Featured

ಮನೆ ಬಾಡಿಗೆಗೆ ಕೊಡುವ ಮುನ್ನ ‘ಪೊಲೀಸ್ ಅನುಮತಿ’ ಕಡ್ಡಾಯ : ಮೈಸೂರು ಪೊಲೀಸರಿಂದ ನೂತನ ನಿಯಮ ಜಾರಿಗೆ  – Vishwanews24

ಮನೆ ಬಾಡಿಗೆಗೆ ಕೊಡುವ ಮುನ್ನ ‘ಪೊಲೀಸ್ ಅನುಮತಿ’ ಕಡ್ಡಾಯ : ಮೈಸೂರು ಪೊಲೀಸರಿಂದ ನೂತನ ನಿಯಮ ಜಾರಿಗೆ  – ನಿಯಮ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಖಡಕ್ ಆದೇಶ

ಮೈಸೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಬೆನ್ನಲ್ಲೇ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದ್ದು, ಮೈಸೂರಿನಲ್ಲಿ ನೂತನ ನಿಯಮ ಜಾರಿಗೆ ತಂದಿದೆ.

ಮೈಸೂರು ನಗರ ಪೊಲೀಸರು ಈ ನೂತನ ನಿಯಮ ಜಾರಿಗೆ ತಂದಿದ್ದಾರೆ.

ಬಾಡಿಗೆ ಮನೆ ನೀಡಬೇಕು ಎಂದಾದರೆ ಮೊದಲು ಹತ್ತಿರದ ಪೊಲೀಸ್ ಠಾಣೆಯಲ್ಲಿ 100 ರೂ ಪಾವತಿ ಮಾಡಿ ಅರ್ಜಿ ಪಡೆದು ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ. ಅದೇ ರೀತಿ ಬ್ಯಾಚುಲರ್ ಹಾಗೂ ಕುಟುಂಬವರಿಗೆ ಪಿಜಿ ಕೊಡುವವರಿಗೆ ಕೂಡ ಪ್ರತ್ಯೇಕ ಅರ್ಜಿ ಮೀಸಲು ಇರಿಸಲಾಗಿದೆ.

ಬಾಡಿಗೆ ಕೊಡುವ ಮುನ್ನ ಸಮೀಪದ ಪೊಲೀಸ್ ಠಾಣೆಗೆ ವಿಷಯ ತಿಳಿಸಿ ಬಾಡಿಗೆ ಇರುವವರ ಮಾಹಿತಿಯನ್ನು ಠಾಣೆಗೆ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಎಲ್ಲಾ ಠಾಣೆಗಳಲ್ಲಿ ಕಟ್ಟು ನಿಟ್ಟಾಗಿ ಈ ನಿಯಮ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ರಮೇಶ್ ಖಡಕ್ ಆದೇಶ ಹೊರಡಿಸಿದ್ದಾರೆ.

ಇನ್ನೂ, ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವನ್ನು ಇಂದು ರಾಷ್ಟ್ರೀಯ ತನಿಖಾ ದಳ (NIA) ತನಿಖೆ ಆರಂಭಿಸಲಿದ್ದು, ಈಗಾಗಲೇ ಎಫ್ ಐಆರ್ ದಾಖಲಿಸಿದೆ.

ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಯೋತ್ಪಾದನೆ ಸಂಘಟನೆ ಪಾತ್ರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದೆ. ಪ್ರಕರಣದಲ್ಲಿ ಮಹಮದ್ ಶಾರೀಕ್ ನನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಐಸಿಸ್ ಪ್ರೇರಿತ ಅಲ್ ಹಿಂದ ಸಂಘಟನೆಯ ಮೊಹಮ್ಮದ್ ಮತೀನ್ ತಾಹಾನ ಸೂಚನೆ ಮತ್ತು ಸಂಪರ್ಕದ ಮೇರೆಗೆ ಶಾರೀಕ್ ಉಗ್ರ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಇಂದಿನಿಂದ ಮಂಗಳೂರಿನಲ್ಲಿ ಎನ್ ಐಎ ತನಿಖೆ ಆರಂಭವಾಗಲಿದೆ.

 

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

17 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

17 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

17 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

18 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

18 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

18 hours ago