಎಂದರು.

ಮಾಧ್ಯಮಗಳಿಂದ ಪ್ರಧಾನಿ ನರೇಂದ್ರ ಅವರು ರಾಷ್ಟ್ರಪಿತ ಆಗಿದ್ದಾರೆ. ವಿಶ್ವದಲ್ಲಿ ಗಾಂಧಿಜಿಗೆ ಮಾತ್ರ ರಾಷ್ಟ್ರಪಿತ ಅಂತಿದ್ರು. ಯಾರಿಗೂ ಆ ಪದವನ್ನು ಬಳಕೆ ಮಾಡುವ ಅಧಿಕಾರ ಇಲ್ಲ ಕಾಂಗ್ರೆಸ್ ಗೂ ಇಲ್ಲ ನನಗೂ ಇಲ್ಲ ಎಂದು ಹೇಳಿದರು. ಪಕ್ಷದ ಕಾರ್ಯಕರ್ತರೇ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ ಮುಂದೆ ನಿಮ್ಮದೆ ಸರ್ಕಾರ‌ ಬರುತ್ತೆ ಸಿಎಂ ಯಡಿಯೂರಪ್ಪ ನವರು ಅಕ್ಟೋಬರ್​​  10,11,12 ಮೂರು ದಿನ ಮಾತ್ರ ಅಧಿವೇಶನ ಇಟ್ಟುಕೊಂಡಿದ್ದಾರೆ. ಇದು ದುರಂತದ‌ ವಿಚಾರ. ಮೂರು ದಿನಕ್ಕೆ 9 ತಿಂಗಳ ಬಜೆಟ್ ಅನುಮೋದನೆ ಮಾಡಬೇಕು ಎಂದರು.

 

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

22 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

23 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

23 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

23 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

1 day ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

1 day ago