ಮಲ್ಪೆ : ದೇಶದ ಅತೀ ದೊಡ್ಡ ಬಂದರುಗಳಲ್ಲಿ ಎರಡನೇ ಸ್ಥಾನದಲ್ಲಿರುವ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಹೂಳು ಕೂಡ ತುಂಬಿಕೊಂಡಿರುವುದರಿಂದ ಬೋಟಿನ ಲಂಗರು ಮತ್ತು ಸಂಚಾರಕ್ಕೆ ತೊಂದರೆಯಾಗುತ್ತಿರುವುದಲ್ಲದೆ ಮೀನುಗಾರರ ಜೀವಗಳನ್ನು ಆಪೋಶನ ತೆಗೆದುಕೊಳ್ಳುವ ಮೂಲಕ ಮರಣ ಮೃದಂಗ ಬಾರಿಸುತ್ತಿದೆ.
7-8 ವರ್ಷಗಳಿಂದ ಸಮರ್ಪಕವಾಗಿ ಹೂಳೆತ್ತದೇ ಇರುವುದರಿಂದ ದಿನದಿಂದ ದಿನಕ್ಕೆ ಸಮಸ್ಯೆ ಗಂಭೀರವಾಗುತ್ತಿದೆ.
ಮರಣ ಗುಂಡಿ
ಮೀನುಗಾರರರಿಗೆ ಸಮುದ್ರ ಕ್ಕಿಂತ ಬಂದರು ಹೆಚ್ಚು ಅಪಾಯ ಕಾರಿ ಎಂದೆನಿಸಿದೆ. ನಿಲ್ಲಿಸಿರುವ ಬೋಟಿ ನಿಂದ ಬೋಟಿಗೆ ದಾಟುವಾಗ ಆಯ ತಪ್ಪಿ ನೀರಿಗೆ ಬಿದ್ದರೆ ಬದುಕಿ ಉಳಿಯುವ ಧೈರ್ಯ ಇಲ್ಲ. ಆಳೆತ್ತರಕ್ಕೆ ಕೆಸರು ತುಂಬಿಕೊಂಡಿರುವುದರಿಂದ ಬಿದ್ದಾತ ದೇಹ ಮೇಲೆ ಬರಲಾರದ ಸ್ಥಿತಿ ಇದೆ. ನಿರಂತರವಾಗಿ ಜೀವ ಹಾನಿಯಾಗುತ್ತಿದ್ದರೂ ಆಡಳಿತ ಮಾತ್ರ ತೆಪ್ಪಗೆ ಕುಳಿತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಹಿಜಾಬ್ ವಿವಾದ : ವಿಸ್ತೃತ ಪೀಠದ ತೀರ್ಪಿನ ಅಗತ್ಯವಿದೆ : ಪ್ರಮೋದ್ ಮುತಾಲಿಕ್ – Vishwanews24
ಎಷ್ಟು ಹೂಳು ತೆರವಾಗಬೇಕು?
1, 2 ಮತ್ತು 3ನೇ ಹಂತದ ಜೆಟ್ಟಿಯಲ್ಲಿ ಹೂಳು ತುಂಬಿಕೊಂಡಿದೆ. ನೀರು ಇಳಿತದ ಸಂದರ್ಭದಲ್ಲಿ ಬೋಟನ್ನು ಒಳಗೆ ತರಲು ಸಾಧ್ಯ ವಾಗುತ್ತಿಲ್ಲ. ಬಾಪುತೋಟ ಪ್ರದೇಶ ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದು, 1 ಮತ್ತು 2ನೇ ಜೆಟ್ಟಿಯಲ್ಲಿ ಮೀನು ಖಾಲಿ ಮಾಡಿ 3ನೇ ಜೆಟ್ಟಿಗೆ ಬೋಟುಗಳು ತೆರಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಮಲ್ಪೆ ಬಂದರಿನಲ್ಲಿ ದೊಡ್ಡ ಗಾತ್ರದ ಬೋಟ್‌ಗಳೇ ಇದ್ದು, ಅವುಗಳ 3 ಮೀಟರ್ ಭಾಗ ನೀರಿ ನಲ್ಲಿ ಮುಳುಗಿರುತ್ತದೆ. ಮತ್ತೂ ಎರಡೂವರೆ ಮೀ.ನಷ್ಟು ಆಳದ ವರೆಗೆ ಹೂಳೆತ್ತಿದರೆ ಮಾತ್ರ ಸಂಚಾರ ಸುಗಮವಾದೀತು ಎನ್ನುತ್ತಾರೆ ಮೀನುಗಾರರು.
ಅಧಿಕಾರಿಗಳೇ ಜೀವ ಉಳಿಸಿ
ಇಲ್ಲಿ 5 ವರ್ಷಗಳಲ್ಲಿ 100ಕ್ಕೂ ಅಧಿಕ ಮಂದಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ತುಂಬಿರುವ ಹೂಳಿನ ಅಡಿಗೆ ಹೋದವರು ಮೇಲೆ ಬರುವ ಸಾಧ್ಯತೆ ಕಡಿಮೆ. ಎರಡು ತಿಂಗಳ ಅವಧಿಯಲ್ಲೇ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೆಟ್ಟಿಯಲ್ಲಿ ಕೆಟ್ಟುನಿಂತ ಹಲವಾರು ಬೋಟುಗಳಿವೆ. ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಜತೆಗೆ ಶೀಘ್ರ ಹೂಳೆತ್ತಿದರೆ ಮೀನುಗಾರರ ಪ್ರಾಣ ಉಳಿಸಬಹುದು ಎನ್ನುತ್ತಾರೆ ಮುಳುಗು ತಜ್ಞ ಈಶ್ವರ ಮಲ್ಪೆ. .
ಇಲ್ಲಿ ಸಾಕಷ್ಟು ಅವಘಡಗಳು ಆಗುತ್ತಲೇ ಇವೆ. ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಇದೀಗ ಅನುದಾನ ಬಿಡುಗಡೆಯಾಗಿದೆ. ಅತೀ ಶೀಘ್ರದಲ್ಲಿ ಮೀನುಗಾರರ ಸಮಸ್ಯೆಯನ್ನು ಬಗೆಹರಿಸಬೇಕು.
– ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ
ಹೂಳೆತ್ತಲು ಸರಕಾರದ ಅನುಮೋದನೆ ಸಿಕ್ಕಿದೆ. 3 ಕೋ.ರೂ. ಅನುದಾನ ದೊರಕಿದೆ. ಚನೆಲ್ ಮತ್ತು 3 ಹಂತದ ಜೆಟ್ಟಿಗಳಲ್ಲಿ ಹೂಳೆತ್ತುವಿಕೆ ನಡೆಯಲಿದೆ. 2 ತಿಂಗಳೊಳಗೆ ಎಲ್ಲ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ.
– ಉದಯ ಕುಮಾರ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್, ಬಂದರು ಇಲಾಖೆ
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…