Featured

ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಕಾಂಗ್ರೆಸ್​​ಗೆ ಬಿಎಸ್​ಪಿ ಎಚ್ಚರಿಕೆ

ನವದೆಹಲಿ :  ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಕಾಂಗ್ರೆಸ್ ಗೆ ನೀಡಿರುವ ಬೆಂಬಲವನ್ನು  ಹಿಂಪಡೆಯುವುದಾಗಿ ಮಾಯಾವತಿಯ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಬೆದರಿಕೆಯೊಡ್ಡಿದೆ.

ಏಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ಸಂದರ್ಭ ಉಭಯ ರಾಜ್ಯಗಳಲ್ಲಿ ‘ಕೆಲವು ಅಮಾಯಕರ’ ಮೇಲೆ ಪ್ರಕರಣ ದಾಖಲಾಗಿದೆ. ಅವುಗಳನ್ನು ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಕೂಡಲೇ ರದ್ದುಪಡಿಸಬೇಕು. ಬಾಕಿ ಉಳಿದಿರುವ ಎಲ್ಲ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲದೇ ಹೋದಲ್ಲಿ ಬಿಎಸ್‌ಪಿ ಬೆಂಬಲವನ್ನು ಹಿಂಪಡೆಯಲಿದೆ ಎಂದು ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.

“ಹಿಂದಿನ ಬಿಜೆಪಿ ಸರ್ಕಾರಗಳು ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರಪ್ರದೇಶಗಳಲ್ಲಿ ರಾಜಕೀಯ ಹಾಗೂ ಜಾತಿಯನ್ನು ಪರಿಗಣಿಸಿಕೊಂಡು ಮುಗ್ಧ ಜನರ ವಿರುದ್ಧ ಕೇಸುಗಳನ್ನು ಜಡಿದಿತ್ತು. ಇದೀಗ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಯಾಚರಿಸುತ್ತಿದೆ. ಹಾಗಾಗಿ ತ್ವರಿತವಾಗಿ ಕಾರ್ಯಪ್ರವೃತ್ತವಾಗಿ ಆ ಪ್ರಕರಣಗಳನ್ನು ಕೈಬಿಡಬೇಕು” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಹೇಳಿದ್ದಾರೆ.

 

Vishwa News 24

Recent Posts

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು – vishwanews24

ಕಾರ್ಕಳ ಮಹಾಮಸ್ತಕಾಭಿಷೇಕ 2027 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 1.59 ಕೋಟಿ ರೂ. ಮಂಜೂರು ಉಡುಪಿ: ಕಾರ್ಕಳದಲ್ಲಿ 2027ರಲ್ಲಿ ನಡೆಯಲಿರುವ…

12 hours ago

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ – vishwanews24

ಕಾಪು: ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿ ಅಪ್ರಾಪ್ತ ಮಗಳೊಂದಿಗೆ ಮಹಿಳೆ ನಾಪತ್ತೆ ಕಾಪು: ಕ್ಷುಲ್ಲಕ ಕಾರಣಕ್ಕಾಗಿ ಪತಿಯೊಂದಿಗೆ ಜಗಳವಾಡಿ ಬಳಿಕ…

12 hours ago

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ – vishwanews24

ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದು ಒಳ್ಳೆಯದೋ? ಅಥವಾ ಕೆಟ್ಟದೋ? ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ? ಇದು ನಿಮ್ಮ…

12 hours ago

ಕಾಪು: ತಮಿಳುನಾಡು ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಬಿದ್ದು ಮೀನುಗಾರ ನಾಪತ್ತೆ – vishwanews24

ಕಾಪು: ತಮಿಳುನಾಡು ಮೂಲದ ದೋಣಿ ಡಿಕ್ಕಿ ; ಸ್ಥಳೀಯ ನಾಡದೋಣಿ ಮುಗುಚಿ ಮೀನುಗಾರ ನಾಪತ್ತೆ  ಕಾಪು: ಕಾಪು ಕಡಲ ಕಿನಾರೆಯಲ್ಲಿ…

13 hours ago

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು – vishwanews24

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…

15 hours ago

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು – vishwanews24

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…

16 hours ago