Featured

ಮಲ್ಪೆ: ತನ್ನ ಸಾವಿಗೆ ನಾನೇ ಕಾರಣ ಎಂದು ಸೂಸೈಡ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ – Vishwanews24

ಮಲ್ಪೆ: ತನ್ನ ಸಾವಿಗೆ ನಾನೇ ಕಾರಣ ಎಂದು ಸೂಸೈಡ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಉಡುಪಿ: ತಾಲೂಕಿನ ನೇಜಾರು ನಿಡಂಬಳ್ಳಿ ಎಂಬಲ್ಲಿಂದ ಅ.18ರಂದು ರಾತ್ರಿ ನಾಪತ್ತೆಯಾಗಿದ್ದ 44ವರ್ಷದ ಪ್ರವೀಣ್ ಬೆಳ್ಚಾಡ ಎಂಬವರ ಮೃತದೇಹ ಹತ್ತು ದಿನ ಬಳಿಕ ಬ್ರಹ್ಮಾವರ ತಾಲೂಕಿನ ಹಂದಾಡಿ ಕಂಬಳ ಗದ್ದೆಯ ಹೊಳೆ ಬದಿಯಲ್ಲಿ ಇಂದು ಪತ್ತೆಯಾಗಿದೆ.

ಇವರು ನೇಜಾರಿನ ಬಂಗ್ಲೆ ಮನೆ ಬಳಿಯಲ್ಲಿ ಸ್ವಂತ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪತ್ನಿಯಿಂದ ವಿಚ್ಛೇದನ ಪಡೆದು ಒಬ್ಬಂಟಿಯಾಗಿ ವಾಸವಾಗಿದ್ದರು‌. ಇವರು ಪ್ರತಿ ದಿನ ಊಟ, ಉಪಹಾರಕ್ಕೆ ಮನೆ ಸಮೀಪದ ದೊಡ್ಡಮ್ಮನ ಮನೆಗೆ ಹೋಗುತ್ತಿದ್ದರು. ಅ. 18ರಂದು ರಾತ್ರಿ ದೊಡ್ಡಮ್ಮನ ಮಗಳು ಜಯಂತಿ ಎಂಬವರು ಪ್ರವೀಣ್ ಅವರಿಗೆ ಕರೆ ಮಾಡಿ ಊಟಕ್ಕೆ ಬರುವಂತೆ ಹೇಳಿದ್ದರು. 10-15 ನಿಮಿಷದಲ್ಲಿ ಬರುತ್ತೇನೆ ಇಲ್ಲದಿದ್ದರೆ, ಬೆಳಿಗ್ಗೆ ತಿಂಡಿ ತಿನ್ನಲು ಬರುತ್ತೇನೆ ಎಂದು ತಿಳಿಸಿದ್ದರು. ಅಂದು ಊಟಕ್ಕೆ ಬಂದಿರಲಿಲ್ಲ. ಅ. 19ರಂದು ಬೆಳಿಗ್ಗೆ 8ಗಂಟೆಗೆ ಜಯಂತಿ ಅವರು ಕರೆ ಮಾಡಿದಾಗ ಪ್ರವೀಣ್ ಅವರ ಮೊಬೈಲ್ ಸ್ವೀಚ್ ಆಫ್ ಆಗಿತ್ತು.

ಮಂಗಳೂರು: FLIPKART ನಿಂದ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಬಂದದ್ದು ದೊಡ್ಡ ಕಲ್ಲು – Vishwanews24

ಎರಡು ದಿನಗಳ ಬಳಿಕ ಬ್ರಹ್ಮಾವರ ಸೇತುವೆಯ ಪ್ರವೀಣ್ ಸ್ಕೂಟರ್ ಪತ್ತೆಯಾಗಿತ್ತು. ಆ ಬಳಿಕ ಪ್ರವೀಣ್ ಗಾಗಿ ಅಗ್ನಿಶಾಮಕ ದಳ, ಪೊಲೀಸರ ಸಹಕಾರದೊಂದಿಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಆದರೆ ಪ್ರವೀಣ್ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಹಂದಾಡಿ ಕಂಬಳ ಗದ್ದೆಯ ಹೊಳೆ ಬದಿಯಲ್ಲಿ ಪ್ರವೀಣ್ ಮೃತದೇಹ ಪತ್ತೆಯಾಗಿದೆ. ಪ್ರವೀಣ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

1 day ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

2 days ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

2 days ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

2 days ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

2 days ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

2 days ago