Featured

ಮಲಯಾಳಂ ನಟ ಕ್ಯಾಪ್ಟನ್ ರಾಜು ನಿಧನ

ಕೊಚ್ಚಿ, ಸೆ.17: ಮಲಯಾಳಂನ ಖ್ಯಾತ ನಟ ಕ್ಯಾಪ್ಟನ್ ರಾಜು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. 68 ವರ್ಷ ವಯಸ್ಸಿನ ನಟ ಕೊಚ್ಚಿಯಲ್ಲಿ ತನ್ನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆಲವೇ ತಿಂಗಳ ಹಿಂದೆ ಅಮೆರಿಕಕ್ಕೆ ವಿಮಾನದಲ್ಲಿ ತೆರಳುತ್ತಿದ್ದ ವೇಳೆಯೇ ರಾಜು ಅವರಿಗೆ ಪಾರ್ಶ್ವವಾಯು ಬಾಧಿಸಿತ್ತು. ರಾಜು ಅವರ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿದ ವಿಮಾನದ ಸಿಬ್ಬಂದಿಗಳು ವಿಮಾನದ ದಿಕ್ಕನ್ನು ಬದಲಿಸಿ ಮಸ್ಕತ್‌ನಲ್ಲಿ ಇಳಿಸಿದ್ದರು. ಕುಟುಂಬದವರ ಕೋರಿಕೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ನಟನನ್ನು ಮಸ್ಕತ್‌ನಿಂದ ಕೊಚ್ಚಿಗೆ ಸ್ಥಳಾಂತರಿಸಲಾಗಿತ್ತು.

ಕ್ಯಾಪ್ಟನ್ ರಾಜು 1981ರಲ್ಲಿ ಭಾರತೀಯ ಸೇನೆಯನ್ನು ತ್ಯಜಿಸಿ ನಟನಾ ವೃತ್ತಿಯನ್ನು ಆರಂಭಿಸಿದ್ದರು. ಇವರು 500ಕ್ಕೂ ಚಿತ್ರಗಳಲ್ಲಿ ನಟಿಸಿದ್ದು ,2017ರಲ್ಲಿ ‘ಮಾಸ್ಟರ್‌ಪೀಸ್’ ಎಂಬ ಚಿತ್ರದಲ್ಲಿ ಕೊನೆಯ ಬಾರಿ ನಟಿಸಿದ್ದರು.

ಮೃತ ನಟ ರಾಜು ಅವರು ಪತ್ನಿ ಪ್ರಮೀಳಾ ಹಾಗೂ ಪುತ್ರ ರವಿ ಅವರನ್ನು ಅಗಲಿದ್ದಾರೆ.

Vishwa News 24

Recent Posts

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ -vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಪದ್ಮಶ್ರೀ ಆರ್‌.ಎಂ.ಬಿ. ಆರಾಧ್ಯ…

25 minutes ago

ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ -vishwanews24

ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ ಉಡುಪಿ: ಮಗುವಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು…

43 minutes ago

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

3 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

3 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

3 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

3 days ago