Featured

ಮಲ್ಪೆ: ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ಅಡ್ಡಿ – Vishwanews24

ಮಲ್ಪೆ: ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ಅಡ್ಡಿ

ಮಲ್ಪೆ: ಮೂರ್ನಾಲ್ಕು ದಿನಗಳಿಂದ ಆಳಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಮೀನುಗಾರಿಕೆಗೆ ಅಡ್ಡಿಯಾಗಿದೆ.

ಭಾರೀ ಗಾಳಿ ಬೀಸುತ್ತಿರುವುದರಿಂದ ಕೆಲವು ಮೀನುಗಾರರು ಕಡಲಿಗಿಳಿಲು ಹಿಂದೇಟು ಹಾಕುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಆಳಸಮುದ್ರ ದಲ್ಲಿ ಉತ್ತರದಿಂದ ಬಲವಾದ ಗಾಳಿ ಬೀಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎರಡು- ಮೂರು ದಿನಗಳಿಂದ ಮಲ್ಪೆ ಬಂದರಿನಲ್ಲಿ ಬಹುತೇಕ ಎಲ್ಲ ಪರ್ಸಿನ್‌ ಬೋಟುಗಳು ಲಂಗರು ಹಾಕಿವೆ. ಟ್ರಾಲ್‌ಬೋಟ್‌ (370), ಸಣ್ಣ ಟ್ರಾಲ್‌ ಬೋಟುಗಳು ದಡದತ್ತ ಧಾವಿಸಿದ್ದು, ಮತ್ತೆ ಮೀನುಗಾರಿಕೆಗೆ ತೆರಳಿಲ್ಲ.

ಮೀನುಗಾರ ಕೃಷ್ಣ ಎಸ್‌. ಸುವರ್ಣ ಹೇಳುವಂತೆ, ಈ ಸಮಯದಲ್ಲಿ ಸಮುದ್ರದಲ್ಲಿ ಗಾಳಿ ತಾಸಿಗೆ ಹೆಚ್ಚೆಂದರೆ 15ರಿಂದ 20 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದರೆ ಮೀನುಗಾರಿಕೆಗೆ ತೆರಳಬಹುದು. ಆದರೆ ಈಗ ತಾಸಿಗೆ 35-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರಿಕೆ ನಡೆಸುವುದು ಅಪಾಯಕಾರಿ. ಅಲೆಗಳ ಅಬ್ಬರವೂ ಇರುವುದರಿಂದ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಚ್ಚಿನ ಬೋಟುಗಳು ಮೀನುಗಾರಿಕೆ ನಡೆಸಲಾಗದೆ ಸಮುದ್ರ ಮಧ್ಯೆ ಲಂಗರು ಹಾಕಿವೆ. ಇನ್ನು ಕೆಲವು ಆಳಸಮುದ್ರ ಬೋಟುಗಳು ಸಮೀಪದ ಬಂದರು ಪ್ರವೇಶಿಸಿವೆ .ಅಪಾಯವನ್ನು ಅರಿತು ಗಾಳಿ ಕಡಿಮೆಯಾಗುವವರೆಗೆ ಪರ್ಸಿನ್‌ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್‌ ಸುವರ್ಣ ತಿಳಿಸಿದ್ದಾರೆ.

ಮೀನು ಧಾರಣೆ ಹೆಚ್ಚಳ
ಪ್ರಸ್ತುತ ಮೀನಿಗೆ ಬೇಡಿಕೆ ಇದ್ದರೂ ಬೇಕಾದಷ್ಟು ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಗಾಳಿ ಅಡ್ಡಿಯಾಗುವುದರಿಂದ ಮೀನುಗಾರಿಕೆಗೆ ತೆರಳಿದರೂ ಮೀನು ಸಿಗದೆ ಬರಿಗೈಯಲ್ಲಿ ವಾಪಸಾಗುವ ಪರಿಸ್ಥಿತಿ ಇದೆ ಎಂದು ಮೀನುಗಾರ ಕಾರ್ಮಿಕರು ಹೇಳಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೀನು ಲಭ್ಯತೆ ಕಡಿಮೆಯಾಗಿದ್ದು, ದರ ಏರಿದೆ.

ಮೂರು ದಿನಗಳಿಂದ ಸಮುದ್ರ ಮಧ್ಯೆ ಒಂದೇ ಸವನೆ ಬಲವಾದ ಗಾಳಿ ಬೀಸುತ್ತಿದ್ದು, ಮೀನುಗಾರಿಕೆ ನಡೆಸಲಾಗದೆ ಮಲ್ಪೆಯ ಬಹುತೇಕ ಬೋಟುಗಳು ವಾಪಸಾಗಿವೆ. ಆಳಸಮುದ್ರ ಬೋಟುಗಳಲ್ಲಿ ಕೆಲವು ಸಮುದ್ರ ಮಧ್ಯೆ ಲಂಗರು ಹಾಕಿದ್ದರೆ, ಇನ್ನು ಕೆಲವು ಸಮೀಪದ ಬಂದರು ಪ್ರವೇಶಿಸಿವೆ.
-ರತ್ನಾಕರ ಸಾಲ್ಯಾನ್‌, ಪ್ರ. ಕಾರ್ಯದರ್ಶಿ, ಮಲ್ಪೆ ಮೀನುಗಾರರ ಸಂಘ

ಗಾಳಿಯಿಂದಾಗಿ ಅಲೆಗಳಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದ್ದು ಮೀನುಗಾರ ರಿಗೆ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ. ಶೇ. 40ರಷ್ಟು ಬೋಟುಗಳು ಮಲ್ಪೆ ಬಂದರಿಗೆ ವಾಪಸಾಗಿವೆ. ಒಂದೆರಡು ದಿನಗಳಲ್ಲಿ ಗಾಳಿ ಕಡಿಮೆಯಾಗುವ ಲಕ್ಷಣವಿದೆ.
-ಶಿವಕುಮಾರ್‌, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

3 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

4 hours ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

5 hours ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

5 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

5 hours ago