ಉಡುಪಿ: ಕರಾವಳಿಯಲ್ಲಿ ಸಾಂಪ್ರದಾಯಕವಾಗಿ ನಡೆಸುವ ಕೈರಂಪಣಿ ಮೀನುಗಾರರಿಗೆ ಬಂಪರ್ ಫಸಲು ದೊರೆತಿದೆ. ಉಡುಪಿಯ ಪಡುಕೆರೆಯಲ್ಲಿ ಭರಪೂರ ಮೀನುಗಳು ಬಲೆಗೆ ಬಿದ್ದಿವೆ. ಲಕ್ಷಾಂತರ ರೂಪಾಯಿಯ ಭೂತಾಯಿ ಮೀನು ಬಲೆಗೆ ಬಿದ್ದು ಮೀನುಗಾರರಿಗೆ ಲಾಟರಿ ಹೊಡೆದಂತಾಗಿದೆ.
ಸಾಮಾನ್ಯ ವಾಗಿ ಕೈರಂಪಣಿ ಮೀನುಗಾರಿಕೆ ನಡೆಸುವ ಬಡ ಮೀನುಗಾರರು , ಕಾರ್ಮಿಕರು 10 ರಿಂದ 15 ಜನರ ತಂಡ ಕಟ್ಟಿಕೊಂಡು ಕೈರಂಪಣಿ ಮೀನುಗಾರಿಕೆಯನ್ನು ನಡೆಸುತ್ತಾರೆ. ಸಮುದ್ರ ತೀರದಿಂದ 2 ರಿಂದ 3 ನಾಟಿಕಲ್ ದೂರವರೆಗೆ ಕೈರಂಪಣಿ ಬಲೆಹಾಕಿ ಮೀನುಗಾರಿಕೆಯನ್ನು ನಡೆಸುತ್ತಾರೆ.
ಸಣ್ಣ ದೋಣಿಗಳ ಮೂಲಕ ಸಾಗಿ ಬಲೆ ಬೀಸಿ ಕೆಲವು ಗಂಟೆಗಳ ನಂತರ ದಡದಿಂದಲೇ ಬಲೆಯನ್ನು ಎಳೆಯುತ್ತಾರೆ. ಆದರೆ ಶ್ರಮಕ್ಕೆ ತಕ್ಕ ಪ್ರತಿಫಲದೊರಕುವುದು ಅಪರೂಪ. ಆದರೆ ಮಲ್ಪೆಯ ಪಡುಕೆರೆ ಬೀಚ್ ನಲ್ಲಿ ಕೈರಂಪಣಿ ಬಲೆ ಬೀಸಿದ ಮೀನುಗಾರರ ಅದೃಷ್ಟ ಕುಲಾಯಿಸಿತ್ತು. ಬೂತಾಯಿ ಮೀನುಗಳ ಗುಂಪು ಕೈರಂಪಣಿ ಬಲೆ ಬಿದ್ದಿದೆ. ಕೈರಂಪಣಿ ಮೀನುಗಾರಿಗೆ ಒಂದು ದಿನದ ಮಟ್ಟಿಗೆ ಜೇಬು ತುಂಬವ ಸಂಪಾದನೆ ಯಾದ್ರೆ ತಾಜಾ ಮೀನು ತಿನ್ನ ಬೇಕು ಅನ್ನೊ ಮೀನು ಪ್ರಿಯರಿಗೆ ರುಚಿ ರುಚಿಯಾದ ತಾಜಾ ಬೂತಾಯಿ ಮೀನು ದೊರಕಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…