ಮಲ್ಪೆ: ಮೂರ್ನಾಲ್ಕು ದಿನಗಳಿಂದ ಆಳಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಮೀನುಗಾರಿಕೆಗೆ ಅಡ್ಡಿಯಾಗಿದೆ.
ಭಾರೀ ಗಾಳಿ ಬೀಸುತ್ತಿರುವುದರಿಂದ ಕೆಲವು ಮೀನುಗಾರರು ಕಡಲಿಗಿಳಿಲು ಹಿಂದೇಟು ಹಾಕುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಆಳಸಮುದ್ರ ದಲ್ಲಿ ಉತ್ತರದಿಂದ ಬಲವಾದ ಗಾಳಿ ಬೀಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡು- ಮೂರು ದಿನಗಳಿಂದ ಮಲ್ಪೆ ಬಂದರಿನಲ್ಲಿ ಬಹುತೇಕ ಎಲ್ಲ ಪರ್ಸಿನ್ ಬೋಟುಗಳು ಲಂಗರು ಹಾಕಿವೆ. ಟ್ರಾಲ್ಬೋಟ್ (370), ಸಣ್ಣ ಟ್ರಾಲ್ ಬೋಟುಗಳು ದಡದತ್ತ ಧಾವಿಸಿದ್ದು, ಮತ್ತೆ ಮೀನುಗಾರಿಕೆಗೆ ತೆರಳಿಲ್ಲ.
ಮೀನುಗಾರ ಕೃಷ್ಣ ಎಸ್. ಸುವರ್ಣ ಹೇಳುವಂತೆ, ಈ ಸಮಯದಲ್ಲಿ ಸಮುದ್ರದಲ್ಲಿ ಗಾಳಿ ತಾಸಿಗೆ ಹೆಚ್ಚೆಂದರೆ 15ರಿಂದ 20 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದರೆ ಮೀನುಗಾರಿಕೆಗೆ ತೆರಳಬಹುದು. ಆದರೆ ಈಗ ತಾಸಿಗೆ 35-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರಿಕೆ ನಡೆಸುವುದು ಅಪಾಯಕಾರಿ. ಅಲೆಗಳ ಅಬ್ಬರವೂ ಇರುವುದರಿಂದ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಚ್ಚಿನ ಬೋಟುಗಳು ಮೀನುಗಾರಿಕೆ ನಡೆಸಲಾಗದೆ ಸಮುದ್ರ ಮಧ್ಯೆ ಲಂಗರು ಹಾಕಿವೆ. ಇನ್ನು ಕೆಲವು ಆಳಸಮುದ್ರ ಬೋಟುಗಳು ಸಮೀಪದ ಬಂದರು ಪ್ರವೇಶಿಸಿವೆ .ಅಪಾಯವನ್ನು ಅರಿತು ಗಾಳಿ ಕಡಿಮೆಯಾಗುವವರೆಗೆ ಪರ್ಸಿನ್ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ತಿಳಿಸಿದ್ದಾರೆ.
ಮೀನು ಧಾರಣೆ ಹೆಚ್ಚಳ
ಪ್ರಸ್ತುತ ಮೀನಿಗೆ ಬೇಡಿಕೆ ಇದ್ದರೂ ಬೇಕಾದಷ್ಟು ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಗಾಳಿ ಅಡ್ಡಿಯಾಗುವುದರಿಂದ ಮೀನುಗಾರಿಕೆಗೆ ತೆರಳಿದರೂ ಮೀನು ಸಿಗದೆ ಬರಿಗೈಯಲ್ಲಿ ವಾಪಸಾಗುವ ಪರಿಸ್ಥಿತಿ ಇದೆ ಎಂದು ಮೀನುಗಾರ ಕಾರ್ಮಿಕರು ಹೇಳಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೀನು ಲಭ್ಯತೆ ಕಡಿಮೆಯಾಗಿದ್ದು, ದರ ಏರಿದೆ.
ಮೂರು ದಿನಗಳಿಂದ ಸಮುದ್ರ ಮಧ್ಯೆ ಒಂದೇ ಸವನೆ ಬಲವಾದ ಗಾಳಿ ಬೀಸುತ್ತಿದ್ದು, ಮೀನುಗಾರಿಕೆ ನಡೆಸಲಾಗದೆ ಮಲ್ಪೆಯ ಬಹುತೇಕ ಬೋಟುಗಳು ವಾಪಸಾಗಿವೆ. ಆಳಸಮುದ್ರ ಬೋಟುಗಳಲ್ಲಿ ಕೆಲವು ಸಮುದ್ರ ಮಧ್ಯೆ ಲಂಗರು ಹಾಕಿದ್ದರೆ, ಇನ್ನು ಕೆಲವು ಸಮೀಪದ ಬಂದರು ಪ್ರವೇಶಿಸಿವೆ.
-ರತ್ನಾಕರ ಸಾಲ್ಯಾನ್, ಪ್ರ. ಕಾರ್ಯದರ್ಶಿ, ಮಲ್ಪೆ ಮೀನುಗಾರರ ಸಂಘ
ಗಾಳಿಯಿಂದಾಗಿ ಅಲೆಗಳಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದ್ದು ಮೀನುಗಾರ ರಿಗೆ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ. ಶೇ. 40ರಷ್ಟು ಬೋಟುಗಳು ಮಲ್ಪೆ ಬಂದರಿಗೆ ವಾಪಸಾಗಿವೆ. ಒಂದೆರಡು ದಿನಗಳಲ್ಲಿ ಗಾಳಿ ಕಡಿಮೆಯಾಗುವ ಲಕ್ಷಣವಿದೆ.
-ಶಿವಕುಮಾರ್, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ
ಉಡುಪಿ : ಅಕ್ಕ ಕೆಫೆ ನಿರ್ವಹಣೆ ; ಏ. 13 ರಂದು ನೇರ ಸಂದರ್ಶನ ಉಡುಪಿ : ರಾಷ್ಟ್ರೀಯ ಗ್ರಾಮೀಣ…
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವೀತಿಯ ಬೆಂಗಳೂರು: 2025-26ನೇ ಸಾಲಿನ ದ್ವೀತಿಯ…
ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ .. ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ ಬೆಂಗಳೂರು: ಕೇರಳ…
ಮಂಗಳೂರು : ಗುರುಪುರ ಬಳಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ; ಬಸ್ ಚಾಲಕನಿಗೆ ಗಂಭೀರ ಗಾಯ ಮಂಗಳೂರು:…
ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ…
ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್…